Karthik Mahesh: ರೂಲ್ಸ್ ಮಾಡೋನು ಅಂತ ಕಿರುತೆರೆಗೆ ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ಖಡಕ್ ಎಂಟ್ರಿ

Written by Soma Shekar

Published on:

---Join Our Channel---

Karthik Mahesh: ಬಿಗ್ ಬಾಸ್ ಕನ್ನಡ 10’ರ (Bigg Boss Kannada 10)  ವಿನ್ನರ್ ಆಗಿ ಗೆದ್ದ ಕಾರ್ತಿಕ್ ಮಹೇಶ್ (Karthik Mahesh) ಬಿಗ್ ಬಾಸ್ ನಂತರ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈಗ ಬಹು ದಿನಗಳ ನಂತರ ಅವರು ತಮ್ಮ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿಯನ್ನು ನೀಡಿದ್ದಾರೆ. ಕಾರ್ತಿಕ್ ಮಹೇಶ್ ಅವರು ನೀಡಿದ ಹೊಸ ಅಪ್ಡೇಟ್ ಗೆ ಅವರ ಫ್ಯಾನ್ಸ್ ಖುಷಿಯಾಗಿದ್ದಾರೆ.

ಹೌದು, ನಟ ಕಾರ್ತಿಕ್ ಮಹೇಶ್ ಅವರು ಸಿನಿಮಾ ಜೊತೆಜೊತೆಗೆ ಹೊಚ್ಚ ಹೊಸ ರಿಯಾಲಿಟಿ ಶೋವೊಂದನ್ನು ನಿರೂಪಣೆ ಮಾಡಲು ಮುಂದಾಗಿದ್ದಾರೆ. ಅಲ್ಲದೇ ನಾನು ರೂಲ್ಸ್‌ ಸೆಟ್ ಮಾಡ್ತೀನಿ ಅನ್ನೋ ಖಡಕ್ ಡೈಲಾಗ್ ಹೇಳಿದ್ದಾರೆ ನಟ ಕಾರ್ತಿಕ್ ಮಹೇಶ್. ಈ ಜಗತ್ತಿನಲ್ಲಿ ಮೂರು ತರದ ಜನರು ಇರ್ತಾರೆ.

ಒಬ್ರು ರೂಲ್ಸ್‌ ಬ್ರೇಕ್ ಮಾಡೋರು, ಒಬ್ರು ಫಾಲೋ ಮಾಡೋರು. ಮೂರನೆಯವನು ನಾನು, ರೂಲ್ಸ್‌ ಸೆಟ್ ಮಾಡೋನು ಅಂತ ಮಾಸ್ ಡೈಲಾಗ್ ಹೇಳಿ ಫ್ಯಾನ್ಸ್ ಗೆ ಖುಷಿ ನೀಡಿದ್ದಾರೆ ಕಾರ್ತಿಕ್. ಸ್ಟಾರ್ ಸುವರ್ಣ ವಾಹಿನಿ ಶೇರ್ ಮಾಡಿರುವ ಹೊಸ ಪ್ರೊಮೋ ಈಗ ಸದ್ದು ಮಾಡುತ್ತಿದೆ.

ಇದೇ ಸೆ.15ರಿಂದ ರಾತ್ರಿ 7 ಗಂಟೆಗೆ ‘ಸುವರ್ಣ ಸೆಲೆಬ್ರಿಟಿ ಲೀಗ್’ (Suvarna Celebraty League) ಎನ್ನುವ ಹೆಸರಿನಲ್ಲಿ ಹೊಸ ಶೋ ಆರಂಭ ಆಗ್ತಿದ್ದು, ಇದರಲ್ಲಿ ಕಿರುತೆರೆಯ ಜನಪ್ರಿಯ ಸೆಲೆಬ್ರಿಟಿಗಳು ಹಾಗೂ ಮಾಜಿ ಬಿಗ್ ಬಾಸ್ ಸ್ಪರ್ಧಿಗಳು ಸಹಾ ಭಾಗವಹಿಸುತ್ತಿದ್ದು ಪ್ರೊಮೋಗಳು ಈಗಾಗಲೇ ಪ್ರೇಕ್ಷಕರ ಗಮನವನ್ನು ಸೆಳೆಯುತ್ತಿವೆ.

Bhagyalakshmi Serial: ಮಗನ ಮಹಾಸತ್ಯ ಬಯಲಾಯ್ತು, ಶಪಥ ಮಾಡಿದ ಕುಸುಮಾ ಮುಂದಿನ ಹೆಜ್ಜೆ ಏನು?

Leave a Comment