Anushka Shetty ಅರುಂಧತಿ ಸಿನಿಮಾಕ್ಕೆ ನಿರ್ದೇಶಕನ ಮೊದಲ ಆಯ್ಕೆ ಆಗಿರ್ಲಿಲ್ಲ; ಗೋಲ್ಡನ್ ಚಾನ್ಸ್ ಮಿಸ್ ಮಾಡ್ಕೊಂಡ ನಟಿ ಯಾರು?

Written by Soma Shekar

Published on:

---Join Our Channel---

Anushka Shetty: ಕೆಲವು ಸಿನಿಮಾಗಳು ಕಲಾವಿದರ ಜೀವನದಲ್ಲಿ ಮೈಲಿಗಲ್ಲಾಗುವ ಜೊತೆಗೆ ಅವರನ್ನು ಸ್ಟಾರ್ ಗಳನ್ನಾಗಿ ಮಾಡುತ್ತವೆ. ನಟಿ ಅನುಷ್ಕಾ ಶೆಟ್ಟಿ (Anushka Shetty) ಅವರ ವೃತ್ತಿ ಜೀವನದಲ್ಲಿ ಅರುಂಧತಿ (Arundati) ನಟಿಗೆ ದೊಡ್ಡ ಬ್ರೇಕ್ ಕೊಟ್ಟ ಸಿನಿಮಾ. ಕೋಡಿ ರಾಮಕೃಷ್ಣ ಅವರ ನಿರ್ದಶಶನದ ಈ ಸಿ‌ನಿಮಾದಲ್ಲಿ ಅನುಷ್ಕಾ ಪಾತ್ರ ಇಂದಿಗೂ ಸಿನಿ ಪ್ರೇಮಿಗಳು ನೆನಪಿನಲ್ಲಿಟ್ಟುಕೊಂಡಿದ್ದಾರೆ.

ಅನುಷ್ಕಾ ಬಿಟ್ಟು ಇನ್ಯಾರೂ ಆ ಪಾತ್ರಕ್ಕೆ ಸೂಕ್ತವಲ್ಲ ಅನಿಸುವಂತೆ ನಟಿ ಆ ಪಾತ್ರಕ್ಕೆ ಜೀವ ತುಂಬಿದ್ದಾರೆ. ಆದರೆ ಅರುಂಧತಿ ಸಿನಿಮಾದ ನಾಯಕಿ ಪಾತ್ರಕ್ಕೆ ನಿರ್ದೇಶಕ ಕೋಡಿ ರಾಮಕೃಷ್ಣ ಅವರ ಮೊದಲ ಆಯ್ಕೆ ಅನುಷ್ಕಾ ಶೆಟ್ಟಿ ಆಗಿರಲಿಲ್ಲ. ಬದಲಾಗಿ ಬೇರೊಬ್ಬ ನಟಿಗೆ ಈ ಸಿನಿಮಾದ ನಾಯಕಿಯ ಪಾತ್ರವನ್ನು ಆಫರ್ ಮಾಡಲಾಗಿತ್ತು.

ಹೌದು, ತೆಲುಗಿನಲ್ಲಿ ಜನಪ್ರಿಯತೆ ಪಡೆದಿದ್ದ, ಮಲೆಯಾಳಂ ನಟಿ ಮಮತಾ ಮೋಹನ್ ದಾಸ್ (Mamta Mohandas) ಗೆ ಅರುಂಧತಿ ಸಿನಿಮಾ ಆಫರ್ ಅನ್ನ ನೀಡಲಾಗಿತ್ತು. ಆದರೆ ಮಮತಾ ಅವರು ಬೇರೆಯವರು ಆ ನಿರ್ಮಾಣ ಸಂಸ್ಥೆ ಒಳ್ಳೆಯದಲ್ಲ, ಬಜೆಟ್ ಇಲ್ಲ ಎಂದೆಲ್ಲಾ ಹೇಳಿದ ಮಾತು ನಂಬಿ ಸಿನಿಮಾದ ಆಫರ್ ಅನ್ನು ರಿಜೆಕ್ಟ್ ಮಾಡಿಬಿಟ್ಟರು.

ಮಮತಾ ಜೂ.ಎನ್ ಟಿ ಆರ್ ಅವರ ಯಮದೊಂಗ ಆಫರ್ ಒಪ್ಪಿಕೊಂಡ್ರು. ಅನಂತರ ಅರುಂಧತಿ ಸಿನಿಮಾ ನಿರ್ಮಾಣ‌ ಸಂಸ್ಥೆ ಅನುಷ್ಕಾ ಶೆಟ್ಟಿ ಅವರನ್ನ ನಾಯಕಿಯಾಗಿ ಕರೆತಂದರು. ಸಿನಿಮಾ ಅಭೂತಪೂರ್ವ ವಿಜಯ ಗಳಿಸಿತು, ಅನುಷ್ಕಾ ಶೆಟ್ಟಿಗೆ ಸಿನಿಮಾ ರಂಗದಲ್ಲಿ ವಿಶೇಷ ಸ್ಥಾನ ತಂದುಕೊಟ್ಟಿತು. ಮಿಸ್ ಮಾಡಿಕೊಂಡ ಮಮತಾ ಟಾಲಿವುಡ್ ನಲ್ಲಿ ಸ್ಟಾರ್ ನಟಿ ಆಗಲೇ ಇಲ್ಲ.

Samantha: ನಾಗಚೈತನ್ಯ ನಿಶ್ಚಿತಾರ್ಥ ಬೆನ್ನಲ್ಲೇ ಫ್ಯಾನ್ಸ್ ಗೆ ಸಿಹಿ ಸುದ್ದಿ ಕೊಟ್ಟ ನಟಿ ಸಮಂತಾ, ಖುಷಿಯಾದ ಫ್ಯಾನ್ಸ್

Leave a Comment