Ananya Panday: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಸಮಾರಂಭ (Anant Ambani Radhika Marriage) ಬಹಳ ಅದ್ದೂರಿಯಾಗಿ ನಡೆದಿದ್ದು ಮಾತ್ರವೇ ಅಲ್ಲದೇ ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ವಿಶ್ವದ ಅತಿ ದುಬಾರಿ ಮದುವೆಗಳಲ್ಲಿ ಒಂದಾಗಿದ್ದ ಅನಂತ್ ಅಂಬಾನಿ ಮದುವೆ ಕುರಿತಾಗಿ ಮಾದ್ಯಮಗಳಲ್ಲಿ ಒಂದಷ್ಟು ದಿನ ಸುದ್ದಿಗಳು ಹರಿದಾಡಿತ್ತು.
ಈ ಮದುವೆಯಲ್ಲಿ ಬಾಲಿವುಡ್ ನ (Bollywood) ಬಹುತೇಕ ಎಲ್ಲಾ ಸೆಲೆಬ್ರಿಟಿಗಳು ಸಹಾ ಭಾಗಿಯಾಗಿದ್ದರು. ಇದೇ ವೇಳೆ ಅನಂತ್ ಮದುವೆಯಲ್ಲಿ ಭಾಗಿಯಾಗಲು ಸೆಲೆಬ್ರಿಟಿಗಳಿಗೆ ಕೋಟಿ ಕೋಟಿ ಹಣವನ್ನು ನೀಡಲಾಗಿದೆ ಎನ್ನುವ ಸುದ್ದಿಗಳು ಸಹಾ ಹರಿದಾಡಿದ್ದವು. ಈ ವಿಚಾರಕ್ಕೆ ನಟಿ ಅನನ್ಯಾ ಪಾಂಡೆ (Ananya Panday) ಉತ್ತರವನ್ನು ಕೊಟ್ಟಿದ್ದಾರೆ.
ಯುವ ನಟಿ ಅನನ್ಯಾ ಪಾಂಡೆ ಮಾತನಾಡುತ್ತಾ, ಜನ ಏಕೆ ಹೀಗೆಲ್ಲಾ ಅಂದುಕೊಂಡಿದ್ದಾರೋ ನನಗಂತೂ ಗೊತ್ತಿಲ್ಲ. ಅವರು ( ಅನಂತ್ ಅಂಬಾನಿ, ರಾಧಿಕಾ) ನನ್ನ ಸ್ನೇಹಿತರು, ಸ್ನೇಹಿತರ ಮದುವೆ ಎನ್ನುವ ಕಾರಣಕ್ಕೆ ನಾನು ಹಾಗೆ ಖುಷಿಯಿಂದ ಕುಣಿದು ಸಂಭ್ರಮಿಸಿದ್ದು ಎನ್ನುವ ಮಾತನ್ನ ಹೇಳಿದ್ದಾರೆ.
ಈ ಮೂಲಕ ಅನನ್ಯಾ ಪಾಂಡೆ ಅನಂತ್ ಅಂಬಾನಿ ಮದುವೆಗೆ ತಾವೆಲ್ಲರೂ ಸ್ನೇಹಿತರಂತೆ ಭಾಗಿಯಾಗಿದ್ದೆವೇ ಹೊರತು ಹಣಕ್ಕಾಗಿ ಅಲ್ಲ ಎನ್ನುವ ಸ್ಪಷ್ಟನೆ ನೀಡಿದ್ದಾರೆ. ಇದೇ ವೇಳೆ ಅಂಬಾನಿ ಆಪ್ತರಿರಗೆ ದುಬಾರಿ ರಿಟರ್ನ್ ಗಿಫ್ಟ್ ಸಿಕ್ಕಿದೆ ಎನ್ನುವ ಸುದ್ದಿಗಳು ಸಹಾ ಹರಿದಾಡಿರುವುದು ಸುಳ್ಳಲ್ಲ.
Kannada Serial TRP ಯಲ್ಲಿ ಪುಟಿದೆದ್ದ ಪುಟ್ಟಕ್ಕ ಮತ್ತು ಅಮೃತಧಾರೆ, ಈ ವಾರ ಯಾವ ಸೀರಿಯಲ್ ಗೆ ಯಾವ ಸ್ಥಾನ ?