Bigg Boss Kannada : ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಈ ವಾರದ ನಾಮಿನೇಷನ್ ನಡೆಯೋವಾಗ ಧನರಾಜ್ (Dhanraj) ಮತ್ತು ರಜತ್ (Rajath) ನಡುವೆ ಮಾತಿನ ಚಕಮಕಿ ನಡೆದಿತ್ತು. ಅದಾದ ಮೇಲೂ ಅವರ ನಡುವೆ ಇದೇ ವಿಚಾರವಾಗಿ ದೊಡ್ಡ ಜಗಳವೇ ಆಗಿತ್ತು. ಆ ವಿಚಾರ ಈಗ ಮತ್ತೆ ಮುನ್ನೆಲೆಗೆ ಬಂದು ಇನ್ನೊಮ್ಮೆ ಮನೆಯ ವಾತಾವರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.
ಈ ವಾರ ಬಿಗ್ ಬಾಸ್ (Bigg Boss) ಮನೆಯಲ್ಲಿ ನೀಡಿದ್ದ ಎಲ್ಲಾ ಟಾಸ್ಕ್ ಆಡಿ ಗೆದ್ದಿರುವ ಹನುಮಂತನ ಟೀಮ್ ನಲ್ಲಿ ಇದ್ದಾರೆ ರಜತ್. ಆದರೆ ಧನರಾಜ್ ಅವರು ಕಳಪೆ ನೀಡೋ ವಿಚಾರದಲ್ಲಿ ರಜತ್ ಹೆಸರನ್ನ ತಗೊಂಡಿದ್ದು, ರಜತ್ ಮತ್ತು ತಮ್ಮ ಜಗಳದಲ್ಲಿ ರಜತ್ ಆಡಿದ ಮಾತುಗಳನ್ನ ಕಾರಣವಾಗಿ ಹೇಳಿದ ಧನರಾಜ್ ರಜತ್ ಗೆ ಕಳಪೆ ಕೊಟ್ಟಿದ್ದಾರೆ.
ಟಾಸ್ಕ್ ಗಳನ್ನ ಗೆದ್ದಿರೋ ಟೀಮ್ ನಲ್ಲಿರೋ ರಜತ್ ಗೆ ಧನರಾಜ್ ಮಾತುಗಳು ಟ್ರಿಗರ್ ಆಗಿದೆ. ರಜತ್ ಮತ್ತು ಧನರಾಜ್ ನಡುವೆ ಮಾತಿಗೆ ಮಾತು ಬೆಳೆದಿದೆ. ರಜತ್ ಧನರಾಜ್ ಮೇಲೆ ಕೈ ಮಾಡೋಕೆ ಕೂಡಾ ಮುಂದಾಗಿದ್ದಾರೆ. ಈ ವೇಳೆ ಮನೆ ಮಂದಿ ಅವರ ಜಗಳ ಬಿಡಿಸೋಕೆ ಮುಂದಾಗಿದ್ದಾರೆ.
ಹೊಸ ಪ್ರೊಮೊ ನೋಡಿದ ಮೇಲೆ ತುಂಬಾ ಜನ ತಮ್ಮ ಪರ್ಸನಲ್ ಜಗಳದ ವಿಚಾರಕ್ಕೆ ಕಳಪೆ ಕೊಡೋದು ತಪ್ಪು ಅಂತಿದ್ದಾರೆ. ಕಳಪೆ ಅನ್ನೋದು ಟಾಸ್ಕ್, ಮನೆಯಲ್ಲಿ ಅವರ ಪ್ರದರ್ಶನ ನೋಡಿ ಕೊಡಬೇಕು ಅಂತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕೆಲವರು ರಜತ್ ಪರ ಮತ್ತೆ ಕೆಲವರು ಧನರಾಜ್ ಪರ ಕಾಮೆಂಟ್ ಮಾಡುತ್ತಿದ್ದಾರೆ.