BBK 11 : ಕಿಚ್ಚನ ಮುಂದೆ ಮನೆಯವರ ಮಾತಿಂದ ನಾಲಾಯಕ್ ಎನಿಸಿಕೊಂಡ ಧರ್ಮ; ಮೌನವೇ ಧರ್ಮಗೆ ಮುಳುವಾಯ್ತಾ?

Written by Soma Shekar

Published on:

---Join Our Channel---

Bigg Boss Kannada : ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಈ ವೀಕೆಂಡ್ ನಲ್ಲಿ ಮನೆ ಮಂದಿಗೆ ವಿಶೇಷ ಅವಾರ್ಡ್ ಗಳನ್ನ ನೀಡಲಾಗಿದೆ. ನಿನ್ನೆಯ ಎಪಿಸೋಡ್ ನಲ್ಲಿ ಕಿಚ್ಚ ಸುದೀಪ್ ಅವರ ಮುಂದೆ ಮನೆ ಮಂದಿ ಕಾರಣಗಳ ಸಹಿತ ಯಾರಿಗೆ ಯಾವ ಅವಾರ್ಡ್ ಅನ್ನೋದನ್ನ ತಿಳಿಸಿದ್ದಾರೆ. ಮನೆಯ ಫೇಕ್ ಸದಸ್ಯ ಮತ್ತು ಮನೆಯ ಊಸರವಳ್ಳಿ ಅವಾರ್ಡ್ ಗಳನ್ನ ಚೈತ್ರ ಕುಂದಾಪುರ ಮತ್ತು ಗೋಲ್ಡ್ ಸುರೇಶ್ ಅವರಿಗೆ ಕೊಟ್ಟಿದ್ದಾರೆ. ಮನೆಯ ವಿಷಕಾರಿ ಸದಸ್ಯ ಮಂಜುಗೆ ಕೊಟ್ಟಿದ್ದಾರೆ. ಆದರೆ ಎಲ್ಲಾ ಅವಾರ್ಡ್ ಗಳ ಮಧ್ಯೆ ಮನೆ ಮೆಚ್ಚಿದ ನಾಲಾಯಕ್ ಎನ್ನುವ ಅವಾರ್ಡ್ ಅನ್ನು ಕೂಡ ನೀಡಲಾಗಿದೆ.

ಬಿಗ್ ಬಾಸ್ (BBK 11)ಮನೆಯಲ್ಲಿರುವ ಸ್ಪರ್ಧಿಗಳು ಮನೆ ಮೆಚ್ಚಿದ ನಾಲಾಯಕ್ ಯಾರು ಎನ್ನುವ ಪ್ರಶ್ನೆಗೆ ತಮ್ಮದೇ ಕಾರಣಗಳನ್ನು ಕೊಡುತ್ತಾ ಧರ್ಮ ಕೀರ್ತಿರಾಜ್ (Dharma Kirthi Raj) ಅವರ ಹೆಸರನ್ನು ಹೇಳಿದ್ದಾರೆ. ಬಹಳಷ್ಟು ಜನ ಅವರ ಹೆಸರನ್ನು ಹೇಳಿದ್ದರಿಂದ ಮನೆಯ ನಾಲಾಯಕ್ ಸದಸ್ಯ ಎನ್ನುವ ಅವಾರ್ಡ್ ಅನ್ನು ಅವರಿಗೆ ನೀಡಲಾಗಿದೆ. ಇದರಿಂದ ಧರ್ಮ ಅವರ ಮನಸ್ಸಿಗೆ ಬಹಳ ನೋವಾಗಿದೆ.

ಹನುಮಂತ (Hanumantha), ಭವ್ಯ ಗೌಡ, ಚೈತ್ರ ಕುಂದಾಪುರ, ಶಿಶಿರ್ ಶಾಸ್ತ್ರಿ, ಮೋಕ್ಷಿತಾ ಹೀಗೆ ಸಾಲು ಸಾಲಾಗಿ ಮನೆ ಮಂದಿ ನಾಲಾಯಕ್ ಅವಾರ್ಡ್ ಗೆ ಧರ್ಮ ಕೀರ್ತಿರಾಜ್ ಅವರ ಹೆಸರನ್ನೇ ಸೂಚಿಸಿದ್ದಾರೆ. ಧರ್ಮ ಅವರಿಗೆ ಮುನ್ನುಗ್ಗಿ ಹೋಗುವ ಗುಣ ಇಲ್ಲ, ಅವರತನವನ್ನು ಬಿಟ್ಟುಕೊಟ್ಟು ಆಟವನ್ನು ಆಡ್ತಿದ್ದಾರೆ ಅಂತ ಮಂಜು ಹೇಳಿದ್ದಾರೆ.

ಮೋಕ್ಷಿತಾ (Mokshitha) ಮಾತಾಡ್ತಾ ಒಂದು ಟಾಸ್ಕ್ ಅನ್ನ ಆಡ್ತಿದ್ವಿ, ವಿಕ್ರಮ್ ಮಂಜಣ್ಣ ಕೂಡಾ ಮುಂದೆ ಬಂದ್ರು, ಆದರೆ ಧರ್ಮ ಕೀರ್ತಿ ಅವರು ಬಂದು ನಾನು ಯಾವ ತರ ಆಡ್ಲಿ ಅಂತ ನನ್ನನ್ನೇ ಪ್ರಶ್ನೆ ಮಾಡಿದ್ರು ಅಂತ ಕೇಳಿದ್ರು ಎಂದಿದ್ದಾರೆ.‌ ಎಲ್ಲರ ಮಾತು ಕೇಳಿದ ನಂತರ ಧರ್ಮ ಅವರು ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಅದೇನೋ ಮಹಾನ್ ತಪ್ಪು ಮಾಡಿಲ್ಲ, ಆದರೆ ಒಂದು ರೀಸನ್ ಇಟ್ಕೊಂಡು ಪ್ರತಿ ಬಾರಿ ಹೇಳಿದಾಗ ಬೇಸರ ಇದೆ ಅಂತ ಹೇಳಿದ್ದಾರೆ. ಬಳಿಕ ರಾತ್ರಿ ಮನೆಯವರ ಮುಂದೆ ಅವರು ಭಾವುಕರಾಗಿದ್ದಾರೆ. ಎಲ್ಲರೂ ಅವರ ಫೀಲ್ಡ್ ನಲ್ಲಿ ಕಷ್ಟಪಟ್ಟು ಮುಂದೆ ಬಂದಿರ್ತಾರೆ. ಆ ಅವಾರ್ಡ್ ನನಗೆ ತುಂಬಾ ನಾಟಿದೆ, ಚುಚ್ಚಿದೆ ಅನ್ನೋ ಮಾತುಗಳನ್ನು ಧರ್ಮ ಹೇಳಿಕೊಂಡಿದ್ದಾರೆ.

Leave a Comment