Bigg Boss: ಹಿಂದಿಯಲ್ಲಿ ಬಿಗ್ ಬಾಸ್ (Bigg Boss) ಒಟಿಟಿ ಸೀಸನ್ 3’ ಆರಂಭವಾಗಿ ದಿನಗಳೇ ಕಳೆದಿದೆ. ಈ ಸಲ ಕೂಡಾ ಸೋಶಿಯಲ್ ಮೀಡಿಯಾ ಸ್ಟಾರ್ ಗಳು ಸದ್ದು ಮಾಡಿದ್ದಾರೆ. ಅದರಲ್ಲೂ ಅರ್ಮಾನ್ ಮಲಿಕ್ (Armaan Malik) ವಿಷಯಗಳಂತೂ ಸಿಕ್ಕಾಪಟ್ಟೆ ಚರ್ಚೆ ಆಗ್ತಿದೆ. ಯೂಟ್ಯೂಬ್ ನಲ್ಲಿ ತನ್ನ ಇಬ್ರು ಹೆಂಡ್ತಿಯರ ಜೊತೆ ವೀಡಿಯೋ ಮಾಡಿನೇ ಫೇಮಸ್ ಆಗಿರೋ ಇವರು ಇಬ್ಬರು ಹೆಂಡ್ತೀರ ಜೊತೆಗೆ ಬಿಗ್ ಬಾಸ್ ಮನೆಗೆ ಎಂಟ್ರಿಯನ್ನು ಕೊಟ್ಟಿದ್ರು.
ಹೌದು, ಅರ್ಮಾನ್ ಮಲಿಕ್ ಬಿಗ್ ಬಾಸ್ ಶೋನಲ್ಲಿ ತನ್ನ ಇಬ್ಬರು ಪತ್ನಿಯರಾದ ಪಾಯಲ್ ಮಲಿಕ್ (Payal Malik), ಕೃತಿಕಾ ಮಲಿಕ್ (Kritika Malik) ಜೊತೆ ಎಂಟ್ರಿ ಕೊಟ್ಟಿದ್ರು. ಆದರೆ ಪಾಯಲ್ ಈಗಾಗಲೇ ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಾಗಿದೆ. ಈಗ ಬಿಗ್ ಬಾಸ್ ಮನೆಯೊಳಗಡೆ ಅರ್ಮಾನ್ ಹಾಗೂ ಕೃತಿಕಾ ಅವರು ಇದ್ದಾರೆ.
ಅಲ್ಲದೇ ಅವರ ರೋಮ್ಯಾಂಟಿಕ್ ದೃಶ್ಯಗಳು ದೊಡ್ಡ ಸಂಚಲನಕ್ಕೆ ಕಾರಣವಾಗಿದೆ. ಇಷ್ಟುದಿನ ಗಂಡ ಹಾಗೂ ತನ್ನ ಸವತಿಯ ಜೊತೆಗೆ ಖುಷಿಯಾಗಿ ಒಟ್ಟಿಗೆ ಇದ್ದ ಪಾಯಲ್ ಈಗ ಇದ್ದಕ್ಕಿದ್ದ ಹಾಗೆ ತನ್ನ ಪತಿಗೆ ವಿಚ್ಛೇದನ ಕೊಡೋದಕ್ಕೆ ರೆಡಿ ಆಗಿದ್ದಾರೆ ಅನ್ನೋ ಶಾಕಿಂಗ್ ಸುದ್ದಿ ವೈರಲ್ ಆಗ್ತಿದೆ. ಪಾಯಲ್ ಮಾತನಾಡ್ತಾ, ನನಗೆ ಈ ಡ್ರಾಮಾ, ದ್ವೇಷ ನೋಡಿ ಸಾಕಾಗಿದೆ.
ಇಲ್ಲಿಯವರೆಗೆ ನನ್ನ ಬಗ್ಗೆ ಮಾತನಾಡುತ್ತಿದ್ದರು. ಅದಕ್ಕೆ ನಾನು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದ್ರೆ ಈಗ ನನ್ನ ಮಕ್ಕಳ ಬಗ್ಗೆ ಮಾತನಾಡೋಕೆ ಪ್ರಾರಂಭ ಮಾಡಿದ್ದು, ಅದನ್ನ ನೋಡಿ ನಾನು ಶಾಕ್ ಆಗಿದ್ದೀನಿ ಅಲ್ಲದೇ ನನಗೆ ಅಸಹ್ಯ ಕೂಡಾ ಆಗ್ತಿದೆ. ಅದೇ ಕಾರಣದಿಂದ ಈಗ ನಾನು ಅರ್ಮಾನ್ ಅವರಿಂದ ದೂರ ಇರೋದಕ್ಕೆ ನಿರ್ಧಾರ ಮಾಡಿದ್ದೇನೆ, ಕೃತಿಕಾ ಅವನ ಜೊತೆ ಇರಲಿ.
ಜೈದ್ ಇಲ್ಲದೆ ಕೃತಿಕಾ ಇರೋದಿಲ್ಲ. ನಾನು ಮೂವರು ಮಕ್ಕಳ ಜೊತೆ ಇರ್ತೀನಿ.ಜನರು ಈ ತರದ ಬಹುಪತ್ನಿತ್ನವನ್ನು ಇಷ್ಟ ಪಡೋದಿಲ್ಲ. ನಾನು ಕೂಡಾ ಈ ಥರದ ದ್ವೇಷವನ್ನು ಬಹಳ ದಿನಗಳ ಕಾಲ ಸಹಿಸಿಕೊಳ್ಳೋದಕ್ಕೆ ಆಗಲ್ಲ ಎನ್ನುವ ಮಾತುಗಳನ್ನ ಪಾಯಲ್ ಹೇಳಿಕೊಂಡಿದ್ದು, ವಿಚ್ಚೇದನದ ಸುಳಿವನ್ನು ನೀಡಿದ್ದಾರೆ.
Actor Suriya: ರಾಜಮೌಳಿ ಸಿನಿಮಾನ ರಿಜೆಕ್ಟ್ ಮಾಡಿದ್ದ ಸೂರ್ಯ, ಆದ್ರೆ ಆ ಸಿನಿಮಾ ಆಗಿತ್ತು ಬ್ಲಾಕ್ ಬಸ್ಟರ್ ಹಿಟ್