Abhishek Bachchan: ಬಾಲಿವುಡ್ ನ ಸ್ಟಾರ್ ಜೋಡಿ ಅಭಿಷೇಕ್ ಬಚ್ಚನ್ (Abhishek Bachchan) ಮತ್ತು ಐಶ್ವರ್ಯ ರೈ (Aishwarya Rai) ಡಿವೋರ್ಸ್ ವಿಚಾರವಾಗಿ ಒಂದಷ್ಟು ವಿಚಾರಗಳು ಮಾದ್ಯಮಗಳಲ್ಲಿ ಹರಿದಾಡಿದ ನಂತರ ಆ ವಿಷಯವನ್ನ ಜನ ಮರೆತಿದ್ದರು. ಆದರೆ ಇತ್ತೀಚೆಗೆ ಅನಂತ್ ಅಂಬಾನಿ ಮದುವೆಗೆ (Anant Ambani Wedding) ಬಚ್ಚನ್ ಪರಿವಾರ ಆಗಮಿಸಿದಾಗ ಅದರಲ್ಲಿ ಐಶ್ವರ್ಯ ರೈ ಮತ್ತು ಆರಾಧ್ಯ ಮಿಸ್ ಆಗಿದ್ದರು. ಐಶ್ವರ್ಯ ತಮ್ಮ ಮಗಳ ಜೊತೆಗೆ ಪ್ರತ್ಯೇಕವಾಗಿ ಮದುವೆ ಸಮಾರಂಭಕ್ಕೆ ಆಗಮಿಸಿದರು ಮತ್ತು ಎಲ್ಲೂ ಬಚ್ಚನ್ ಕುಟುಂಬದ ಜೊತೆಗೆ ಕಾಣಿಸಿಕೊಳ್ಳಲಿಲ್ಲ.
ಇಂತದೊಂದು ಬೆಳವಣಿಗೆಯನ್ನು ನೋಡಿದ ನೆಟ್ಟಿಗರು ಅಭಿಷೇಕ್ ಮತ್ತು ಐಶ್ವರ್ಯ ನಡುವೆ ಸಂಬಂಧ ಮೊದಲಿನಂತೆ ಇಲ್ಲ ಎಂದಿದ್ದು ಮಾತ್ರವಲ್ಲದೇ, ಬಚ್ಚನ್ ಪರಿವಾರದ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಮಾಧಾನವನ್ನು ಹೊರ ಹಾಕುವದಕ್ಕೆ ಆರಂಭ ಮಾಡಿದರು. ಇವೆಲ್ಲವುಗಳ ನಡುವೆ ಅಭಿಷೇಕ್ ಬಚ್ಚನ್ ಅವರು ಒಂದು ಪೋಸ್ಟ್ ಗೆ ನೀಡಿದ ಲೈಕ್ ಈಗ ಹೊಸ ಚರ್ಚೆಗೆ ಕಾರಣವಾಗಿದೆ.
ಅಭಿಷೇಕ್ ಬಚ್ಚನ್ ಅವರು ವಿಚ್ಛೇದನಕ್ಕೆ ಸಂಬಂಧಪಟ್ಟ ಒಂದು ಲೇಖನಕ್ಕೆ ಸಾಮಾಜಿಕ ಜಾಲತಾಣದಲ್ಲಿ ಲೈಕ್ ನೀಡಿದ್ದಾರೆ. ಅವರು ಲೈಕ್ ನೀಡಿದ ಸಂಪೂರ್ಣ ಲೇಖನವು ವಿಚ್ಛೇದನಕ್ಕೆ ಸಂಬಂಧಪಟ್ಟಿದ್ದಾಗಿದೆ. ಲೇಖನದಲ್ಲಿ ವಿಚ್ಛೇದನ ಎನ್ನುವುದು ಯಾರಿಗೂ ಸುಲಭ ಅಲ್ಲ. ಎಲ್ಲರಿಗೂ ಸಂತೋಷದ ಕನಸು ಇರುತ್ತದೆ. ರಸ್ತೆಯನ್ನು ದಾಟುತ್ತಿರುವಾಗ ಕೈಗಳನ್ನು ಹಿಡಿದುಕೊಂಡು ನಡೆಯುತ್ತಿರುವ ವೃದ್ಧ ದಂಪತಿಯ ವೀಡಿಯೋ ನೋಡಿದಾಗ ಅದು ಎಲ್ಲರ ಮನಸ್ಸನ್ನು ಮುಟ್ಟುತ್ತದೆ.
ಜೀವನವು ನಾವು ಬಯಸಿದಂತೆ ಇರುವುದಿಲ್ಲ. ದಶಕಗಳ ನಂತರ ಜೊತೆಯಾಗಿದ್ದವರು ಬೇರೆಯಾದಾಗ ತಮ್ಮ ಜೀವನದ ಮಹತ್ವದ ಭಾಗವಾದ ಪರಸ್ಪರ ಅವಲಂಬನೆಯನ್ನು ಮೀರಿ ಸಂಬಂಧವನ್ನು ಕಳೆದುಕೊಳ್ಳಲು ಕಾರಣವೇನು, ಅವರು ಎಂತಹ ಸವಾಲುಗಳನ್ನು ಎದುರಿಸುತ್ತಾರೆ ಎನ್ನುವ ವಿಚಾರಗಳೊಂದಿಗೆ ಗ್ರೇ ಡಿವೋರ್ಸ್ ಕುರಿತಾಗಿ ಬರೆಯಲಾಗಿರುವ ಲೇಖನಕ್ಕೆ ಅಭಿಷೇಕ್ ಬಚ್ಚನ್ ಲೈಕ್ ಅನ್ನು ನೀಡಿದ್ದು ಎಲ್ಲರ ಗಮನ ಸೆಳೆದಿದೆ.
ಅಭಿಷೇಕ್ ಬಚ್ಚನ್ ಅವರ ಇಂತಹದೊಂದು ಪ್ರತಿಕ್ರಿಯೆ ನೋಡಿದ ನೆಟ್ಟಿಗರು ಬಹುಶಃ ಅವರು ವಿಚ್ಛೇದನದ ನೋವಿನಲ್ಲಿ ಇದ್ದಾರೆ. ಆದ್ದರಿಂದಲೇ ಡಿವೋರ್ಸ್ ಗೆ ಸಂಬಂಧಿಸಿದಂತಹ ಈ ಲೇಖನ ಅವರ ಮನಸ್ಸನ್ನು ಮುಟ್ಟಿರಬಹುದು. ಅದೇ ಕಾರಣಕ್ಕೆ ಅವರು ಆ ಲೇಖನಕ್ಕೆ ಮೆಚ್ಚುಗೆಯನ್ನು ನೀಡಿದ್ದಾರೆಂದು ಸೋಶಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆ ಈಗ ಶುರುವಾಗಿದೆ. ಒಟ್ಟಿನಲ್ಲಿ ಅಭಿಷೇಕ್ ಮತ್ತು ಐಶ್ವರ್ಯ ವಿಚ್ಛೇದನಕ್ಕೆ ಸಂಬಂಧಪಟ್ಟಂತೆ ಹರಿಡಿರುವ ಸುದ್ದಿಗಳಿಗೆ ಈ ಜೋಡಿಯೇ ಸ್ಪಷ್ಟನೆ ನೀಡಬೇಕಾಗಿದೆ.