Nagarjuna: ತೆಲುಗು ಸಿನಿಮಾ ರಂಗದ ಸ್ಟಾರ್ ಸೆಲೆಬ್ರಿಟಿ ಜೋಡಿಗಳಲ್ಲಿ ಹಿರಿಯ ನಟ ನಾಗಾರ್ಜುನ (Nagarjuna) ಮತ್ತು ಒಂದು ಕಾಲದ ಸ್ಟಾರ್ ನಟಿ ಅಮಲಾ (Amala) ದಂಪತಿ ಕೂಡಾ ಒಂದು. ಇವರ ಪ್ರೇಮ ಕಥೆ ಟಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಆದರೆ ನಟ ನಾಗಾರ್ಜುನ ಅವರಿಗೆ ಅಮಲಾ ಅವರು ಎರಡನೇ ಹೆಂಡತಿ ಎನ್ನುವುದು ಸಹಾ ವಾಸ್ತವದ ವಿಚಾರವಾಗಿದೆ.
ಹೌದು, ನಟ ನಾಗಾರ್ಜುನ ಅವರು ಮೊದಲು ಲಕ್ಷ್ಮೀ ದಗ್ಗುಬಾಟಿ (Lakshmi Daggubati) ಅವರನ್ನು ಮದುವೆಯಾಗಿದ್ದರು. ಈ ದಂಪತಿಯ ಮಗನೇ ನಾಗಚೈತನ್ಯ. ಆದರೆ ನಟ ವೈಯಕ್ತಿಕ ಕಾರಣಗಳಿಂದ ಲಕ್ಷ್ಮೀ ದಗ್ಗುಬಾಟಿ ಅವರಿಗೆ ವಿಚ್ಚೇದನ ನೀಡಿದರು. ಲಕ್ಷ್ಮೀ ದಗ್ಗುಬಾಟಿ ಸಹಾ ಅನಂತರ ಅಮೆರಿಕಾಕ್ಕೆ ತೆರಳಿ ಅಲ್ಲೇ ನೆಲೆಸಿದರು.
ಅನಂತರ ಸಿನಿಮಾಗಳಲ್ಲಿ ಬ್ಯುಸಿಯಾದ ನಾಗಾರ್ಜುನ ಅವರ ಜೊತೆಗೆ ಕೆಲವು ಸಿನಿಮಾಗಳಲ್ಲಿ ಅಮಲಾ ಜೋಡಿಯಾಗಿ ಕಾಣಿಸಿಕೊಂಡರು. ಕೆಲಸದ ಬಗ್ಗೆ ನಟಿಯ ಡೆಡಿಕೇಷನ್ ನಾಗಾರ್ಜುನ ಅವರ ಗಮನ ಸೆಳೆಯಿತು. ನಾಗಾರ್ಜುನ ಮತ್ತು ಅಮಲಾ ನಡುವೆ ಸ್ನೇಹ ಮೂಡಿ ಅದು ಬಹಳ ಬೇಗ ಪ್ರೀತಿಯಾಗಿ ಬದಲಾಯಿತು.
ನಂತರ ಅಮೆರಿಕಾಕ್ಕೆ ತೆರಳಿದಾಗ ನಾಗಾರ್ಜುನ ಅಮಲಾಗೆ ಪ್ರಪೋಸ್ ಮಾಡಿದ್ದರು. ನಂತರ ಇಬ್ಬರೂ ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು. ಹೀಗೆ ನಾಗಾರ್ಜುನ ಅವರ ಜೀವನದಲ್ಲಿ ಅಮಲಾ ಅವರ ಎಂಟ್ರಿ ಆಯಿತು. ಅಂದಿನಿಂದ ಇಂದಿನ ವರೆಗೂ ಈ ಜೋಡಿ ಸುಖ ಸಂತೋಷದಿಂದ ಜೀವನವನ್ನು ನಡೆಸಿಕೊಂಡು ಖುಷಿಯಾಗಿದ್ದಾರೆ.