ಸ್ವಂತ ಮನೆಗೆ ಕಾಲಿಟ್ಟ ಸಂಭ್ರಮದಲ್ಲಿ ಬಿಗ್ ಬಾಸ್ ಖ್ಯಾತಿಯ Anupama Gowda, ವೈರಲ್ ಆಯ್ತು ಫೋಟೋಗಳು

Written by Soma Shekar

Published on:

---Join Our Channel---

Anupama Gowda : ಜನಪ್ರಿಯ ನಿರೂಪಕಿ ಬಿಗ್ ಬಾಸ್’ (Bigg Boss) ಖ್ಯಾತಿಯ ಅನುಪಮಾ ಗೌಡ (Anupama Gowda) ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ. ಈಗಾಗಲೇ ಜನಪ್ರಿಯ ಶೋಗಳನ್ನು ನಿರೂಪಣೆ ಮಾಡುವ ಮೂಲಕ ಹೆಸರು ಮತ್ತು ಖ್ಯಾತಿಯನ್ನು ಪಡೆದುಕೊಂಡಿರುವ ಅನುಪಮಾ ಗೌಡ ಅವರು ಹೊಸ ಮನೆಗೆ ಕಾಲಿಟ್ಟ ಖುಷಿಯಲ್ಲಿದ್ದಾರೆ.‌

ಅನುಪಮಾ ಗೌಡ ಹೊಸ ಐಷಾರಾಮಿ ಮನೆಯನ್ನು ಖರೀದಿ ಮಾಡಿದ್ದಾರೆ. ಅವರ ಈ ಹೊಸ ಮನೆಯ ಗೃಹ ಪ್ರವೇಶ ಕಾರ್ಯಕ್ರಮವು ಬಹಳ ಸಂಭ್ರಮದಿಂದ ನೆರವೇರಿದೆ. ವರ್ಷಗಳ ಅವರ ಕನಸು ಈಗ ನನಸಾಗಿದೆ.‌

ಅನುಪಮ ಅವರ ಹೊಸ ಮನೆಯ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಕಿರುತೆರೆಯ ಹಲವು ಜನಪ್ರಿಯ ನಟ, ನಟಿಯರು ಹಾಜರಾಗಿದ್ದರು. ಅನುಪಮ ಅವರು ತಮ್ಮ ಹೊಸ ಮನೆಗೆ ನಮ್ಮನೆ ಎನ್ನುವ ಹೆಸರನ್ನು ಇಟ್ಟಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಗೃಹ ಪ್ರವೇಶದ ಫೋಟೋಗಳು ಹರಿದಾಡಿವೆ.

ಅನುಪಮಾ ಅವರ ಮನೆಯ ಕಾರ್ಯಕ್ರಮದಲ್ಲಿ ಜನಪ್ರಿಯ ನಟಿ ಅನು ಪ್ರಭಾಕರ್, ನೇಹಾ ಗೌಡ, ನಮ್ರತಾ ಗೌಡ, ಕಿಶನ್ ಬಿಳಗಲಿ, ಕಾರ್ತಿಕ್ ಮಹೇಶ್, ದಿವ್ಯಾ ಉರುಡುಗ ಸೇರಿದಂತೆ ಅನೇಕರು ಭಾಗಿಯಾಗಿ ಶುಭಕೋರಿದ್ದಾರೆ ಮತ್ತು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

Bigg Boss Kannada ಮನೆಯಲ್ಲಿ ನರಕ ಧ್ವಂಸ ಮಾಡಿದ್ದೇಕೆ, ಹೊರ ಬಿತ್ತು ಅಸಲಿ ಕಾರಣ, 5 ದಿನಗಳ ಡೆಡ್ ಲೈನ್

Leave a Comment