Prashanth Neel: KGF 3 ನಲ್ಲಿ ತಲಾ ಅಜಿತ್? ಅಜಿತ್ ಜೊತೆ ಪ್ರಶಾಂತ್ ನೀಲ್ ಎರಡು ಸಿನಿಮಾ; ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್

Written by Soma Shekar

Published on:

---Join Our Channel---

Prashanth Neel: ಕೆಜಿಎಫ್ ಸರಣಿ (KGF Series) ಸಿನಿಮಾ ಗಳ ಮೂಲಕ ಪ್ಯಾನ್ ಇಂಡಿಯಾ ನಿರ್ದೇಶಕ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ ಪ್ರಶಾಂತ್ ನೀಲ್ (Prashanth Neeel).. ಕೆಜಿಎಫ್ ನಂತರ ಸಲಾರ್ (Salar) ಸಿನಿಮಾದ ಗೆಲುವಿನ ನಂತರ ಪ್ರಶಾಂತ್ ನೀಲ್ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಿದ್ದು, ಭಾರತೀಯ ಸಿನಿಮಾ ರಂಗದ ಪ್ರಸ್ತುತ ಸ್ಟಾರ್ ನಿರ್ದೇಶಕರ ಸಾಲಿನಲ್ಲಿ ಅವರು ಕೂಡಾ ಒಂದು ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಪ್ರಶಾಂತ್ ನೀಲ್ ಪ್ರಸ್ತುತ ಸಲಾರ್ 2 ಸಿನಿಮಾದ ತಯಾರಿಯಲ್ಲಿ ಸಾಕಷ್ಟು ಬ್ಯುಸಿಯಾಗಿದ್ದಾರೆ. ಇದಾದ ಬಳಿಕ ಜೂನಿಯರ್ ಎನ್ಟಿಆರ್ (Jr NTR) ಅವರ ಜೊತೆಗೆ ಒಂದು ಸಿನಿಮಾ ಮಾಡಲಿದ್ದಾರೆ. ಎನ್ಟಿಆರ್ ಜೊತೆಗಿನ ಅವರ ಸಿನಿಮಾ ಘೋಷಣೆಯಾಗಿ ಒಂದು ವರ್ಷಕ್ಕೂ ಅಧಿಕ ಸಮಯ ಕಳೆದಿದ್ದು, ಸಲಾರ್ 2 ಸಿನಿಮಾದ ನಂತರ ಈ ಹೊಸ ಸಿನಿಮಾದ ಚಿತ್ರೀಕರಣ ಆರಂಭವಾಗುವ ಸಾಧ್ಯತೆಗಳು ದಟ್ಟವಾಗಿದೆ.

ಈಗ ಅವೆಲ್ಲವುಗಳ ಬೆನ್ನಲ್ಲೇ ಮತ್ತೊಂದು ಹೊಸ ಸುದ್ದಿ ಹೊರ ಬಂದಿದೆ. ತೆಲುಗಿನ ನಂತರ ಇದೀಗ ತಮಿಳು ಸ್ಟಾರ್ ನಟನ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡಲಿದ್ದಾರೆ ಎನ್ನುವ ವಿಚಾರವೊಂದು ಹರಿದಾಡಿದೆ. ಇತ್ತೀಚೆಗೆ ಕಾಲಿವುಡ್ ಸ್ಟಾರ್ ನಟನಾಗಿರುವ ಅಜಿತ್ ಕುಮಾರ್ ಅವರನ್ನ ಪ್ರಶಾಂತ್ ನೀಲ್ ಭೇಟಿಯಾಗಿದ್ದರೆನ್ನುವ ಸುದ್ದಿಯೊಂದು ಸಿನಿಮಾವಲಯದಲ್ಲಿ ಹರಿದಾಡುತ್ತಿದೆ.

ಮಾದ್ಯಮ ಒಂದರ ವರದಿಯ ಪ್ರಕಾರ ಅಜಿತ್ ಕುಮಾರ್ (Ajit Kumar) ಮತ್ತು ಪ್ರಶಾಂತ್ ನೀಲ್ ಇತ್ತೀಚೆಗೆ ಭೇಟಿ ನಡೆಸಿದ್ದು, ಈ ವೇಳೆ ಎರಡು ದೊಡ್ಡ ಪ್ರಾಜೆಕ್ಟ್ ಗಳಲ್ಲಿ ಒಟ್ಟಿಗೆ ಕೆಲಸ ಮಾಡುವ ಬಗ್ಗೆ ಚರ್ಚೆಯನ್ನು ನಡೆಸಿದ್ದಾರೆ ಎನ್ನಲಾಗಿದೆ. ಮುಂದೆ ಈ ವಿಷಯ ಅಧಿಕೃತವಾದರೆ ಪ್ರಶಾಂತ್ ನೀಲ್ ಅಜಿತ್ ಅವರ ಸಿನಿಮಾ ನಿರ್ದೇಶನ ಮಾಡುವುದು ಖಚಿತವಾಗಲಿದೆ.

Actress Anjali: ಅದರ ಬಗ್ಗೆ ಈಗ ನಾನು ತುಟಿ ಬಿಚ್ಚುವ ಹಾಗಿಲ್ಲ, ನಟಿ ಅಂಜಲಿ ಮಾತಿಗೆ ಅಭಿಮಾನಿಗಳು ಶಾಕ್

Leave a Comment