Bigg Boss Kannada : ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಅದ್ಯಾಕೋ ಮನೆ ಮಂದಿಗೆ ಇತ್ತೀಚಿಗೆ ಇಷ್ಟವಾಗದ ಸದಸ್ಯ ಯಾರು ಅನ್ನೋದಾದ್ರೆ ಅದು ಗೋಲ್ಡ್ ಸುರೇಶ್ (Gold Suresh) ಅಂತ ಬಹಳ ಸುಲಭವಾಗಿ ಹೇಳಬಹುದು. ವೀಕೆಂಡ್ ನಲ್ಲಿ ಹೆಚ್ಚು ಅವಾರ್ಡ್ ಗಳನ್ನು ಪಡ್ಕೊಂಡವ್ರು ಸುರೇಶ್, ನಿನ್ನೆಯ ಎಪಿಸೋಡ್ ನಲ್ಲಿ ಹೆಚ್ಚು ಕಪ್ಪು ಗುಲಾಬಿಯನ್ನು ಪಡೆದವರು ಸಹಾ ಗೋಲ್ಡ್ ಸುರೇಶ್. ಹೀಗೆ ಮನೆಯವರ ಟಾರ್ಗೆಟ್ ಆಗ್ತಿರುವ ಗೋಲ್ಡ್ ಸುರೇಶ್ ಈಗ ತಮ್ಮ ತಾಳ್ಮೆಯನ್ನು ಕಳೆದುಕೊಂಡು ಸಿಡಿದಿದ್ದಾರೆ. ಮನೆ ಮಂದಿಯ ಮೇಲೆ ಕೂಗಾಡಿದ್ದಾರೆ.
ಹೌದು, ಮನೆ ಮಂದಿಯೆಲ್ಲಾ ಕೂತು ಚರ್ಚಿಸಿ ಒಂದು ಜೋಡಿಯನ್ನು ನಾಮಿನೇಟ್ ಮಾಡಿ ಖುಷಿ ಪಡಿ ಅಂತ ಬಿಗ್ ಬಾಸ್ (BBK 11) ಅವಕಾಶ ನೀಡಿದ್ದು, ಈ ವೇಳೆ ಮತ್ತೆ ನಾಮಿನೇಷನ್ ಗೆ ಬಹಳಷ್ಟು ಜನರ ಆಯ್ಕೆ ಸುರೇಶ್ ಮತ್ತು ಅನುಷಾ ಜೋಡಿಯಾಗಿದೆ. ಇದು ಗೋಲ್ಡ್ ಸುರೇಶ್ ಅವರನ್ನು ಇನ್ನಷ್ಟು ಕೆರಳಿಸಿದ್ದು ಅವರು ಕೂಗಾಡಿದ್ದಾರೆ.
ಮೋಕ್ಷಿತಾ (Mokshitha Pai) ಅವರು ಕೊಟ್ಟ ಕಾರಣಕ್ಕೆ ನಾನು ಈಗಾಗಲೇ ಕ್ಷಮೆ ಕೇಳಿದ್ದೀನಿ, ಕಳಪೆ ತಗೊಂಡು ಜೈಲಿಗೆ ಹೋಗಿದ್ದೀನಿ. ಆದ್ರು ಮೋಕ್ಷಿತಾ ಅದನ್ನ ಬಿಡದೇ ಅದೇ ಕಾರಣ ಕೊಡ್ತಿದ್ದಾರೆ. ಅಂದ್ರೆ ಅವರಿಗೆ ಅದು ಬಿಟ್ರೆ ಬೇರೆ ಕಾರಣ ಇಲ್ಲ. ನಾನು ಕಿಚನ್ ಇಂದ ಹಿಡಿದು ಎಲ್ಲಾ ಕಡೆ ಇರ್ತೀನಿ, ಆದ್ರು ನನ್ನ ಇನ್ವಾಲ್ಮೆಂಟ್ ಕಡಿಮೆ ಅನ್ನೋದು ತಪ್ಪು ಅಂತ ಸುರೇಶ್ ಸಿಟ್ಟನ್ನು ಹೊರ ಹಾಕಿದ್ದಾರೆ.
ಚೈತ್ರ ಅವರ ಮೇಲೆ ಸಹಾ ಸಿಡಿದ ಸುರೇಶ್ ಅವರು ಹೇಗೆ ಮಾತಾಡ್ತಾರೆ ಅನ್ನೋದನ್ನ ಹೇಳಿದ್ದಾರೆ. ಅಲ್ಲದೇ ಮನೆಯಲ್ಲಿ ಎಲ್ಲರೂ ನೇರ ನಾಮಿನೇಷನ್ ಅಂದ್ರೆ, ನಾಮಿನೇಷನ್ ಅಂದ್ರೆ ಸುರೇಶ್ ಹೆಸರನ್ನ ತಗೊಳ್ತೀರಾ ಎಂದು ಮನೆ ಮಂದಿಯ ಮೇಲೆ ಕಿಡಿ ಕಾರಿದ್ದಾರೆ ಸುರೇಶ್. ಸುರೇಶ್ ಅವರ ಮಾತಿಗೆ ಮನೆ ಮಂದಿ ಏನು ಹೇಳಿದ್ರು ಅನ್ನೋದನ್ನ ಇವತ್ತಿನ ಎಪಿಸೋಡ್ ನಲ್ಲಿ ನೋಡಬೇಕಾಗಿದೆ.
BBK 11 : ಶಿಶಿರ್ ಮುಂದೆ ಮಂಡಿಯೂರಿ ಕೆಂಗುಲಾಬಿ ನೀಡಿದ ಐಶ್ವರ್ಯ; ಶಿಶಿರ್ ನ ಹಾಡಿ ಹೊಗಳಿ ಸ್ನೇಹಮಯಿ ಎಂದ ಐಶ್ವರ್ಯ