Karthik Mahesh: ಹೊಸ ಸಿನಿಮಾದಲ್ಲಿ ವಿಲನ್ ಆದ ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್

Written by Soma Shekar

Published on:

---Join Our Channel---

Karthik Mahesh: ಸ್ಯಾಂಡಲ್ವುಡ್ ನಟ, ಬಿಗ್ ಬಾಸ್ ಕನ್ನಡ ಸೀಸನ್ ಹತ್ತರ ವಿನ್ನರ್ ಕಾರ್ತಿಕ್ ಮಹೇಶ್ (Karthik Mahesh) ಬಿಗ್ ಬಾಸ್ ಶೋ ನಂತರ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ‘ರಾಮರಸ’ ಎನ್ನುವ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ರಾರೆ. ಈಗ ಮತ್ತೊಂದು ಹೊಸ ಅಪ್ಡೇಟ್ ಹೊರ ಬಂದಿದ್ದು, ಕಾರ್ತಿಕ್ ಮಹೇಶ್ ಅವರು ಹೊಸ ಸಿನಿಮಾವೊಂದರಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರತೀಕ್ ನಟನೆಯ ‘ಧ್ರುವತಾರೆ’ (Dhruvataare) ಸಿನಿಮಾದಲ್ಲಿ ಕಾರ್ತಿಕ್ ಮಹೇಶ್‌ ಗೆ ಒಂದೊಳ್ಳೆ ಸ್ಕೋಪ್ ಇರುವ ಪಾತ್ರ ಸಿಕ್ಕಿದ್ದು, ವಿಲನ್ ಆದ್ರೂ ಕೂಡಾ ಈ ಪಾತ್ರದಲ್ಲಿ ನಟನೆಗೆ ಸಾಕಷ್ಟು ಉತ್ತಮ ಅವಕಾಶ ಇದೆ‌. ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮೂಲಕ ಜನಪ್ರಿಯತೆಯನ್ನು ಪಡೆದವರು ಪ್ರತೀಕ್ ಮತ್ತು ಮೌಲ್ಯ ದಂಪತಿ.‌

ಈಗ ಅವರು ತಾವೇ ಒಂದು ಹೊಸ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಸಿನಿಮಾ ಒಂದು ಫ್ಯಾಮಿಲಿ ಡ್ರಾಮಾ‌ ಎನ್ನಲಾಗಿದೆ. ಸಿನಿಮಾವನ್ನು ಯುವ ನಟ ಪ್ರತೀಕ್ ಅವರೇ ನಿರ್ದೇಶನವನ್ನು ಮಾಡುತ್ತಿದ್ದು, ಪ್ರತೀಕ್ ಮತ್ತು ಅವರ ಪತ್ನಿ ಮೌಲ್ಯ ಅವರು ಬೆಳ್ಳಿ ತೆರೆಯಲ್ಲಿ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಸಿನಿಮಾ ಶೂಟಿಂಗ್ ಬೆಂಗಳೂರು ಮತ್ತು ಸಕಲೇಶಪುರದಲ್ಲಿ ನಡೆಸಿದ್ದು, ಸಿನಿಮಾದ ಮೊದಲ ಪೋಸ್ಟರ್ ಸಹಾ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ಕಾರ್ತಿಕ್ ಮಹೇಶ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ತಾರೆ ಎನ್ನುವ ವಿಚಾರವನ್ನ ಕೇಳಿದ ಅವರ ಅಭಿಮಾನಿಗಳಂತೂ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ.

Vijay Raaz : ಅಜಯ್ ದೇವಗನ್ ಗೆ ವಿಶ್ ಮಾಡ್ಲಿಲ್ಲ, ಹಿರಿಯ ನಟನನ್ನ ಸಿನಿಮಾದಿಂದ ಹೊರದಬ್ಬಿದ ನಿರ್ಮಾಪಕರು

Leave a Comment