Asim Riaz ಬಿಗ್ ಬಾಸ್ ಸ್ಪರ್ಧಿಯ ದುರಹಂಕಾರ, ರೋಹಿತ್ ಶೆಟ್ಟಿ ಶೋನಿಂದ ಹೊರ ಹಾಕಿದ ತಂಡ; ಫ್ಯಾನ್ಸ್ ಶಾಕ್

Written by Soma Shekar

Published on:

---Join Our Channel---

Asim Riaz ಹಿಂದಿ ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗೋ ಆ್ಯಕ್ಷನ್ ರಿಯಾಲಿಟಿ ಶೋ ‘Fear Factor: Khatron Ke Khiladi ‘ ಸಾಕಷ್ಟು ಜನಪ್ರಿಯತೆ ಪಡೆದಿದೆ. ಆದರೆ ಈಗ ಈ ಶೋ ನಿಂದ ಸ್ಪರ್ಧಿ ಆಸಿಮ್ ರಿಯಾಜ್ (Asim Riaz) ಅವರನ್ನು ಹೊರ ಹಾಕಲಾಗಿದೆ. ಆಸಿಮ್ ರಿಯಾಜ್ ಬಿಗ್ ಬಾಸ್ ನ ಮಾಜಿ ಸ್ಪರ್ಧಿ ಹಾಗೂ ರನ್ನರ್ ಅಪ್ ಸಹಾ ಹೌದು. ಆದರೆ ಖತ್ತೋಂ ಕೆ ಖಿಲಾಡಿಯಲ್ಲಿನ ದುರ್ವತನೆಗಾಗಿ ಶೋ ನಿಂದ ಹೊರಗೆ ಕಳಿಸಲಾಗಿದೆ.

ಆಸಿಮ್ ಈ ಹಿಂದೆ ಬಿಗ್ ಬಾಸ್ ನಲ್ಲಿ ಸ್ಪರ್ಧಿಯಾಗಿದ್ದ ವೇಳೆ ಆ ಸೀಸನ್ ವಿನ್ನರ್ ದಿವಂಗತ ಸಿದ್ಧಾರ್ಥ್ ಶುಕ್ಲಾ ಜೊತೆಗೆ ಸಿಕ್ಕಾಪಟ್ಟೆ ಜಗಳ ಮಾಡಿಯೇ ಸುದ್ದಿಯಾಗಿದ್ದರು. ಸೀಸನ್ ಹದಿಮೂರರಲ್ಲಿ ಆಸಿಮ್ ರನ್ನರ್ ಅಪ್ ಆಗಿದ್ದರು. ಇದಲ್ಲದೇ ಮತ್ತೊಬ್ಬ ಸ್ಪರ್ಧಿ ಹಿಮಾನ್ಷಿ ಖುರಾನಾ ಜೊತೆಗಿನ ಪ್ರೇಮದಿಂದಲೂ ನಟ ಸುದ್ದಿಯಾಗಿದ್ದರು.

ಈಗ ಖತ್ರೋಂ ಕೆ ಖಿಲಾಡಿಯಲ್ಲಿ ಆಸಿಮ್ ಅನ್ಯ ಸ್ಪರ್ಧಿಗಳ ಬಗ್ಗೆ ತೋರಿದ ದುರ್ವರ್ತನೆ ಹಾಗೂ ಕಾರ್ಯಕ್ರಮದ ನಿರೂಪಕ, ಬಾಲಿವುಡ್ ನ ಸಿನಿಮಾಗಳ ನಿರ್ದೇಶಕ ರೋಹಿತ್ ಶೆಟ್ಟಿ (Rohit Shetty) ಅವರನ್ನು ಅಗೌರವಿಸಿದ ಕಾರಣದಿಂದಾಗಿ ಅವರನ್ನ ಶೋ ನಿಂದ ಹೊರಗಡೆ ಕಳಿಸಲಾಗಿದೆ. ಆಸಿಮ್ ಅಭಿಮಾನಿಯಳು ಈ ವಿಚಾರ ಕೇಳಿ ಶಾಕ್ ಆಗಿದ್ದಾರೆ.

ಶೋ‌ನ ಚಿತ್ರೀಕರಣ ಸೌತ್ ಆಫ್ರಿಕಾದಲ್ಲಿ ನಡೀತಿದ್ದು, ಆಸಿಮ್ ಟಾಸ್ಕ್ ಒಂದರಲ್ಲಿ ಸೋತಾಗ ಮಾಡೋದಕ್ಕೆ ಆಗದೇ ಇರೋ ಟಾಸ್ಕ್ ಕೊಟ್ಟಿರೋದಾಗಿ ಆಯೋಜಕರ ಮೇಲೆ ಸಿಟ್ಟಾಗಿದ್ದಾರೆ. ರೋಹಿತ್ ಶೆಟ್ಟಿ ಅವರ ಮಾತಿಗೂ ಕೂಡಾ ಆಸಿಮ್ ಯಾವುದೇ ರೀತಿಯ ಗೌರವವನ್ನು ನೀಡಿಲ್ಲ ಎಂದು ಹೇಳಲಾಗಿದೆ.

ಆಸಿಮ್ ಅವರ ಅತಿಯಾದ ಆತ್ಮವಿಶ್ವಾಸ ಹಾಗೂ ದುರಹಂಕಾರದ ಕಾರಣದಿಂದ ಅವರು ಅನ್ಯ ಸ್ಪರ್ಧಿಗಳ ಜೊತೆಗೆ ಸಹಾ ಸರಿಯಾಗಿ ನಡೆದುಕೊಂಡಿಲ್ಲ ಎಂದು ತಿಳಿದು ಬಂದಿದೆ. ಆಸಿಮ್ ಶೋ ಗೆ ಬರ್ತಾರೆ ಅಂತ ಖುಷಿಯಾಗಿದ್ದ ಅವರ ಫ್ಯಾನ್ಸ್ ಈಗ ಆಸಿಮ್ ನ ಹೊರ ಹಾಕಿರೋದಕ್ಕೆ ಬೇಸರ ಪಟ್ಟಿದ್ದಾರೆ.

ಇನ್ನು ಆಸಿಮ್ ಕೂಡಾ ತಾನು ಶೋ ನಿಂದ ತನಗೆ ಸಿಗಲಿರುವ ಹಣ ಸಹಾ ಬೇಡ ಎಂದು ಕೋಪದಿಂದಲೇ ಹೇಳಿದ್ದಾರೆ ಎನ್ನುವ ಮಾತುಗಳು ಸಹಾ ಕೇಳಿ ಬಂದಿದೆ. ಫ್ಯಾನ್ಸ್ ಗಾಗಿ ನಾನು ಶೋ ಗೆ ಬಂದಿದ್ದೆ, ನನಗೆ ಶೋ ನಿಂದ ಒಂದು ರೂಪಾಯಿ ಕೂಡಾ ಬೇಕಾಗಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.

Leave a Comment