Drone Prathap: ಬಿಗ್ ಬಾಸ್ ಕನ್ನಡ ಸೀಸನ್ ಹತ್ತರ (Bigg Boss Kannada 10) ಸ್ಪರ್ಧಿಗಳಲ್ಲಿ ಬಹಳಷ್ಟು ಜನರು ಸಿನಿಮಾ, ಸೀರಿಯಲ್ ಮತ್ತು ತಮ್ಮದೇ ಆದ ಉದ್ಯಮಗಳಲ್ಲಿ ತೊಡಗಿಕೊಂಡಿದ್ದಾರೆ. ಇದೆ ವೇಳೆ ಸೀಸನ್ 10ರಲ್ಲಿ ಸಾಕಷ್ಟು ಸುದ್ದಿ ಮಾಡಿದ ಮತ್ತು ಜನಪ್ರಿಯತೆಯನ್ನು ಪಡೆದುಕೊಂಡ ಡ್ರೋನ್ ಪ್ರತಾಪ್ (Drone Prathap) ಸಾಮಾಜಿಕ ಕೆಲಸಗಳನ್ನು ಮಾಡುವ ಮೂಲಕ ಸುದ್ದಿಯಾಗುತ್ತಿದ್ದಾರೆ ಮತ್ತು ಇನ್ನಷ್ಟು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದ್ದಾರೆ.
ಪ್ರತಾಪ್ ಬಿಗ್ ಬಾಸ್ ಮನೆಯಲ್ಲಿ ಇರುವಾಗಲೇ ತಾನು ಬಹುಮಾನವಾಗಿ ಪಡೆಯುವ ಹಣದಿಂದ ಅಗತ್ಯ ಇರುವವರಿಗೆ ಸಹಾಯ ಮಾಡುತ್ತೇನೆ ಎಂಬುದಾಗಿ ಹೇಳಿದ್ದರು. ಅದೇ ಪ್ರಕಾರ ಅವರು ಜೂನ್ 11ರಂದು ತಮ್ಮ ಜನ್ಮದಿನದ ಪ್ರಯುಕ್ತ ಬಡವರಿಗೆ ಕಣ್ಣಿನ ಆಪರೇಷನ್ ಮಾಡಿಸುವೆ ಎಂಬುದಾಗಿ ಹೇಳಿದ್ದ ಮಾತನ್ನು ಉಳಿಸಿಕೊಂಡಿದ್ದಾರೆ.
ಆರ್ಥಿಕವಾಗಿ ಹಿಂದುಳಿದಿರುವ, ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವ ಬಡವರಿಗೆ ಸಹಾಯ ಮಾಡುತ್ತೇನೆ ಎಂದು ಡೋನ್ ಪ್ರತಾಪ್ ಹೇಳಿದ್ದರು. ಈಗ ಅವರು ತಾನು ನುಡಿದಂತೆ ನಡೆದುಕೊಂಡಿದ್ದಾರೆ. ಅಜ್ಜಿಯೊಬ್ಬರಿಗೆ ಆಪರೇಷನ್ (eye operation) ಮಾಡಿಸಿದ್ದು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಡಾಕ್ಟರ್ ರಾಜಕುಮಾರ್ ಅವರು ನೇತ್ರದಾನ ಮಹಾದಾನ ಅಂತ ಹೇಳ್ತಾರೆ, ಈ ಬಾರಿ ನನ್ನ ಹುಟ್ಟುಹಬ್ಬವನ್ನ ಬಹಳ ವಿಶೇಷವಾಗಿ ಆಚರಣೆ ಮಾಡಬೇಕು ಅನ್ಕೊಂಡಿದ್ದೀನಿ. ಅದಕ್ಕಾಗಿ ಕಣ್ಣಿನ ಸಮಸ್ಯೆಯಿಂದ ಬಳಲ್ತಿರೋ ಐದು ಜನರಿಗೆ ಶಸ್ತ್ರಚಿಕಿತ್ಸೆ ಮಾಡಿಸಬೇಕು ಅನ್ಕೊಂಡಿದ್ದೀನಿ ಎಂದು ಹೇಳಿದ್ದರು ಪ್ರತಾಪ್. ಈಗ ಅದರ ಪ್ರಕಾರ ಅಜ್ಜಿಯೊಬ್ಬರಿಗೆ ಕಣ್ಣಿನ ಆಪರೇಷನ್ ಮಾಡಿಸಿದ್ದಾರೆ.
ಇಬ್ಬರು ಮಕ್ಕಳಿದ್ರೂ ಗುಡಿಸಲಲ್ಲಿ ವಾಸಿಸುತ್ತಿರುವ ಅಜ್ಜಿಯೊಬ್ಬರಿಗೆ ಪ್ರತಾಪ್ ಕಣ್ಣಿನ ಆಪರೇಷನ್ ಮಾಡಿಸಿದ್ದಾರೆ. ಆಪರೇಷನ್ ನಂತರ ಅಜ್ಜಿ ನನಗೆ ಈಗ ಕಣ್ಣು ಸರಿಯಾಗಿ ಕಾಣುತ್ತಿದೆ ಅಂತ ಹೇಳಿದ್ದಾರೆ. ಈ ವಿಡಿಯೋವನ್ನು ಪ್ರತಾಪ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಇದನ್ನು ನೋಡಿದ ಅವರ ಅಭಿಮಾನಿಗಳು ಮತ್ತು ನೆಟ್ಟಿಗರು ಪ್ರತಾಪ್ ನಡೆಗೆ ಮೆಚ್ಚುಗೆಗಳನ್ನು ನೀಡಿದ್ದಾರೆ.
Anushka Shetty : ಲೋನ್ ಕಟ್ಟಲಾಗದ ಡ್ರೈವರ್ ಗೆ 12 ಲಕ್ಷ ರೂ. ಕಾರ್ ಗಿಫ್ಟ್ ಕೊಟ್ಟ ಅನುಷ್ಕಾ; ಎಷ್ಟೊಳ್ಳೆ ಮನಸ್ಸು