BBK 11 : ಕಾಲಿಂದ ಒದ್ದ ಗೋಲ್ಡ್ ಸುರೇಶ್, ಶಾಪ ಹಾಕಿದ ಅನುಷಾ; ಬಿಗ್ ಬಾಸ್ ಮನೇಲಿ ಬರೀ ಜಗಳ ಜಗಳ

Written by Soma Shekar

Published on:

---Join Our Channel---

Bigg Boss Kannada : ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಗಲಾಟೆ, ಜಗಳ ಅನ್ನೋದು ಸಾಮಾನ್ಯ ಎನ್ನುವಂತಾಗಿದೆ. ಕಳೆದ ಕೆಲವು ಸೀಸನ್ ಗಳಿಂದಲೂ ಬಿಗ್ ಬಾಸ್ (BBK 11) ಮನೆ ಎಂದರೆ ಅಲ್ಲಿ ಮನರಂಜನೆಗಿಂತಲೂ ಜಗಳಗಳೇ ಹೆಚ್ಚಾಗಿದೆ ಎನ್ನುವುದು ಸಹಾ ಸತ್ಯ. ಈಗ ಹೊಸ ಟಾಸ್ಕ್ ನ ವೇಳೆಯಲ್ಲಿ ಮತ್ತೊಂದು ಗಲಾಟೆ ನಡೆದಿದೆ. ಡ್ರಮ್ ನಲ್ಲಿರುವ ನೀರು ಹೊರಗೆ ಹೋಗದಂತೆ ರಕ್ಷಕರು ತಡೆಯುವ ಟಾಸ್ಕ್ ಅನ್ನು ಬಿಗ್ ಬಾಸ್ ನೀಡಿದ್ದು ಇದಕ್ಕೆ ನಿಲ್ಲೇ ನಿಲ್ಲೇ ಕಾವೇರಿ ಎನ್ನುವ ಹೆಸರನ್ನು ನೀಡಲಾಗಿದೆ.

ತಮ್ಮ ತಂಡದ ಡ್ರಮ್ ನಲ್ಲಿನ ನೀರನ್ನು ಹೊರಗೆ ಹರಿಯದಂತೆ ಕಾಪಾಡಿಕೊಳ್ಳಬೇಕು. ಇದರಿಂದಾಗಿ ಮಹಿಳಾ ಸ್ಪರ್ಧಿಗಳು ಬೇರೆ ತಂಡಕ್ಕೆ ಹೋಗಿ ತೊಂದರೆ ನೀಡಿದ್ದು, ನೀರು ಡ್ರಮ್ ನಿಂದ ಹೊರಗೆ ಹರಿಸುವ ಪ್ರಯತ್ನವನ್ನು ಮಾಡಿದ್ದಾರೆ.‌ ಈ ಆಟದಲ್ಲಿ ಗೋಲ್ಡ್ ಸುರೇಶ್ (Gold Suresh) ಅವರು ತಮ್ಮ ಡ್ರಮ್ ಬಳಿ ಬಂದ ಸ್ಪರ್ಧಿಗಳನ್ನು ತಡೆಯಲು ಅವರನ್ನು ಗುದ್ದಿ ತಳ್ಳಿದ್ದಾರೆ. ಇದು ಅಸಮಾಧಾನಕ್ಕೆ ಕಾರಣವಾಗಿದೆ.

ಗೋಲ್ಡ್ ಸುರೇಶ್ ಹಾಗೆ ಗುದ್ದಿ ತಳ್ಳುವಾಗ ಅನುಷಾ (Anusha Rai) ಅವರು ಅಲ್ಲೇ ಇದ್ದರು. ಅವರಿಗೆ ಪೆಟ್ಟಾಗಿದ್ದು, ಕೋಪಗೊಂಡ ಅನುಷಾ ಅವರು ಕಾಮನ್ ಸೆನ್ಸ್ ಇಲ್ಲ ಹೇಗೆ ವರ್ತನೆ ಮಾಡಬೇಕೆಂತ, ಹೀಗೇನಾ ಮನೆಯಲ್ಲಿ ಬೆಳ್ಸಿದ್ದು ಎಂದಿದ್ದಾರೆ ಅನುಷಾ. ಅಲ್ಲದೇ ಕೈಯಲ್ಲಿ ಎಳೆಯೋಕೆ ಬಂದರೆ ಕಾಲಲ್ಲಿ ಒದೀತಾರೆ ಅಂತ ಕೂಡಾ ಅನುಷಾ ಸುರೇಶ್ ಮೇಲೆ ಸಿಟ್ಟಾಗಿದ್ದಾರೆ.

ನನ್ನನ್ನ ಅವರಪ್ಪ ಸಾಕ್ತಾನಾ ಅಂತ ಅನುಷಾ ಸುರೇಶ್ ಮೇಲೆ ಸಿಟ್ಟಾಗಿದ್ದಾರೆ. ಅನುಷಾ ಆಡಿದ ಮಾತುಗಳಿಂದ ಗೋಲ್ಡ್ ಸುರೇಶ್ ಸಹಾ‌ ಸಿಟ್ಟಾಗಿದ್ದಾರೆ. ಟಾಸ್ಕ್ ಮುಗಿದ ನಂತರ ಅನುಷಾ ಮತ್ತು ಸುರೇಶ್ ನಡುವೆ ಒಂದಷ್ಟು ಮಾತಿನ ಚಕಮಕಿ ನಡೆದಿದೆ. ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳನ್ನು ನಾಲ್ಕು ತಂಡಗಳಾಗಿ ವಿಭಜಿಸಿ ಹೊಸ ಟಾಸ್ಕ್ ಗಳು ಅದರ ಜೊತೆಗೆ ಒಂದಷ್ಟು ಅಧಿಕಾರಗಳನ್ನ ಸಹಾ ಬಿಗ್ ಬಾಸ್ ನೀಡುತ್ತಿದ್ದಾರೆ.

Actor Suriya: ಹಿರಿಯ ನಟನ ಮುಂದೆ ಶೋನಲ್ಲೇ ಕಣ್ಣೀರು ಹಾಕಿದ ನಟ ಸೂರ್ಯ; ಭಾವುಕರಾದ ಫ್ಯಾನ್ಸ್

Leave a Comment