Nithu Vanajakshi: ಬಿಗ್ ಬಾಸ್ ಕನ್ನಡ ಸೀಸನ್ 10ರ (Bigg Boss Kannada 10) ಮೂಲಕ ಬಹಳಷ್ಟು ಜನಪ್ರಿಯತೆಯನ್ನು ಪಡೆದುಕೊಂಡ ಸೆಲೆಬ್ರಿಟಿಗಳಲ್ಲಿ ನೀತು ವನಜಾಕ್ಷಿ (Nithu Vanajaksshi) ಅವರೂ ಒಬ್ಬರಾಗಿದ್ದಾರೆ. ಇದೇ ಮೊದಲ ಬಾರಿಗೆ ನೀತು ಅವರು ಹೆಣ್ಣಾಗಿ (Trans Woman) ಪರಿವರ್ತನೆ ಹೊಂದುವ ಸಂದರ್ಭದಲ್ಲಿ ಎದುರಾಗುವ ಕಷ್ಟಗಳನ್ನು ಕುರಿತಾಗಿ ವಿವರಿಸಿದ್ದು, ಸರ್ಜರಿ ಯಾವ ರೀತಿಯಲ್ಲಿ ಇರುತ್ತದೆ, ಯಾವ ರೀತಿಯಲ್ಲಿ ಜೀವನ ಮಾಡಬೇಕಾಗುತ್ತದೆ ಹಾಗೂ ಎಷ್ಟು ಬೆಲೆ ಇರುತ್ತದೆ ಎನ್ನುವ ವಿಚಾರಗಳನ್ನ ಹಂಚಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
ಗಂಡಿನಿಂದ ಹೆಣ್ಣಾಗಿ ಪರಿವರ್ತನೆ ಆಗೋದಕ್ಕೆ ಸುಮಾರು 10 ರಿಂದ 12 ಲಕ್ಷ ರೂಪಾಯಿಗಳು ಬೇಕಾಗುತ್ತದೆ. ಹಾರ್ಮೋನ್ ಇಂಜೆಕ್ಷನ್ ಗೆ ಸುಮಾರು ಒಂದೆರಡು ಲಕ್ಷ ರೂಪಾಯಿಗಳ ಖರ್ಚಾಗುತ್ತದೆ. ದೊಡ್ಡ ಸರ್ಜರಿಗೆ (Surgery) ಆರು ಲಕ್ಷ, ಅನಂತರ ನಡೆಯುವ ಸಣ್ಣ ಪುಟ್ಟ ಶಸ್ತ್ರ ಚಿಕಿತ್ಸೆಗಳಿಗೆ ಎರಡು ಲಕ್ಷ ಬೇಕಾಗುತ್ತದೆ. ಸರ್ಜರಿಯಾದ ನಂತರ ನಮ್ಮನ್ನು ನಾವು ಮೈನ್ಟೈನ್ ಮಾಡಿಕೊಳ್ಳಬೇಕಾಗುತ್ತದೆ. ದಿನಕ್ಕೆ ಎರಡು ಎಳನೀರು ಕುಡಿಯಬೇಕು.
ಸರಿಯಾದ ಪ್ರಮಾಣದಲ್ಲಿ ಪ್ರೋಟೀನ್ ಸೇವನೆ ಮಾಡಬೇಕು. ಕೆಲವರು ಸರ್ಜರಿಯ ನಂತರ ದಪ್ಪ ಆಗುತ್ತಾರೆ ಆಗ ಫಿಟ್ ಆಗಿ ನೋಡಿಕೊಳ್ಳಬೇಕು. ನನ್ನ ಸರ್ಜರಿ ಆಗಿದ್ದು ದೆಹಲಿಯಲ್ಲಿ. ಬಹಳ ಒಳ್ಳೆಯ ಡಾಕ್ಟರ್ ಸಿಕ್ಕಿದ್ರು, ವಿದೇಶದಿಂದ ಬಂದು ಸರ್ಜರಿಯನ್ನು ಮಾಡಿಸುತ್ತಾರೆ ಎನ್ನುವ ವಿಷಯಗಳನ್ನು ನೀತು ವನಜಾಕ್ಷಿಯವರು ಆರ್ ಜೆ ರಾಜೇಶ್ ಯೂಟ್ಯೂಬ್ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.
ಈಗ ತಂತ್ರಜ್ಞಾನ ಸಾಕಷ್ಟು ಮುಂದುವರೆದಿದೆ. ಪೂರ್ಣ ಹೆಣ್ಣಾಗಿ ಪರಿವರ್ತನೆ ಆಗಿರುತ್ತೇವೆ ಆದರೆ ಗರ್ಭಕೋಶ ಇರೋದಿಲ್ಲ. ಸರ್ಜರಿ ಅಂದ್ರೆ ಅದು ಸುಮ್ಮನೆ ಅಲ್ಲ, ಅದರಲ್ಲಿ ತುಂಬಾ ಕಷ್ಟ ಇರುತ್ತದೆ. ನಾನು ಸರ್ಜರಿ ಮಾಡಿಸಿಕೊಳ್ಳುವ ಸಮಯದಲ್ಲಿ ಒಂಟಿಯಾಗಿ ಪ್ರಯಾಣ ಮಾಡುತ್ತಿದ್ದೆ. ಅಲ್ಲಿನ ವೈದ್ಯರ ಜೊತೆಗೆ ಕೌನ್ಸಿಲಿಂಗ್ ಮುಗಿಸಿಕೊಂಡ ನಂತರ ಸರ್ಜರಿ ಮಾಡ್ತಾರೆ. ನಾವು ಸತ್ತರೆ ಅದಕ್ಕೆ ನಾವೇ ಹೊಣೆ ಅಂತ ಪೇಪರ್ ನಲ್ಲಿ ಸಹಿ ಮಾಡಿಸಿಕೊಳ್ಳುತ್ತಾರೆ.
ಯಾಕಂದ್ರೆ ಆಪರೇಷನ್ ಅಷ್ಟೊಂದು ರಿಸ್ಕ್ ಆಗಿರುತ್ತೆ, ಆ ಪೇಪರ್ ಸಹಿ ಮಾಡುವಾಗ ಕಣ್ಣೀರು ಹಾಕುತ್ತಿದ್ದೆ. ಖುಷಿಯ ಕಣ್ಣೀರು ನಾನು ಹೆಣ್ಣಾಗಿದ್ದೀನಿ ಅಂತ ಎಂದು ನೀತು ಹೇಳಿಕೊಂಡಿದ್ದಾರೆ. ಈ ಸರ್ಜರಿಗೆ ಸುಮಾರು 5 ಗಂಟೆಗಳ ಸಮಯ ಹಿಡಿಯುತ್ತೆ. ಅಲ್ಲಿ ದಿನಕ್ಕೆ ಒಬ್ಬರಿಗೆ ಮಾತ್ರ ಸರ್ಜರಿಯನ್ನು ಮಾಡ್ತಾರೆ. ಒಂದೂವರೆ ದಿನ ಆದಮೇಲೆ ನೋವು ಹೆಚ್ಚಾಗುತ್ತೆ. ಆ ನೋವನ್ನು ತಡೆದುಕೊಂಡಿರುವೆ ಯಾಕಂದ್ರೆ ಅದರಲ್ಲಿ ಒಂದು ಸುಖ ಇರುತ್ತೆ ಅನ್ನೋ ಮಾತನ್ನು ನೀತು ಹೇಳಿದ್ದಾರೆ.