Bigg Boss : ಪಾಸಿಟಿವಿಟಿ ಬದಿಗೊತ್ತಿ ರಜತ್ ಮೇಲೆ ರೊಚ್ಚಿಗೆದ್ದ ಗೌತಮಿ; ಗೌತಮಿನ ಬಕೆಟ್ ಎಂದ ರಜತ್

Written by Soma Shekar

Published on:

---Join Our Channel---

Bigg Boss Kannada : ಬಿಗ್ ಬಾಸ್ (Bigg Boss Kannada) ಮನೇಲಿ ಪಾಸಿಟಿವಿಟಿಗೆ ಹೆಸರಾದವರು ನಟಿ ಗೌತಮಿ (Gouthami). ಆದರೆ ಇದು ಅವರ ಮುಖವಾಡ ಅನ್ನೋದು ಅನೇಕರ ಮಾತಾಗಿದೆ.‌ ಆರಂಭದಿಂದಲೂ ಯಾರ ಮೇಲೂ ಕೋಪ ಮಾಡಿಕೊಳ್ಳದೇ, ಜಗಳಕ್ಕೆ ಇಳಿಯದೇ ಇರುವ ಗೌತಮಿ ಕೊನೆಗೂ ತಮ್ಮ ತಾಳ್ಮೆ ಯನ್ನು ಕಳೆದುಕೊಂಡಿರೋ ಹಾಗೆ ಕಂಡಿದೆ. ಬಿಗ್ ಬಾಸ್ ಮನೆಯಲ್ಲಿ ಗೌತಮಿ ಮತ್ತು ರಜತ್ ನಡುವೆ ಮಾತಿನ ಚಕಮಕಿ ನಡೆದಿದೆ.

ಪ್ರೊಮೋದಲ್ಲಿ ರಜತ್ (Rajath) ಗೌತಮಿನ ಬಕೆಟ್ ಅಂತ ಕರೆದಿರೋದು ಕಂಡಿದೆ. ಬಿಗ್ ಬಾಸ್ ಮನೇಲಿ ರಜತ್ ಮತ್ತು ಗೌತಮಿ ನಡುವೆ ಜಗಳ ನಡೆದಿದೆ. ಮನೆಯನ್ನು ಕ್ಲೀನ್ ಮಾಡೋ ಕೆಲಸವನ್ನು ಬಿಗ್ ಬಾಸ್ ನೀಡಿದ್ರು. ಈ ವೇಳೆ ಕೆಲಸ ಮಾಡದೇ ಕೂತಿದ್ದ‌ ರಜತ್ ನ ನೋಡಿ ಗೌತಮಿ ಡೈಲಾಗ್ ಹೊಡೆಯೊದು, ಹಣ್ಣು ತಿನ್ನೋದು ಸುಮ್ನೆ ಕೂರೋದು ಅಂತ ಡೈಲಾಗ್ ಹೊಡೆದಿದ್ದಾರೆ.

ಇದರಿಂದ ರಜತ್ ಸಿಟ್ಟಾಗಿ ಗೌತಮಿಗೆ ಹನ್ನೆರಡು ವಾರ ಡೈಲಾಗ್ ಹೊಡ್ಕೊಂಡು ಬಂದು ಬಿಟ್ಟೆ‌‌ ಬಿಡು ಅಂದಿದ್ದು ಮಾತ್ರವಲ್ಲ, ಕೈಯಲ್ಲಿ ಬಕೆಟ್ ಹಿಡ್ಕೊಂಡಿದ್ದ ಗೌತಮಿನ ನೋಡಿದ ರಜತ್, ಒಂದು ಬಕೆಟ್ ಇನ್ನೊಂದು ಬಕೆಟ್ ಹಿಡ್ಕೊಂಡಿದ್ದನ್ನ ಇವತ್ತೇ ನೋಡಿದ್ದು ಅಂತಾನೂ ಹೇಳಿದ್ದಾರೆ.

ಹೀಗೆ ಮಾತಿಗೆ ಮಾತು ಬೆಳೆದಾಗ ತಾಕತ್ತಿದ್ರೆ ಇಂಡುವಿಜಿಯಲ್ ಆಗಿ ಆಡು, ಒಬ್ರ ಕಾಲು ಹಿಡ್ಕೊಂಡು ಇಲ್ಲಿವರೆಗೆ ಬಂದಿದ್ಧೀಯಾ ಅಂತಾನೂ ರಜತ್ ಗೌತಮಿ ಮೇಲೆ ಸಿಟ್ಟಾಗಿದ್ದಾರೆ. ಒಟ್ಟಿನಲ್ಲಿ ಮೊದಲ ಸಲ ಗೌತಮಿ ಕೂಡಾ ಪಾಸಿಟಿವಿಟಿಯನ್ನ ಬದಿಗೊತ್ತಿ ಜಗಳಕ್ಕೆ ಇಳಿದಿರೋದು ಕಾಣ್ತಿದೆ.

Leave a Comment