Aishwarya Rai ಗೆ ಮಗಳ ಭವಿಷ್ಯದ ಬಗ್ಗೆ ಚಿಂತೆ ಇಲ್ವಾ: ತನ್ನ ಸ್ವಾರ್ಥಕ್ಕಾಗಿ ಮಗಳನ್ನ ಶಾಲೆಯಿಂದ ಬಿಡಿಸಿ ಬಿಟ್ರಾ?

Written by Soma Shekar

Published on:

---Join Our Channel---

Aishwarya Rai : ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಐಶ್ವರ್ಯಾ ರೈ (Aishwarya Rai) ಇತ್ತೀಚೆಗೆ ಪ್ಯಾರಿಸ್ ಫ್ಯಾಷನ್ ವೀಕ್‌ ನಿಂದ ಮುಂಬೈಗೆ ಮರಳಿ ಬಂದು ಅನಂತರ ಕೆಲವೇ ದಿನಗಳ ಅಂತರದಲ್ಲಿ ನಟಿ ಮತ್ತೆ ಪ್ರಶಸ್ತಿ ಸಮಾರಂಭಕ್ಕಾಗಿ ಅಬುಧಾಬಿಗೆ ಹೊರಟಿದ್ದಾರೆ. ಆದರೆ ನಟಿಯು ಎಲ್ಲೇ ಹೋದರೂ ಅವರೊಂದಿಗೆ ಮಗಳನ್ನು ಕರೆದುಕೊಂಡು ಹೋಗುತ್ತಾರೆ.

ಈಗ ಇದನ್ನ ನೋಡಿದ ನೆಟ್ಟಿಗರು ನಟಿ ಐಶ್ವರ್ಯ ರೈ ಅವರನ್ನು ಪ್ರಶ್ನೆ ಮಾಡುತ್ತಿದ್ದಾರೆ. ಯಾವಾಗಲೂ ಎಲ್ಲಾ ಕಡೆಗೂ ಮಗಳನ್ನು ಜೊತೆಯಲ್ಲಿ ಕರೆದುಕೊಂಡು ಹೋದರೆ ಆರಾಧ್ಯ (Aradhya Bachchan) ಶಾಲೆಗೆ ಹೋಗೋದು ಯಾವಾಗ? ಆಕೆ ಬಾಲ್ಯವನ್ನು ಕಸಿದುಕೊಳ್ತಾ ಇದ್ದೀರಾ? ಎಂದಿದ್ದಾರೆ.

ಇದಕ್ಕೆ ನಟಿ ಐಶ್ವರ್ಯ ರೈ ಅವರು ಉತ್ತರವನ್ನು ನೀಡಿದ್ದು, ನಾನು ಪ್ರಯಾಣಿಸುವ ಮೊದಲು ಎಲ್ಲಾ ಯೋಜನೆಗಳನ್ನು, ಮುಂಚೆಯೇ ಮಾಡಿಕೊಳ್ಳುತ್ತೇನೆ. ಶಾಲೆಯನ್ನು ಗಮನದಲ್ಲಿ ಇಟ್ಟುಕೊಂಡು ಜೆಟ್‌ ಲ್ಯಾಗ್‌ ಆಗದ ರೀತಿಯಲ್ಲಿ ಪ್ರಯಾಣವನ್ನ ಪ್ಲಾನ್‌ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ ನಟಿ.

ಆದರೆ ಅನೇಕರು ಐಶ್ವರ್ಯ ರೈ ಎಲ್ಲಾ ಕಡೆಗೆ ಮಗಳನ್ನ ಕರೆದುಕೊಂಡು ಹೋಗುವುದನ್ನ ಟೀಕೆ ಮಾಡುತ್ತಿದ್ದಾರೆ. ನಟಿ ಮಾಳವಿಕ ಅವಿನಾಶ್ ಅವರು ಸಹಾ ಐಶ್ವರ್ಯ ರೈ ಅವರ ಇಂತಹ ಹವ್ಯಾಸದ ಕುರಿತಾಗಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.

Leave a Comment