Bigg Boss : ಬಿಗ್ ಬಾಸ್ (Bigg Boss) ಮನೆಯಲ್ಲಿ ದೈಹಿಕವಾಗಿ ದಾಳಿ ಮಾಡೋ ಹಾಗಿಲ್ಲ ಅನ್ನೋದು ನಿಯಮ. ಅದನ್ನ ಮೀರಿದ್ದಾರೆ ಅಂತ ಈಗಾಗಲೇ ರಂಜಿತ್ ಅವರನ್ನ ಮನೆಯಿಂದ ಹೊರಗೆ ಕಳಿಸಲಾಗಿದೆ. ಉದ್ದೇಶ ಪೂರ್ವಕವಾಗಿ ದೈಹಿಕ ದಾಳಿ ನಡೆಸಿದರೆ ತಪ್ಪು ಎನ್ನುವ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ನ (Task) ಹೆಸರಿನಲ್ಲಿ ಬೇಕಾದ್ರೆ, ಉದ್ದೇಶ ಪೂರ್ವಕವಾಗಿ ದೈಹಿಕ ದಾಳಿ ಮಾಡಬಹುದಾ? ಎನ್ನುವ ಹೊಸ ಪ್ರಶ್ನೆ ಈಗ ವೀಕ್ಷಕರನ್ನು ಕಾಡಲು ಆರಂಭವಾಗಿದೆ.
ಹೌದು, ನಿನ್ನೆಯ ಟಾಸ್ಕ್ ನಲ್ಲಿ ಬಿಗ್ ಬಾಸ್ ಆಡುವವರ ಏಕಾಗ್ರತೆ ಹಾಳು ಮಾಡಿ ಹೊರತಾಗಿ ದೈಹಿಕ ನೋವಾಗದಂತೆ ಎಚ್ಚರ ವಹಿಸಿ ಅಂತ ಉಸ್ತುವಾರಿಗೆ ಸೂಚನೆಯನ್ನು ನೀಡಲಾಗಿತ್ತು. ಆದರೆ ಟಾಸ್ಕ್ ನ ವೇಳೆ ನಡೆದಿದ್ದೇ ಬೇರೆ. ಇದನ್ನ ನೋಡಿ ವೀಕ್ಷಕರು ಸಹಾ ಶಾಕ್ ಆಗಿದ್ದಾರೆ. ಯಾರಿಗಾದ್ರೂ ಏನಾದ್ರು ತೊಂದರೆ ಆಗಿದ್ರೆ ಏನು ಗತಿ ಎಂದುಕೊಂಡಿದ್ದಾರೆ.
ಟಾಸ್ಕ್ ವೇಳೆ ಧರ್ಮ ಕೀರ್ತಿ (Dharma Keerthi) ಮತ್ತು ಅನುಷಾಗೆ (Anusha Rai) ದೈಹಿಕವಾಗಿ ತೀವ್ರವಾಗಿ ನೋವನ್ನು ನೀಡಿತ್ತು. ಟಾಸ್ಕ್ ಮುಗಿದ ಮೇಲೆ ಧರ್ಮ ಕೀರ್ತಿರಾಜ್ ಎದ್ದೇಳಲು ಒದ್ದಾಡಿದರು ಮತ್ತು ಅನುಷಾ ಬಿಕ್ಕಿ ಬಿಕ್ಕಿ ಅತ್ತರು. ಆದರೆ ಈ ಟಾಸ್ಕ್ ನಿಂದಾಗಿ ಕೆಲವು ಸ್ಪರ್ಧಿಗಳ ಮೃಗೀಯ ವರ್ತನೆಯು ಹೊರಗೆ ಬಂದಿದೆ.
ಟಾಸ್ಕ್ ನ ವಿಚಾರವಾಗಿ ನಡೆದ ಘಟನೆಯ ಬಗ್ಗೆ ಮಾತನಾಡುವಾಗ ತ್ರಿವಿಕ್ರಮ್ (Trivikram) ಆಡಿದಂತಹ ಮಾತುಗಳಂತೂ ಮನೆ ಮಂದಿಗೆ ಮಾತ್ರವೇ ಅಲ್ಲದೇ ವೀಕ್ಷಕರಿಗೂ ಅಸಮಾಧಾನ ಮೂಡಿಸಿದೆ. ಈ ವಿಷಯ ಈಗ ವ್ಯಾಪಕವಾಗಿ ಚರ್ಚೆಗೆ ಸಹಾ ಕಾರಣವಾಗಿದ್ದು, ಅನೇಕರು ಇದನ್ನು ವಿರೋಧಿಸಿದ್ದಾರೆ.
Bigg Boss ಮನೇಲಿ ನಾಮಿನೇಷನ್ ಮಾಡೋಕೆ ಹೆದರಿಬಿಟ್ನಾ ಹನುಮಂತ? ಬಿಗ್ ಬಾಸ್ ಗೆ ಕೊಟ್ಟ ಶಾಕಿಂಗ್ ಕಾರಣ