Bigg Boss Kannada: ಬಿಗ್ ಬಾಸ್ ಗೂ ಮೊದಲೇ ಹೊಸ ಸೀರಿಯಲ್, ಹಾಗಾದ್ರೆ ಮುಕ್ತಾಯವಾಗೋದು ಯಾವ ಸೀರಿಯಲ್ ?

Written by Soma Shekar

Published on:

---Join Our Channel---

Bigg Boss Kannada : ಬಿಗ್ ಬಾಸ್ ಕನ್ನಡ (Bigg Boss Kannada) ಸೀಸನ್ 11 ಕ್ಕೆ ಸಿದ್ಧತೆಗಳು ನಡೆಯುತ್ತಿದೆ ಎನ್ನುವ ಸುದ್ದಿಗಳು ಆಗಾಗ ಆಗುತ್ತಲೇ ಇದೆ.‌ ಬಿಗ್ ಬಾಸ್ ಅಭಿಮಾನಿಗಳು ಯಾವಾಗ ಹೊಸ ಸೀಸನ್ ಆರಂಭವಾಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ.‌ ಸಾಮಾನ್ಯವಾಗಿ ಬಿಗ್ ಬಾಸ್ ಆರಂಭವಾಗುವುದೆಂದರೆ ಒಂದಷ್ಟು ಸೀರಿಯಲ್ ಗಳು ಮುಕ್ತಾಯವಾಗುತ್ತದೆ. ಆದರೆ ಈ ಬಾರಿ ಬಿಗ್ ಬಾಸ್ ಸೀಸನ್ ಆರಂಭಕ್ಕೆ ಮೊದಲೇ ಹೊಸದೊಂದು ಸೀರಿಯಲ್ ಕಲರ್ಸ್ ವಾಹಿನಿಗೆ ಎಂಟ್ರಿಯನ್ನು ನೀಡಿದೆ.‌

ಹೌದು, ಕಿರುತೆರೆಯ ಸ್ಟಾರ್ ನಟ ಎಂದೇ ಕರೆಸಿಕೊಂಡಿರುವ ನಟ ವಿಜಯ್ ಸೂರ್ಯ (Vijay Surya) ಅವರು ನಾಯಕನಾಗಿ ಕಾಣಿಸಿಕೊಂಡಿರುವ ದೃಷ್ಟಿಬೊಟ್ಟು (Drushti Bottu) ಸೀರಿಯಲ್ ಶೀಘ್ರದಲ್ಲೇ ತನ್ನ ಪ್ರಸಾರವನ್ನು ಆರಂಭಿಸಲಿದೆ.‌ ವಿಜಯ್ ಸೂರ್ಯ ಅವರು ಖಡಕ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ನಟನ ಫ್ಯಾನ್ಸ್ ಪ್ರೊಮೊ ವನ್ನು ನೋಡಿ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ.

ದೃಷ್ಟಿಬೊಟ್ಟು ಸೀರಿಯಲ್ ಆರಂಭದ ಜೊತೆಗೆ ಕಲರ್ಸ್ ಕನ್ನಡದ ಕೆಲವೊಂದು ಸೀರಿಯಲ್ ಗಳು ಮುಕ್ತಾಯವಾಗಲಿದೆ. ಆದರೆ ಯಾವ ಸೀರಿಯಲ್ ಗಳು ಎನ್ನುವುದರ ಕುರಿತಾಗಿ ಇನ್ನೂ ಅಧಿಕೃತವಾದ ಮಾಹಿತಿ ಹೊರ ಬಂದಿಲ್ಲವಾದರೂ ಸೋಶಿಯಲ್ ಮೀಡಿಯಾಗಳಲ್ಲಿ ಪ್ರೇಕ್ಷಕರೇ ಇಂತಹ ಸೀರಿಯಲ್ ಮುಗಿಯಬಹುದೆಂದು ಊಹೆ ಮಾಡುತ್ತಿದ್ದಾರೆ.

ಇನ್ನು ಬಿಗ್ ಬಾಸ್ ಆರಂಭಕ್ಕೂ ಮೊದಲೇ ಈ ಬಾರಿ ಸುದೀಪ್ (Sudeep) ಅವರು ಕಾರ್ಯಕ್ರಮ ನಡೆಸಿಕೊಳ್ಳುವುದಿಲ್ಲ, ಅವರ ಜಾಗಕ್ಕೆ ಬೇರೊಬ್ಬ ಸ್ಟಾರ್ ನಟ ಬರಲಿದ್ದಾರೆ ಎನ್ನುವ ಸುದ್ದಿಗಳು ಸಹಾ ಹರಿದಾಡಿದೆ.‌ ಅಲ್ಲದೇ ಈಗಾಗಲೇ ಹೊಸ ಸೀಸನ್ ನ ಪ್ರೊಮೊ ಶೂಟ್ ಮುಗಿದಾಗಿದೆ ಎನ್ನುವ ಸುದ್ದಿಗಳು ಸಹಾ ಹರಿದಾಡುವ ಮೂಲಕ ಸುದ್ದಿಯಾಗಿದೆ.

Neha Gowda : ಗೊಂಬೆ ಖ್ಯಾತಿಯ ನಟಿ ನೇಹಾ ಗೌಡ ಅವರ ಸಂಭ್ರಮದ ಸೀಮಂತ, ಇಲ್ಲಿದೆ ಫೋಟೋಗಳು

Leave a Comment