Bigg Boss 11 : ಬಿಗ್ ಮನೆಯಲ್ಲಿ ದೊಡ್ಡವರ ಲವ್ ಸ್ಟೋರಿ, ಕ್ಯಾಪ್ಟನ್ I Love You ಎಂದ ಜಗದೀಶ್, ಹಂಸ ಏನಂದ್ರು

Written by Soma Shekar

Published on:

---Join Our Channel---

Bigg Boss 11 : ಬಿಗ್ ಬಾಸ್ (Bigg Boss 11) ಮನೆಯಲ್ಲಿ ಕ್ಯಾಪ್ಟನ್ ಆಗಿರೋ ಹಂಸಗೆ (Hamsa) ಟಾರ್ಚರ್ ಕೊಡಬೇಕು ಅಂತ ನಿರ್ಧಾರವನ್ನು ಮಾಡಿರುವ ಜಗದೀಶ್ (Jagadish) ಅವರು ಹಂಸ ಅವರನ್ನ ಗೋಳು ಹೊಯ್ದುಕೊಳ್ಳಲು ಇರೋ ಎಲ್ಲಾ ಅವಕಾಶಗಳನ್ನು ಉಪಯೋಗಿಸಿಕೊಳ್ತಾ ಇದ್ದಾರೆ. ಹಂಸ ಅವರ ಜೊತೆ ಜಗಳ ಮಾಡಿದರೂ ಅದು ಸಹಾ ಫನ್ನಿಯಾಗಿ ಕಾಣ್ತಿದೆ. .

ಬಿಗ್ ಬಾಸ್ ಮನೆಯಲ್ಲಿ ದೊಡ್ಡವರ ಫನ್ನಿ ಲವ್ ಸ್ಟೋರಿ ನಡೆಯುತ್ತಿದೆ. ಜಗದೀಶ್ ಮಾತಿಗೆ ಸಿಟ್ಟಾಗ್ತಿದ್ದ ಹಂಸ ಕೂಡಾ ಈಗ ಅದನ್ನ ಕಾಮಿಡಿಯಾಗಿ ತಗೊಳ್ತಾ ಇದ್ದಾರೆ. ಇವರಿಬ್ಭರಿಂದ ಬಿಗ್ ಬಾಸ್ ಮನೇಲಿ ಒಂದು ರೀತಿಯ ಕಂಟೆಂಟ್ ಸಿಗ್ತಾ ಇದೆ. ಜಗದೀಶ್ ಅವರು ಹಂಸನ ಹಂಸ್ ಅಂತ ಕರೆದಿದ್ದಾರೆ.

ಮುಂಗಾರು ಮಳೆಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಎದೆಯ ಮೇಲೆ ಪೂಜಾ ಗಾಂಧಿ ಕಾಲಿಡುವ ದೃಶ್ಯ ಬಿಗ್ ಬಾಸ್ ಮನೆಯಲ್ಲಿ ಮರುಕಳಿಸಿದೆ. ಹಂಸ ಜಗದೀಶ್ ಅವರ ಎದೆ ಮೇಲೆ ಕಾಲಿಟ್ಟಿದ್ದಾರೆ. ಇದು ಅಕ್ಷರಶಃ ಬಿಗ್ ಬಾಸ್ ಮನೇಲಿ ದೊಡ್ಡವರ ಲವ್ ಸ್ಟೋರಿ ತರ ಕಾಣ್ತಿದೆ.

ಜಗದೀಶ್ ಅವರು ಮೊದಲು ವಾರದಲ್ಲಿ ಜಗಳದಲ್ಲಿ ತೊಡಗಿದ್ದರು. ಆದರೆ ಈ ವಾರ ಅವರು ಕಂಟೆಂಟ್ ಕೊಡೋ ವಿಧಾನವನ್ನು ಬದಲಿಸಿದ ಹಾಗೆ ಕಾಣ್ತಿದೆ. ಅಲ್ಲದೇ ಅದಕ್ಕಾಗಿ ಅವರು ಕ್ಯಾಪ್ಟನ್ ಹಂಸ ಅವರನ್ನೇ ಟಾರ್ಗೆಟ್ ಮಾಡಿರೋ ಹಾಗೆ ಕಾಣ್ತಿದ್ದು, ಎಪಿಸೋಡ್ ಗಳಲ್ಲಿ ಇವರೇ ಹೆಚ್ಚು ಕಾಣ್ತಿದ್ದಾರೆ.

Leave a Comment