Anita Hassanandani ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ನಟಿಸಿರುವ ಹಿಂದಿ ಕಿರುತೆರೆಯ ಜನಪ್ರಿಯ ನಟಿ ಅನಿತಾ ಹಸನಂದಾನಿ (Anita Hassanandani) ಪ್ರಸ್ತುತ ರೋಹಿತ್ ರೆಡ್ಡಿ ಅವರ ಪತ್ನಿಯಾಗಿ ಮಗುವಿನ ತಾಯಾಗಿ ಖುಷಿಯಾಗಿ ಜೀವನ ನಡೆಸುವಾಗಲೇ ಸಂದರ್ಶನವೊಂದರಲ್ಲಿ ತಮ್ಮ ಹಿಂದಿನ ಪ್ರೀತಿಯ ವಿಚಾರವನ್ನು ಮಾತನಾಡಿ ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದ್ದಾರೆ.
ಕಿರುತೆರೆಯ ನಟ ಎಜಾಜ್ ಖಾನ್ (Ejaz Khan) ಜೊತೆ ನಟಿ ಲವ್ ನಲ್ಲಿ ಇದ್ದರು. ಆತ ಮುಸ್ಲಿಂ ನಾನು ಹಿಂದೂ ಎನ್ನುವ ಕಾರಣಕ್ಕೆ ನನ್ನ ತಾಯಿ ಅದನ್ನು ಒಪ್ಪಲಿಲ್ಲ. ಆದರೆ ಪ್ರೀತಿಯಲ್ಲಿ ಮುಳುಗಿಹೋಗಿದ್ದ ನಾನು ತಾಯಿಯನ್ನೇ ವಿರೋಧಿಸಿದೆ. ಪ್ರೀತಿಯಲ್ಲಿ ಮುಳುಗಿದ್ದ ನನಗೆ ಎಲ್ಲಾ ಸರಿಯಾಗಿದೆ ಎನಿಸಿತ್ತು. ಪ್ರೀತಿಗಾಗಿ ನನ್ನನ್ನು ನಾನು ಬದಲಿಸಿಕೊಳ್ಳುವ ಹಂತಕ್ಕೆ ನಾನು ಹೋಗಿದ್ದೆ.
ನನ್ನ ಬಗ್ಗೆ ಎಜಾಜ್ ಗೆ ಇದ್ದ ಕಾಳಜಿ ನೋಡಿ ನಾನು ಖುಷಿಯಾಗಿದ್ದೆ. ಆದರೆ ಅದು ಹಾಗೆ ಉಳಿಯಲಿಲ್ಲ. ಆತ ತನ್ನ ಜೀವನದಲ್ಲಿ ನನ್ನನ್ನ ಬದಲಿಸಲು ಬಯಸಿದ. ಒಂದು ಹಂತ ಮೀರಿದಾಗ ನನಗೆ ಅಸಲಿಯತ್ತು ಗೊತ್ತಾಯಿತು. ಯಾರಾದರೂ ನಿಮ್ಮನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ ಎಂದರೆ ಅದು ಪ್ರೀತಿ ಅಲ್ಲ ಎಂದೇ ಅರ್ಥ.
ಆರಂಭದಲ್ಲಿ ಪ್ರೀತಿಯಲ್ಲಿ ಬಿದ್ದಾಗ ನನಗೆ ಇವೆಲ್ಲಾ ಗೊತ್ತಾಗಲಿಲ್ಲ. ಆದರೆ ಅನಂತರ ಸತ್ಯದ ಅರಿವಾಗಿ ಆ ಸಂಬಂಧದಿಂದ ಹೊರಗೆ ಬಂದೆ. ಈಗ ಮದುವೆ ನಂತರ ಹಿಂದಿನದನ್ನ ನೆನಪಿಸಿಕೊಂಡಾಗ ಎಂತಹ ತಪ್ಪು ಮಾಡಲು ಹೊರಟಿದ್ದೆ ಎಂದು ವಿಷಾದಿಸುತ್ತೇನೆ. ಆ ಸಂಬಂಧದಿಂದ ಹೊರಬರುವುದು ಕಷ್ಟವಾಗಿತ್ತು, ಬಂದ ಮೇಲೆ ಮರೆಯಲು ವರ್ಷಗಳು ಹಿಡಿಯಿತು ಎಂದಿದ್ದಾರೆ ನಟಿ ಅನಿತಾ.
Bigg Boss ಇತಿಹಾಸದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದ ಬ್ಯೂಟಿ, ಏನೀ ಬೆಡಗಿಯ ವಿಶೇಷ, ಅಷ್ಟೊಂದು ಫೇಮಸ್ಸಾ?