Bayilvan Ranganathan: ತಮಿಳು ನಟ ಮತ್ತು ಪತ್ರಕರ್ತ ಬೈಲ್ವಾನ್ ರಂಗನಾಥನ್ (Baylivan Ranganathan) ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಸಿನಿಮಾ ರಂಗದ ಕುರಿತಾಗಿ, ನಟ ನಟಿಯರ ಕುರಿತಾಗಿ ಆಗಾಗ ಮಾತನಾಡುವ ಮೂಲಕವೇ ವಿ ವಾ ದಗಳನ್ನು ಹುಟ್ಟು ಹಾಕಿ ಚರ್ಚೆಗಳಿಗೆ ಕಾರಣವಾಗುತ್ತಾರೆ. ಇದೀಗ ನಟ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಮತ್ತೊಮ್ಮೆ ಸಿನಿಮಾ ರಂಗದಲ್ಲಿನ ಕರಾಳ ಸತ್ಯಗಳ ಕುರಿತಾಗಿ ಮಾತನಾಡಿದ್ದಾರೆ.
ಸಿನಿಮಾ ರಂಗದಲ್ಲಿ (Tamil Cinema) ವೈಯಕ್ತಿಕ ನೈತಿಕತೆ ಎನ್ನುವುದು 100 ಕ್ಕೆ 99% ಕೂಡಾ ಇಲ್ಲ. ನಾನು ಯಾವುದೇ ವಿಚಾರಗಳನ್ನು ಪುರಾವೆ ಇಲ್ಲದೇ ಹೇಳೋದಿಲ್ಲ. ನಾನು ನೋಡಿರೋದನ್ನ, ನನ್ನ ಬಳಿ ಪುರಾವೆ ಇರೋ ವಿಚಾರಗಳನ್ನು ಮಾತ್ರವೇ ನಾನು ಹೇಳೋದು ಎಂದಿದ್ದಾರೆ ಬೈಲ್ವಾನ್ ರಂಗನಾಥ್.
ಇದೇ ವೇಳೆ ಅವರು ಒಂದಷ್ಟು ಜನ ನಟಿಯರು ಸಿನಿಮಾ ರಂಗದಲ್ಲಿ ಅವಕಾಶಗಳನ್ನ ಪಡೆಯೋದಕ್ಕಾಗಿ ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಅ ಶ್ಲೀ ಲ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ ಎನ್ನುವ ಮಾತುಗಳನ್ನು ಸಹಾ ಹೇಳಿದ್ದಾರೆ.
ಬೆಳಿಗ್ಗೆ ಅಣ್ಣ ಎನ್ನುವ ನಟಿಯರು ರಾತ್ರಿ ಅವರನ್ನೇ ಅಂಕಲ್, ಮಾವ ಎನ್ನುತ್ತಾರೆ. ಕೆಲವು ಕಲಾವಿದರು ತಮ್ಮ ವಾರಸುದಾರರು ಸಿನಿಮಾ ರಂಗಕ್ಕೆ ಬರೋದು ಬೇಡ ಎಂದೇ ಬಯಸುತ್ತಾರೆ. ಅವರಿಗೆ ಈಗಾಗಲೇ ಆಗಿರುವ ಅನುಭವಗಳೇ ಇಂತಹ ನಿರ್ಧಾರಕ್ಕೆ ಕಾರಣವಾಗಿದೆ.
ಗಿನ್ನೆಲೆ ದಾಖಲೆ ಬೆನ್ನೆಲ್ಲೇ ಡ್ಯಾನ್ಸ್ ವಿಷಯದಲ್ಲಿ ವರ್ಷಗಳ ಹಿಂದೆ Megastar Chiranjeevi ಮಾಡಿದ್ದ ಕೆಲಸ ಬಹಿರಂಗ