Bigg Boss Kannada: ಬಿಗ್ ಬಾಸ್ ಮನೆ (Bigg Boss Kannada) ನಿಯಮಗಳಿಗೆ ಕಿಂಚಿತ್ತೂ ಬೆಲೆ ಇಲ್ವಾ? ಕಳೆದ ಸೀಸನ್ ಅಂದ್ರೆ ಸೀಸನ್ ಹತ್ತರಲ್ಲಿ ವರ್ತೂರು ಸಂತೋಷ್ ಕಳಪೆ ಒಡೆದು ಜೈಲು ಸೇರಿದ ನಂತರ ಅದರಿಂದ ನುಸುಳಿಕೊಂಡು ಹೊರಗೆ ಬಂದಿದ್ದರು. ಆದರೆ ಈಗ ಏಕಕಾಲದಲ್ಲಿ ಮನೆಯ ಇಬ್ಬರು ಸ್ಪರ್ಧಿಗಳು ಮನೆಯ ನಿಯಮವನ್ನು ಉಲ್ಲಂಘನೆ ಮಾಡಿದ್ದು, ಹೊಸ ಪ್ರೊಮೊ ವೈರಲ್ ಆಗಿದೆ.
ಹೌದು, ಬಿಗ್ ಬಾಸ್ (BBK 11) ಇತಿಹಾಸದಲ್ಲೇ ಮೊದಲ ಬಾರಿಗೆ ಕಳಪೆ ಪಡೆದ ಇಬ್ಬರು ಸ್ಪರ್ಧಿಗಳು ಒಟ್ಟಿಗೆ ಮನೆಯ ನಿಯಮ ಉಲ್ಲಂಘನೆ ಮಾಡಿದ್ದಾರೆ. ಈ ವಾರ ಮನೆ ಮಂದಿಯಿಂದ ಕಳಪೆಗೆ ಸಮಾನ ಮತಗಳನ್ನು ಪಡೆದು ಜೈಲು ಸೇರಿದ್ದವರು ಚೈತ್ರ ಕುಂದಾಪುರ (Chaithra Kundapura) ಮತ್ತು ತ್ರಿವಿಕ್ರಮ್ (Trivikram).
ಈ ಇಬ್ಬರೂ ಈಗ ಬಿಗ್ ಬಾಸ್ (Bigg Boss) ನಿಯಮ ಬ್ರೇಕ್ ಮಾಡಿ ಜೈಲಿನಿಂದ ಹೊರಗಡೆ ಬಂದಿದ್ದಾರೆ. ಜೈಲಿನೊಳಗೆ ಇರುವಾಗ ಚೈತ್ರ ಅವರು, ಏನು ಪನಿಷ್ಮೆಂಟ್ ಆಗುತ್ತೆ, ನಾನು ಮನೆಯವರಿಗೆ ತೊಂದರೆ ಕೊಡೋಕೆ ಡಿಸೈಡ್ ಆಗಿದ್ದೀನಿ ಅನ್ನೋ ಮಾತನ್ನ ಹೇಳಿದ್ದಾರೆ.
ಚೈತ್ರ ಮಾತಿಗೆ ತ್ರಿವಿಕ್ರಮ್ ಸಾತ್ ನೀಡಿದ್ದಾರೆ. ಸರಿ ನಾವಿಬ್ರೇ ಹೊಸ ರೆಕಾರ್ಡ್ ಮಾಡೋಣ, ಬಾ ಆಚೆ ಕಡೆ ಹೋಗೋಣ ಅಂತ ಹೇಳಿ ಇಬ್ಬರೂ ಜೈಲಿನಿಂದ ನುಸುಳಿಕೊಂಡು ಹೊರಗೆ ಬಂದು ಕುಳಿತುಕೊಂಡಿದ್ದಾರೆ. ಇವರ ಈ ತಪ್ಪಿಗೆ ಯಾವ ಶಿಕ್ಷೆ ಆಗುತ್ತೆ ಕಾದು ನೋಡಬೇಕಾಗಿದೆ..