Bigg Boss Kannada : ಬಿಗ್ ಬಾಸ್ (Bigg Boss Kannada) ಮನೆಯ ಮತ್ತೊಂದು ವೀಕೆಂಡ್ ಹತ್ರ ಆಗಿದೆ. ನಾಳೆಯ ಎಪಿಸೋಡ್ ಗಾಗಿ ವೀಕ್ಷಕರು ಕುತೂಹಲದಿಂದ ಕಾಯ್ತಿದ್ದಾರೆ. ಈ ವಾರ ಬಿಗ್ ಬಾಸ್ (BBK 11) ಮನೆಯಿಂದ ಹೊರಗೆ ಹೋಗೋದಕ್ಕೆ ಉಗ್ರಂ ಮಂಜು, ಗೌತಮಿ ಜಾಧವ್, ಮೋಕ್ಷಿತಾ ಪೈ, ಚೈತ್ರಾ ಕುಂದಾಪುರ, ಭವ್ಯಾ ಗೌಡ, ಗೋಲ್ಡ್ ಸುರೇಶ್, ಐಶ್ವರ್ಯಾ ಶಿಂಧೋಗಿ, ರಜತ್ ಕಿಶನ್ ಹೀಗೆ ಒಟ್ಟು ಒಂಬತ್ತು ಜನ ನಾಮಿನೇಟ್ ಆಗಿದ್ದಾರೆ.
ಸೋಶಿಯಲ್ ಮೀಡಿಯಾಗಳಲ್ಲಿ ಈ ವಾರ ಯಾರು ಬಿಗ್ ಬಾಸ್ ಮನೆಯಿಂದ ಹೊರಗೆ ಬರ್ತಾರೆ ಅನ್ನೋ ಚರ್ಚೆಗಳು ಸಹಾ ಜೋರಾಗಿ ನಡೀತಿದೆ. ಇವೆಲ್ಲವುಗಳ ನಡುವೆ ಹೊಸ ವಿಷಯ ಸುದ್ದಿಯಾಗಿದೆ. ಅದೇನೆಂದ್ರೆ ಈ ವಾರ ಓಟಿಂಗ್ ಲೈನ್ಸ್ ಇನ್ನೂ ಓಪನ್ ಆಗಿಲ್ಲ. ಗುರುವಾರದ ಎಪಿಸೋಡ್ ಮುಗಿದ ಮೇಲೆ ಓಪನ್ ಆಗಬೇಕಿದ್ದ ಓಟಿಂಗ್ ಲೈನ್ ಓಪನ್ ಆಗಿಲ್ಲ.
ಹಾಗಾದರೆ ಈ ವಾರ ಯಾವುದೇ ಎಲಿಮಿನೇಷನ್ ಇರೋದಿಲ್ವಾ? ಅಥವಾ ಹಿಂದೆ ಮಾಡಿದ ಹಾಗೆ ಫೇಕ್ ಎಲಿಮಿನೇಷನ್ ಆಟವನ್ನ ಬಿಗ್ ಬಾಸ್ ಆಡ್ತಾರಾ? ಕಾದು ನೋಡಬೇಕಾಗಿದೆ. ಇದೇ ವೇಳೆ ಎಲಿಮಿನೇಷನ್ ಇಲ್ಲ ಅಂದ್ರೆ ಬಿಗ್ ಬಾಸ್ ಹೊಸ ಟ್ವಿಸ್ಟ್ ಏನಾದ್ರು ಇಡ್ತಾರಾ ಅನ್ನೋ ಅನುಮಾನ ಸಹಾ ಮೂಡಿದೆ.
ಮೋಕ್ಷಿತಾಗೆ (Mokshitha) ತ್ರಿವಿಕ್ರಮ್ (Trivikram) ಮೇಲೆ ಇರೋ ಅನುಮಾನ ಹೋಗಲಾಡಿಸೋಕೆ ಸೀಕ್ರೆಟ್ ರೂಮ್ ಕಾನ್ಸೆಪ್ಟ್ ಅನ್ನ ಮತ್ತೆ ತರ್ತಾರಾ ಅನ್ನೋ ಚರ್ಚೆ ಸಹಾ ಶುರುವಾಗಿದೆ. ಮಂಜು ಮತ್ತು ಗೌತಮಿ ಹೇಗೆ ರಿಯಾಕ್ಟ್ ಆಗ್ತಾರೆ ಅನ್ನೋದನ್ನ ಸಹಾ ನೋಡೋಕೆ ಸೀಕ್ರೆಟ್ ರೂಮ್ (Secret Room) ತೆರಯಲಾಗುತ್ತಾ? ಕಾದು ನೋಡಬೇಕಾಗಿದೆ.