Vishnu Priya: ಆಗ ಬಿಗ್ ಬಾಸ್ ಗೆ ಕಂಡೀಷನ್ ಹಾಕಿ ಈಗ ಬರ್ತೀನಿ ಅಂತ ರಿಕ್ವೆಸ್ಟ್ ಮಾಡ್ಕೊಂಡ ಟಾಲಿವುಡ್ ಬೆಡಗಿ

Written by Soma Shekar

Published on:

---Join Our Channel---

Vishnu Priya: ತೆಲುಗು ಕಿರುತೆರೆಯಲ್ಲಿ ಜನಪ್ರಿಯ ನಿರೂಪಕಿಯಾಗಿದ್ದಾರೆ ವಿಷ್ಣು ಪ್ರಿಯ (Vishnu Priya). ಕಿರುತೆರೆಯಲ್ಲಿ ಮಾತ್ರವೇ ಅಲ್ಲದೇ ಸೋಶಿಯಲ್ ಮೀಡಿಯಾಗಳಲ್ಲಂತೂ ವಿಷ್ಣು ಪ್ರಿಯ ದೊಡ್ಡ ಸೆನ್ಸೇಷನ್ ಕೂಡಾ ಹೌದು. ತನ್ನ ಅಂದ ಮತ್ತು ಗ್ಲಾಮರ್ ನಿಂದಲೇ ವಿಷ್ಣು ಪ್ರಿಯ ಬಹಳಷ್ಟು ಅಭಿಮಾನಿಗಳನ್ನು ಮತ್ತು ಸೋಶಿಯಲ್ ಮೀಡಿಯಾದಲ್ಲಿ ಹಿಂಬಾಲಕರನ್ನು ಸಹಾ ಪಡೆದುಕೊಂಡಿದ್ದಾರೆ.

ತೆಲುಗಿನಲ್ಲಿ ಬಿಗ್ ಬಾಸ್ ಶೋ ಗೆ (Bigg Boss) ವಿಷ್ಣು ಪ್ರಿಯ ಬರ್ತಾರೆ ಅಂತ ಕಳೆದ ಕೆಲವು ಸೀಸನ್ ಗಳಿಂದಲೂ ಸುದ್ದಿಯಾಗಿತ್ತು. ಆದ್ರೆ ವಿಷ್ಣು ಪ್ರಿಯ ಬಂದಿರಲಿಲ್ಲ. ಈಗ ತೆಲುಗು ಬಿಗ್ ಬಾಸ್ ನ ಎಂಟನೇ ಸೀಸನ್ ಆರಂಭ ಆಗ್ತಿದ್ದು, ಈ ಬಾರಿ ವಿಷ್ಣು ಪ್ರಿಯ ಬರೋದು ಪಕ್ಕಾ ಅಂತ ಹೇಳಲಾಗ್ತಿದೆ.

ತೆಲುಗಿನಲ್ಲಿ ಬಿಗ್ ಬಾಸ್ ಸೀಸನ್ ಎಂಟನೇ ಸೀಸನ್ ಗೆ ಸಿದ್ಧತೆಗಳು ಜೋರಾಗಿಯೇ ನಡೆದಿದೆ. ಅಲ್ಲದೇ ಈ ಬಾರಿ ಬಿಗ್ ಬಾಸ್ ಮನೆಯೊಳಕ್ಕೆ ಹೋಗೋರು ಯಾರು ಎನ್ನುವ ವಿಚಾರವಾಗಿ ಒಂದಷ್ಟು ಹೆಸರುಗಳು ಸಹಾ ಹರಿದಾಡಿದೆ. ಆ ಹೆಸರುಗಳಲ್ಲಿ ವಿಷ್ಣು ಪ್ರಿಯ ಹೆಸರು ಕೇಳಿದ್ದು, ಅದರ ಜೊತೆಗೆ ಹೊಸ ವಿಷಯವೊಂದು ಹೊರ ಬಂದಿದೆ.

ಕಳೆದ ಸೀಸನ್ ನಲ್ಲಿ ವಿಷ್ಣುಪ್ರಿಯ ಅವರಿಗೆ ಬಿಗ್ ಬಾಸ್ ಮನೆಗೆ ವಿಷ್ಣುಪ್ರಿಯ ಅವರಿಗೆ ಆಫರ್ ನೀಡಲಾಗಿತ್ತು, ಆದರೆ ಆಕೆ ತಮಗೆ ವಾರಕ್ಕೆ ಬರೋಬ್ಬರಿ 80 ಸಾವಿರ ಸಂಭಾವನೆ ಕೇಳಿದ್ದ ಕಾರಣ ಯಾರಿಗೂ ಅಷ್ಟೊಂದು ಸಂಭಾವನೆ ನೀಡುತ್ತಿಲ್ಲ ಎನ್ನುವ ಕಾರಣಕ್ಕೆ ವಿಷ್ಣುಪ್ರಿಯ ಅವರು ಬಂದಿರಲಿಲ್ಲ.

ಆದರೆ ಈ ಬಾರಿ ವಿಷ್ಣು ಪ್ರಿಯ ಸ್ವತಃ ಸಂಭಾವನೆಯಲ್ಲಿ ಚೌಕಾಸಿ ಮಾಡಿಕೊಳ್ಳಲು ಮುಂದಾಗಿದ್ದು, ಕಡಿಮೆ ಸಂಭಾವನೆಯನ್ನು ತೆಗೆದುಕೊಳ್ಳಲು ಒಪ್ಪಿಗೆಯನ್ನು ನೀಡಿದ್ದಾರೆ ಎನ್ನಲಾಗಿದ್ದು, ಈ ಕಾರಣದಿಂದ ಅವರು ಬಿಗ್ ಬಾಸ್ ಗೆ ಎಂಟ್ರಿ ನೀಡೋದು ಪಕ್ಕಾ ಎನ್ನಲಾಗಿದ್ದು, ಅಭಿಮಾನಿಗಳು ಖುಷಿಯಾಗಿದ್ದಾರೆ.

Janhvi Kapoor: ಬಟಾ ಬಯಲಾದ ಜಾನ್ವಿ ಕಪೂರ್ ರಹಸ್ಯ? ಫೋಟೋದಲ್ಲಿ ಕಂಡ ವ್ಯಕ್ತಿ ಮಾಡಿ ಬಿಟ್ಟ ಅಂತಹ ಕೆಲಸ

Leave a Comment