Bigg Boss Kannada : ಬಿಗ್ ಬಾಸ್ (Bigg Boss Kannada) ನೀಡಿರುವ ಹೊಸ ಚಟುವಟಿಕೆ ಮನೆಯಲ್ಲಿ ಮತ್ತೊಮ್ಮೆ ಮಾತುಗಳ ವಿನಿಮಯಕ್ಕೆ ಕಾರಣವಾಗಿದೆ. ಇದೇ ವೇಳೆ ಇದು ಸ್ಪರ್ಧಿಗಳ ನಡುವೆ ಇನ್ನಷ್ಟು ವೈಮನಸ್ಸಿಗೆ ಕಾರಣವಾದರೂ ಆಗಬಹುದು. ಬಿಗ್ ಬಾಸ್ (BBK) ರಜತ್ ಅವರ ತಂಡದವರಿಗೆ ನಾಲ್ಕು ಗುಣಗಳ ಆಯ್ಕೆ ಕೊಟ್ಟಿದ್ದು ಮನೆಯಲ್ಲಿ ಯಾರು ಅದಕ್ಕೆ ಸರಿ ಹೊಂದುವರು ಅನ್ನೋದನ್ನ ತಿಳಿಸುವಂತೆ ಕೇಳಿದ್ದಾರೆ.
ಈ ವೇಳೆ ಮೋಕ್ಷಿತಾ (Mokshitha) ಅವರು ಒಂದು ಆಯ್ಕೆಗೆ ಭವ್ಯ (Bhavya) ಅವರ ಹೆಸರನ್ನ ತಗೊಂಡು ತಮ್ಮ ಕಾರಣಗಳನ್ನು ನೀಡಿದ್ದು, ಇದರಿಂದ ಭವ್ಯ ಸಿಟ್ಟಾಗಿದ್ದಾರೆ. ಮೋಕ್ಷಿತಾ ಭವ್ಯ ಎಲ್ಲರ ಜೊತೆ ಮಿಂಗಲ್ ಆಗಲ್ಲ, ತ್ರಿವಿಕ್ರಮ್ ಮೇಲೆ ಡಿಪೆಂಡ್ ಆಗಿದ್ದಾರೆ, ರೂಡ್ ಆಗಿ ಮಾತಾಡ್ತಾರೆ ಅಂತ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ಕೊಟ್ಟ ಭವ್ಯ, ಕಷ್ಟ ಸುಖ ಎಲ್ರ ಜೊತೆ ಮಾತಾಡಕ್ಕಾಗಲ್ಲ, ತ್ರಿವಿಕ್ರಮ್ ಜೊತೆ ನಾನು ಕಂಫೋರ್ಟಬಲ್ ಹೌದು, ಹಾಗಂತ ನನ್ನ ಆಟ ಎಲ್ಲಾ ಅವ್ರು ಆಡ್ತಿಲ್ಲ. ಈ ಮನೆಗೆ ನಾನು ಸಂಬಂಧಗಳನ್ನ ಬೆಳೆಸೋಕೆ ಬಂದಿಲ್ಲ ಅನ್ನೋ ಮಾತುಗಳನ್ನು ಹೇಳುವ ಮೂಲಕ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಮೋಕ್ಷಿತಾ ಅವರ ಮಾತಿಗೆ ಭವ್ಯ ಕೊಟ್ಟ ಉತ್ತರ ನೋಡಿದ ನೆಟ್ಟಿಗರು ಭವ್ಯ ಸೂಪರ್ ಅಂದ್ರೆ ಮೋಕ್ಷಿತಾ ಹೇಳಿದ ಮಾತುಗಳಿಗೆ ಅವರ ಫ್ಯಾನ್ಸ್ ಸೂಪರ್ ಅಂತಿದ್ದಾರೆ. ಮೋಕ್ಷಿತಾ ಮತ್ತು ಭವ್ಯ ನಡುವೆ ಏನೆಲ್ಲಾ ಮಾತುಗಳಾಯ್ತು ಅನ್ನೋದನ್ನ ಇವತ್ತಿನ ಎಪಿಸೋಡ್ ನಲ್ಲಿ ನೋಡಬೇಕಾಗಿದೆ.
Bigg Boss : ಗೌತಮಿ ಮೇಲೆ ಸೇಡು ತೀರಿಸಿಕೊಂಡ್ರಾ ಮೋಕ್ಷಿತಾ; ತಿರುಗೇಟು ಕೊಟ್ಟ ಗೌತಮಿ ಹೇಳಿದ ಮಾತಿಗೆ ಶಾಕ್