Bigg Boss ಮನೆಯಲ್ಲಿ ದೀಪಾವಳಿ ಸಂಭ್ರಮದ ನಡುವೆ ಭಾವುಕರಾದ ಮನೆ ಮಂದಿ

Written by Soma Shekar

Published on:

---Join Our Channel---

Bigg Boss : ದೀಪಾವಳಿ (Deepavali)ಹಬ್ಬದ ದಿನಗಳಲ್ಲೇ ಬಿಗ್ ಬಾಸ್ (Bigg Boss) ಮನೆಯಲ್ಲಿ ಮನೆ ಮಂದಿ ಭಾವುಕರಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ನಾಲ್ಕೇ ವಾರಕ್ಕೆ ಎಮೋಷನಲ್ ಆಗಿದ್ದಾರೆ ಮನೆ ಮಂದಿ. ಮನೆಯವರನ್ನು ಮಿಸ್ ಮಾಡ್ಕೊಳ್ತಾ ಇರೋ ಸ್ಪರ್ಧಿಗಳ ಉತ್ಸಾಹ ಕುಗ್ಗದಂತೆ ಮಾಡಲು ಬಿಗ್ ಬಾಸ್ ಮನೆ ಮಂದಿಗೆ ಹೊಸ ಟಾಸ್ಕ್ ಮೂಲಕ ಅವರ ಮನೆಯವರ ಸಂದೇಶವನ್ನು ಪಡೆಯುವ ಅವಕಾಶವೊಂದನ್ನು ಮಾಡಿಕೊಟ್ಟಿದ್ದಾರೆ. ಮನೆಗೆ ಬಂದಿರೋ ಜೋಕರ್ ಕಾಟಕ್ಕೆ ಪ್ರತಿಕ್ರಿಯೆ ಕೊಡದೇ ಸಹಿಸಿಕೊಂಡ್ರೆ ಮನೆ ಮಂದಿಗೆ ಮನೆಯವರ ಸಂದೇಶ ಸಿಗೋದು ಪಕ್ಕಾ ಅಂತ ಹೇಳಲಾಗಿದೆ.

ಪ್ರೊಮೋದಲ್ಲಿ ಜೋಕರ್ ಬಂದಿರೋದು ಕಂಡಿದೆ. ಅಲ್ಲದೇ ಮನೆಯಲ್ಲಿ ಒಂದಷ್ಟು ಜನರಿಗೆ ಮನೆಯವರ ಸಂದೇಶ ಕೂಡಾ ಸಿಕ್ಕಿರೋದು ನೋಡಬಹುದಾಗಿದೆ. ಇಡೀ ಮನೆ ಎಮೋಷನಲ್ ಕ್ಷಣಗಳಿಗೆ ಸಾಕ್ಷಿಯಾಗಿದೆ. ಶಿಶಿರ್ (Shishir), ಭವ್ಯ ಗೌಡ, ಚೈತ್ರ ಕುಂದಾಪುರ (Chaithra Kundapura), ಧರ್ಮ ಕೀರ್ತಿರಾಜ್ ಎಲ್ಲರೂ ಮನೆಯವರ ಸಂದೇಶ ಪಡೆದು ಭಾವುಕರಾಗಿದರೋದು ಕಂಡಿದೆ.

ವಿಶೇಷವಾಗಿ ಮೋಕ್ಷಿತಾ ಪೈ (Mokshitha Pai) ಅವರಿಗೆ ಅವರ ಮನೆಯವರ ವೀಡಿಯೋವನ್ನು ತೋರಿಸಿದ್ದಾರೆ. ಮೋಕ್ಷಿತಾ ತಮ್ಮ ಅಪ್ಪ ಅಮ್ಮ ಮತ್ತು ವಿಶೇಷ ಚೇತನ ಸಹೋದರನನ್ನ ನೋಡಿ ಸಿಕ್ಕಾಪಟ್ಟೆ ಎಮೋಷನಲ್ ಸಹಾ ಆಗಿದ್ದಾರೆ. ಒಟ್ಟಾರೆ ಬಿಗ್ ಬಾಸ್ ಮನೆಯಲ್ಲಿರೋರಿಗೆ ದೀಪಾವಳಿ ಒಂದು ರೀತಿಯಲ್ಲಿ ಭಾವುಕ ದೀಪಾವಳಿಯಾಗಿ ಬದಲಾಗಿದೆ ಅನ್ನೋದು ಪ್ರೊಮೋದಲ್ಲಿ ಗೊತ್ತಾಗಿದೆ.

ದೀಪಾವಳಿ ಹಬ್ಭಕ್ಕೆ ಬಿಗ್ ಬಾಸ್ ಮನೆ ಮಂದಿಗೆ ಅವರ ಆಪ್ತರ, ಕುಟುಂಬದವರ ಸಂದೇಶಗಳನ್ನು ಪಡೆಯುವ ಅವಕಾಶ ನೀಡುವ ಮೂಲಕ ಹಬ್ಭದ ಉಡುಗೊರೆಯನ್ನು ನೀಡಿದ್ದಾರೆ. ಇನ್ನು ನಾಳೆ ಮತ್ತೊಂದು ವೀಕೆಂಡ್ ಬರ್ತಿದ್ದು, ಕಿಚ್ಚನ ಆಗಮನಕ್ಕಾಗಿ ಬಹಳಷ್ಟು ಜನ ಕಾಯ್ತಾ ಇದ್ದಾರೆ. ಸುದೀಪ್ ಅವ್ರು ಈ ವಾರ ಬರ್ತಾರಾ? ಅಥವಾ ಇಲ್ವಾ ಅನ್ನೋದು ನಾಳೆ ಗೊತ್ತಾಗಲಿದೆ.

Lakshmi Nivasa: ಚಿನ್ನುಮರಿಯ ಮುದ್ದು ಮೊಲದ ಮರಿಗೆ ಮುಕ್ತಿ ಕೊಟ್ಟೇ ಬಿಟ್ಟ ಜಯಂತ್? ಪ್ರೊಮೊ ನೋಡಿ ಶಾಕ್ ಆದ್ರು ವೀಕ್ಷಕರು

Leave a Comment