Namratha Gowda : ಸಿನಿಮಾ ಯಾಕೆ ಮಾಡ್ತಿಲ್ಲ? ಕಾರಣ ಕೊಟ್ಟ ನಮ್ರತಾ; ಇದನ್ನ ನಂಬಬೇಕಾ ಅಂದ್ರು ನೆಟ್ಟಿಗರು

Written by Soma Shekar

Published on:

---Join Our Channel---

Namratha Gowda : ಕಿರುತೆರೆಯ ಜನಪ್ರಿಯ ನಟಿಯರಲ್ಲಿ ನಮ್ರತಾ ಗೌಡ (Namratha Gowda) ಅವರೂ ಒಬ್ಬರು. ನಾಗಿಣಿ 2 ಸೀರಿಯಲ್ ಅದಾದ ನಂತರ ಬಿಗ್ ಬಾಸ್ ಕನ್ನಡ 10 ರ (Bigg Boss Kannada 10)ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿರುವ ಈ ನಟಿ ಸೋಶಿಯಲ್ ಮೀಡಿಯಾಗಳಲ್ಲಿ ಸಹಾ ಸಕ್ರಿಯರಾಗಿದ್ದಾರೆ. ಬಿಗ್ ಬಾಸ್ ನ ನಂತರ ನಟಿ ಯಾವುದೇ ಹೊಸ ಸೀರಿಯಲ್ ಅಥವಾ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಆದರೆ ನಟಿಯನ್ನು ಕೆಲವು ಸಂದರ್ಭಗಳಲ್ಲಿ ಕೆಲವರು ಟ್ರೋಲ್ ಸಹಾ ಮಾಡಿದ್ದಾರೆ. ಇವೆಲ್ಲವುಗಳ ನಡುವೆ ನಟಿ ತಾನೇಕೆ ಸಿನಿಮಾ ಮಾಡುತ್ತಿಲ್ಲ ಎನ್ನುವುದಕ್ಕೆ ಉತ್ತರ ಕೊಟ್ಟಿದ್ದಾರೆ.

ನಾನು ಬೇಕಂತಲೇ ಸಿನಿಮಾಗಳನ್ನ ಒಪ್ಪಿಕೊಳ್ತಿಲ್ಲ. ಯಾಕೆಂದ್ರೆ ನನಗೂ ಸಹಾ ಸಾಮಾನ್ಯ ಜನರ ಹಾಗೆ ತಿಂಗಳಿಗೆ ಬಾಡಿಗೆ ಕಟ್ಟಬೇಕು, ಇಎಂಐ ಕಟ್ಟಬೇಕು ಹೀಗೆ ಬಹಳ ಕಮಿಟ್ಮೆಂಟ್ಸ್ ಇದೆ. ಅದಕ್ಕೆ ತಿಂಗಳಿಗೆ ಸಂಬಳದ ರೂಪದಲ್ಲಿ ಬರುತ್ತಿದ್ದರೆ ಚೆನ್ನಾಗಿರುತ್ತೆ. ಅದು ಸೀರಿಯಲ್ ಗಳಲ್ಲಿ ಮಾತ್ರ ಸಾಧ್ಯ. ಸೀರಿಯಲ್ ನಲ್ಲಿ ತಿಂಗಳಿಗೆ ಪೇಮೆಂಟ್ ಬರುತ್ತೆ. ಅದಕ್ಕೆ ಸೀರಿಯಲ್ ಸೇಫ್ ಎಂದು ಹೇಳಿದ್ದಾರೆ.

ಇದೇ ವೇಳೆ ಅವರು, ಸಿನಿಮಾದಲ್ಲಿ ಹೇಗೆ ಪೇಮೆಂಟ್ ಅನ್ನೋದು ನನಗೆ ಗೊತ್ತಿಲ್ಲ. ಆದರೆ ಸೀರಿಯಲ್ ಒಪ್ಪಿಕೊಂಡರೆ ತಿಂಗಳು ತಿಂಗಳು ದುಡ್ಡು ಬರುತ್ತೆ. ಅದಕ್ಕಾಗಿ ಸಿನಿಮಾಕ್ಕೆ ಹೋಗಿಲ್ಲ ಎನ್ನುವ ಮಾತನ್ನ ಹೇಳಿದ್ದಾರೆ. ಸೀರಿಯಲ್ ಸರ್ಕಾರಿ ಕೆಲಸ ಇದ್ದ ಹಾಗೆ ಎಷ್ಟು ದಿನ ಆ್ಯಕ್ಟ್ ಮಾಡ್ತೀವೋ ಅಷ್ಟು ಸಂಬಳ ಪ್ರತಿ ತಿಂಗಳು ಕೊಡ್ತಾರೆ. ನನಗೆ ಅದೇ ಅಭ್ಯಾಸ ಆಗಿ ಹೋಗಿದೆ. ಯಾವಾಗ್ಯಾವಾಗೋ ಬರೋ ದುಡ್ಡಿಗಿಂತ ಪ್ರತಿ ತಿಂಗಳು ದುಡ್ಡು ಬೇಕು.

ಇದರಿಂದ ಪ್ರತಿ ತಿಂಗಳು ಉಳಿತಾಯ ಮಾಡೋಕಾಗುತ್ತೆ, ಸೀರಿಯಲ್ ಸೇಫ್ ಮಾತ್ರ ಅಲ್ಲ ನೇಮ್ , ಫೇಮ್ ಕೂಡಾ ಬರುತ್ತೆ ಎಂದಿದ್ದಾರೆ ನಮ್ರತಾ. ಆದರೆ ನೆಟ್ಟಿಗರು ಇದನ್ನೂ ವ್ಯಂಗ್ಯ ಮಾಡ್ತಾ, ಸಿನಿಮಾದಲ್ಲಿ ಹೇಗೆ ಅಂತ ಗೊತ್ತಿಲ್ಲ ಅಂದ್ಮೇಲೆ ಅದ್ರ ಬಗ್ಗೆ ಯಾಕೆ ಮಾತಾಡ್ತೀರಾ ಎಂದಿದ್ದಾರೆ. ಅಲ್ಲದೇ ಚಾನ್ಸ್ ಸಿಕ್ಕಿಲ್ಲ ಅಂತ ನೇರವಾಗಿ ಹೇಳಿ ಅದು ಬಿಟ್ಟು ಹೀಗೆ ಸುತ್ತಿ ಬಳಸಿ ಯಾಕೆ ಹೇಳ್ತೀರಾ ಎಂದು ಕೂಡಾ ನಟಿಯ ಕಾಲೆಳೆದಿದ್ದಾರೆ.

Nayanthara : ನಯನತಾರಾಗೆ 24 ಗಂಟೆಗಳ ಎಚ್ಚರಿಕೆ ಕೊಟ್ಟ ಧನುಷ್; ಮತ್ತೊಂದು ಹಂತ ತಲುಪಿದ ಸ್ಟಾರ್ ವಾರ್

Leave a Comment