Karthik Mahesh: ಕೊನೆಗೂ ಕಾರ್ತಿಕ್ ಮನೆ ಸೇರಿತು ಬಿಗ್ ಬಾಸ್ ಕಾರು; ಈ ಕಾರಿನ ಬೆಲೆ ಎಷ್ಟು ಗೊತ್ತೇನು?

Written by Soma Shekar

Published on:

---Join Our Channel---

Karthik Mahesh: ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಖ್ಯಾತಿಯ ಬಿಗ್ ಬಾಸ್ ಸೀಸನ್ 10ರ (Bigg Boss Kannada 10) ವಿನ್ನರ್​ ಕಾರ್ತಿಕ್​ ಮಹೇಶ್ (Karthik Mahesh) ಅವರ ಮನೆಯಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿದೆ. ಬಹಳಷ್ಟು ಸದ್ದು,‌ಸುದ್ದಿ ಮಾಡಿದ್ದ ಕನ್ನಡ ಬಿಗ್ ಬಾಸ್ ಸೀಸನ್ 10 ರಲ್ಲಿ ಗೆದ್ದು, ಟ್ರೋಫಿ ಹಿಡಿದ ಕಾರ್ತಿಕ್ ಮಹೇಶ್ ಅವರ ಮನೆಗೆ ಹೊರ ಅತಿಥಿಯ ಎಂಟ್ರಿ ಆಗಿದ್ದು, ನಟ ಖುಷಿಯಾಗಿದ್ದಾರೆ.‌

ಬಿಗ್ ಬಾಸ್ ವಿನ್ನರ್ ಆದವರಿಗೆ ಸಿಗುವ ಬಹುಮಾನಗಳಲ್ಲಿ ಮಾರತಿ ಸುಜುಕಿ ಬ್ರೆಜಾ (Maruti Suzuki Brezza) ಕಾರು ಒಂದಾಗಿತ್ತು. ಈಗ ಶೋ ಮುಗಿದ ಏಳು ತಿಂಗಳ ನಂತರ ಕಾರ್ತಿಕ್ ಅವರ ಮನೆಗೆ ಕಾರು ಬಂದಿದೆ. ಈ ಕಾರಿನ ಬೆಲೆ ಸುಮಾರು 10 ರಿಂದ 15 ಲಕ್ಷ ರೂಪಾಯಿಗಳು ಎನ್ನಲಾಗಿದೆ. ಕಾರು ಕೈಸೇರಿದ ಸಂತೋಷವನ್ನು ನಟ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

ಕಾರ್ತಿಕ್ ಮಹೇಶ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವೀಡಿಯೋವನ್ನು ಹಂಚಿಕೊಂಡಿದ್ದು, ಇದನ್ನ ನೋಡಿದ ಅವರ ಅಭಿಮಾನಿಗಳು ಸಹಾ ಖುಷಿಯಾಗಿದ್ದಾರೆ ಮತ್ತು ಕಾಮೆಂಟ್ ಗಳನ್ನು ಮಾಡಿ ನಟನಿಗೆ ಮತ್ತು ಅವರ ಕುಟುಂಬಕ್ಕೆ ಶುಭವಾಗಲಿ ಎಂದು ಹಾರೈಸುತ್ತಿದ್ದಾರೆ.

ಬಿಗ್ ಬಾಸ್ ಮುಗಿದು ಏಳು ತಿಂಗಳ ನಂತರ ಇಷ್ಟು ತಡವಾಗಿ ಕಾರು ಕೈ ಸೇರಿದ್ಯಾಕೆ ಎನ್ನುವ ಅನುಮಾನ ಅನೇಕರಿಗೆ ಇರಬಹುದು. ಈ ಹಿಂದೆ ಕೂಡಾ‌ ವಿನ್ನರ್ಸ್ ಗೆ ಕಾರು ತಡವಾಗಿಯೇ ಕೈ ಸೇರಿತ್ತು. ಬಹುಶಃ ಕೆಲವೊಂದು ನಿಮಯಗಳ ಅನುಸಾರ ಎಲ್ಲಾ ಪ್ರಕ್ರಿಯೆ ನಡೆಯುವುದರಿಂದ ತಡವಾಗಬಹುದು ಎನ್ನಲಾಗಿದೆ.

Neenade Na: ಮತ್ತೆ ಬರ್ತಿದ್ದಾರೆ ವಿಕ್ರಂ ವೇದ, ನೀನಾದೆ ನಾ ಹೊಸ ಅಧ್ಯಾಯದ ಬಗ್ಗೆ ಥ್ರಿಲ್ಲಾದ್ರು ಫ್ಯಾನ್ಸ್

Leave a Comment