Bigg Boss Kannada : ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಈ ವಾರದ ನಾಮಿನೇಷನ್ ಪ್ರಕ್ರಿಯೆ ಬಹಳ ವಿಭಿನ್ನವಾಗಿ ನಡೀತಿದೆ. ಹಿಂದಿನ ಸೀಸನ್ ನ ಸ್ಪರ್ಧಿಗಳು ಬಂದು ಟಾಸ್ಕ್ ಗಳ ರೀತಿಯಲ್ಲಿ ನಾಮಿನೇಷನ್ ಪ್ರಕ್ರಿಯೆ ಮಾಡ್ತಿದ್ದಾರೆ. ನಿನ್ನೆಯ ಎಪಿಸೋಡ್ ನಲ್ಲಿ ಡ್ರೋನ್ ಪ್ರತಾಪ್ ಮತ್ತು ತನೀಷಾ ಕುಪ್ಪಂಡ ಬಿಗ್ ಬಾಸ್ (BBK 11) ಮನೆಗೆ ಬಂದಿದ್ದರು. ಇಂದು ಕಳೆದ ಸೀಸನ್ ವಿನ್ನರ್ ಕಾರ್ತಿಕ್ ಮಹೇಶ್ (Karthik Mahesh) ಮತ್ತು ನಮ್ರತಾ ಗೌಡ (Namratha Gowda) ಎಂಟ್ರಿ ಕೊಟ್ಟಿದ್ದಾರೆ.
ಈ ವೇಳೆ ಬಿಗ್ ಬಾಸ್ ಮನೆಯಲ್ಲಿ ಕೈ ಕೈ ಮಿಲಾಯಿಸಿದ್ದಾರೆ ಧನರಾಜ್ (Dhanraj) ಮತ್ತು ರಜತ್ (Rajath). ಹೌದು, ನಾಮಿನೇಷನ್ ಪ್ರಕ್ರಿಯೆ ವೇಳೆ ಧನರಾಜ್ ರಜತ್ ಹೆಸರನ್ನು ಹೇಳಿ, ತ್ರಿವಿಕ್ರಮ್ ಆಡಿದ್ದ ಮಾತಿನ ವಿಚಾರವೊಂದನ್ನು ತಮ್ಮ ರೀಸನ್ ಅಂತ ಹೇಳಿದ್ದಾರೆ. ಇದ್ರಿಂದ ರೊಚ್ಚಿಗೆದ್ದಿದ್ದಾರೆ ರಜತ್.
ಸಿಟ್ಟಾದ ರಜತ್ ಯಾವನೋ ಕೊಟ್ಟ ರೀಸನ್ ಗೆ ನನಗೆ ಬಂದು ಕೊಡ್ತಾನೆ, ಗುಗ್ಗು ನನ್ಮಗ, ಲೋ ಮಗು, ಪಾಪು ನನ್ನ ಹತ್ರ ಆಟಬೇಡ ಅಂತೆಲ್ಲಾ ಹೇಳಿ ಧನರಾಜ್ ಮೇಲೆ ರೇಗಾಡಿದ್ದಾರೆ. ಇದಕ್ಕೆ ಧನರಾಜ್ ಕೂಡಾ ರಜತ್ ಗೆ ತಮ್ಮ ಸ್ಟೈಲ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಬಂದಿರೋದು ಆಟ ಆಡಕ್ಕೆ, ನಿಮ್ಮ ಲೆವೆಲ್ ಏನಂಥ ನಮಗೆ ಗೊತ್ತಾಗಿದೆ ಅಂದಿದ್ದು, ನಂತರ ರಜತ್ ಕೆನ್ನೆ ಮುಟ್ಟಿ ಅಂಕಲ್ ಅಂಕಲ್ ಅಂತ ಕರೆದಿದ್ದಾರೆ. ಇದ್ರಿಂದ ರಜತ್ ಇನ್ನಷ್ಟು ಗರಂ ಆಗಿದ್ದಾರೆ. ಇಬ್ಬರೂ ಕೈ ಕೈ ಮಿಲಾಯಿಸೋ ಹಂತಕ್ಕೆ ಬಂದಿದ್ದು ಪ್ರೊಮೋದಲ್ಲಿ ಕಂಡಿದೆ.