Bigg Boss Kannada : ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಈ ವಾರದ ಟಾಸ್ಕ್ ಗಳು ಬಹಳ ಜೋರಾಗಿಯೇ ನಡೆದಿದೆ. ಅದರಲ್ಲೂ ಟಾಸ್ಕ್ ಗಳಲ್ಲಿ ಗೆದ್ದ ತಂಡಕ್ಕೆ ನಾಮಿನೇಷನ್ ಅಧಿಕಾರ ನೀಡಿದ್ದಾರೆ ಬಿಗ್ ಬಾಸ್ (BBK 11). ಈ ವೇಳೆ ಉಸ್ತವಾರಿ ನಡೆಸಿದ್ದ ಚೈತ್ರ (Chaithra Kundapura) ಮತ್ತು ರಜತ್ ಅವರ ನಡುವೆ ದೊಡ್ಡ ಮಾತಿನ ಚಕಮಕಿ ನಡೆದಿತ್ತು. ಈಗ ಇವೆಲ್ಲವುಗಳ ನಡುವೆ ಬಿಗ್ ಬಾಸ್ ಹೊಸ ಟ್ವಿಸ್ಟ್ ಒಂದನ್ನು ನೀಡಿದ್ದಾರೆ.
ಬಿಗ್ ಬಾಸ್ ಈಗ ಮತ್ತೊಂದು ಹೊಸ ಟಾಸ್ಕ್ ಅನ್ನು ನೀಡಿದ್ದು, ಈ ಹೊಸ ಟಾಸ್ಕ್ ನಲ್ಲಿ ಗೆದ್ದ ತಂಡಕ್ಕೆ ನಾಮಿನೇಷನ್ ನಿಂದ ಪಾರು ಮಾಡೋ ಅಧಿಕಾರವನ್ನು ನೀಡಿದ್ದಾರೆ ಬಿಗ್ ಬಾಸ್. ಈಗ ಈ ಟಾಸ್ಕ್ ಅನ್ನು ಗೆಲ್ಲೋದು ಎರಡೂ ತಂಡಕ್ಕೂ ಮುಖ್ಯವಾದರೂ, ತ್ರಿವಿಕ್ರಮ್ ತಂಡಕ್ಕೆ ಇದು ಬಹಳ ಮುಖ್ಯವಾಗಿದೆ.
ಆದ್ರೆ ವಾಹಿನಿ ಶೇರ್ ಮಾಡಿರೋ ಹೊಸ ಪ್ರೊಮೋದಲ್ಲಿ ನೋಡಿದಾಗ, ಈ ಟಾಸ್ಕ್ ನಲ್ಲಿ ತ್ರಿವಿಕ್ರಮ್ ತಂಡದಲ್ಲೇ ಇರುವ ಚೈತ್ರ ಕುಂದಾಪುರ ಆಟ ಆಡೋಕೆ ಆಗದೆ ಕೈ ಚೆಲ್ಲಿರೋ ಹಾಗೆ ಕಂಡಿದೆ. ಅಲ್ಲದೇ ಚೈತ್ರ ಅವರು ಸರಿಯಾಗಿ ಆಡದೇ ಇರುವ ಕಾರಣ ತಮ್ಮ ತಂಡದವರ ಕೋಪಕ್ಕೆ ಗುರಿಯಾಗಿ ಕೈಯಲಿದ್ದ ರಾಡ್ ಗೆ ತಮ್ಮ ತಲೆಯನ್ನು ಚಚ್ಚಿಕೊಂಡಿದ್ದಾರೆ.
ನನ್ನ ಕೈಯಲ್ಲಿ ಆಡೋಕೆ ಆಗ್ತಿಲ್ಲ ಅಂತ ಅತ್ತಿದ್ದಾರೆ. ನಂತರ ತ್ರಿವಿಕ್ರಮ್ ಮತ್ತು ಗೌತಮಿ ಮುಂದೆ ನಿಂತು ಅತ್ತು ಕಣ್ಣೀರನ್ನ ಹಾಕಿದ್ದಾರೆ ಚೈತ್ರ.. ಚೈತ್ರ ಅವರಿಂದಾಗಿ ಅವರ ಇಡೀ ತಂಡ ಈ ಹೊಸ ಟಾಸ್ಕ್ ನಲ್ಲಿ ಸೋಲುತ್ತಾ ಅನ್ನೋದನ್ನ ಇವತ್ತಿನ ಎಪಿಸೋಡ್ ನಲ್ಲಿ ನೋಡಬೇಕಾಗಿದೆ.