Bigg Boss Kannada: ಬಿಗ್ ಬಾಸ್ ಕನ್ನಡ (Bigg Boss Kannada) ಸೀಸನ್ 11 ರ ನಾಲ್ಕನೇ ವಾರದ ಎಲಿಮಿನೇಷನ್ ನಲ್ಲಿ ನಟಿ ಹಂಸ (Hamsa) ಅವರು ಬಿಗ್ ಮನೆಯಿಂದ ಹೊರಗೆ ಬಂದಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ನೆಟ್ಟಿಗರು ಮಾನಸ ಎಲಿಮಿನೇಟ್ ಆಗೋದು ಪಕ್ಕಾ ಅನ್ಕೊಂಡಿದ್ರು. ಆದರೆ ಎಲ್ಲರ ನಿರೀಕ್ಷೆಗಳು ಸುಳ್ಳಾಗಿ ಕಡಿಮೆ ಓಟುಗಳನ್ನು ಪಡೆದು ಹಂಸ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ.
ದೊಡ್ಮನೆಯಿಂದ ಹೊರಗೆ ಬಂದ ಮೇಲೆ ಸಾಕಷ್ಟು ಸಂದರ್ಶನಗಳಲ್ಲಿ ಮಾತನಾಡುತ್ತಿರುವ ಅವರಿಗೆ ಬಹುತೇಕ ಎಲ್ಲಾ ಕಡೆ ಜಗದೀಶ್ ಅವರ ಕುರಿತಾಗಿ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಹಂಸ ಅವರು ಸಂದರ್ಶನವೊಂದರಲ್ಲಿ ಜಗದೀಶ್ (Lawyer Jagadish) ಅವರಿಗೆ ಕ್ರಷ್ ಆಫ್ ಕರ್ನಾಟಕ ಅನ್ನೋ ಟೈಟಲ್ ಸಿಗೋಕೆ ಕಾರಣ ನಾನೇ ಅನ್ನೋ ಮಾತುಗಳನ್ನ ಹೇಳಿದ್ದಾರೆ.
ಒಳ್ಳೇದಾಗುತ್ತೆ ಅಂದ್ರೆ ಸುಳ್ಳು ಹೇಳೋದು ತಪ್ಪಿಲ್ಲ ಅನ್ಸುತ್ತೆ. ನಿಜ ಹೇಳಿ ದುಃಖ ತರಿಸೋ ಬದಲು ಸುಳ್ಳು ಹೇಳಿ ಅವರೊಳಗಿನ ಒಳ್ಳೆತನ ಹೊರ ಬರುತ್ತೆ, ಒಳ್ಳೇದಾಗುತ್ತೆ ಅಂದ್ರೆ ಯಾಕೆ ಮಾಡಬಾರದು. ಕ್ರಷ್ ಆಫ್ ಕರ್ನಾಟಕ ಅನ್ನೋ ಟೈಟಲ್ ಅನ್ನು ಜನ ಅವರಿಗೆ ಕೊಟ್ಟಿದ್ದೇ ನಾನು ಅವರ ಜೊತೆ ಡ್ಯುಯೆಟ್ ಹಾಡಿದ್ದಕ್ಕೆ.
ಅವರು ನನ್ನ ಜೊತೆ ರೊಮ್ಯಾಂಟಿಕ್ ಆಗಿ ಮಾತಾಡಿದ್ದು, ರೋಮ್ಯಾಂಟಿಕ್ ಡೈಲಾಗ್ಸ್ ಹೊಡೆದಿದ್ದು, ಮುಂಗಾರು ಮಳೆ ಗಣೇಶ್ ಅವರ ಡೈಲಾಗ್ ಗಳನ್ನ ಇಮಿಟೇಟ್ ಮಾಡಿ ಅವ್ರು ಮಾತಾಡಿದ್ರು ಎನ್ನುವ ಮಾತುಗಳನ್ನು ಹಂಸ ಅವರು ಹೇಳಿದ್ದು, ಈ ಮೂಲಕ ಜಗದೀಶ್ ಅವರಿಗೆ ಕ್ರಷ್ ಆಫ್ ಕರ್ನಾಟಕ ಟೈಟಲ್ ಸಿಗೋಕೆ ನಾನೇ ಕಾರಣ ಎಂದಿದ್ದಾರೆ.
ನಾನು ಉತ್ತಮ ನಟಿಯಲ್ಲ ಎಂದು ಎಲ್ಲರ ಎದುರಲ್ಲೇ ಹಿಂಜರಿಕೆ ಇಲ್ಲದೇ ಹೇಳಿದ ನಟಿ Samantha