Nayanthara : ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ (Nayanthara) ಮತ್ತು ತಮಿಳು ಸ್ಟಾರ್ ನಟ ಧನುಷ್ (Dhanush) ನಡುವಿನ ಸಮರ ಈಗ ಮತ್ತೊಂದು ಹಂತಕ್ಕೆ ತಲುಪಿದೆ. ಇಬ್ಬರ ನಡುವೆ ನಡೆಯುತ್ತಿರುವ ಶೀತಲ ಸಮರದಿಂದಾಗಿ ಈಗ ಇದು ದೊಡ್ಡ ಚರ್ಚೆಗೆ ಕಾರಣವಾಗಿದೆ. ಈಗ ನಟಿಗೆ ಧನುಷ್ ಅವರ ಕಡೆಯಿಂದ ನಟಿಗೆ ಮತ್ತೊಂದು ಎಚ್ಚರಿಕೆ ಸಿಕ್ಕಿದೆ. 24 ಗಂಟೆಗಳಲ್ಲಿ ವಿ ವಾ ದಿತ ವಿಡಿಯೋವನ್ನು ತೆಗೆದುಹಾಕದೇ ಹೋದಲ್ಲಿ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಧನುಷ್ ಅವರ ಪರ ವಕೀಲರು ನಟಿಗೆ ಎಚ್ಚರಿಕೆ ನೀಡಿದ್ದಾರೆ.
ಇನ್ನು ಈ ವಿ ವಾ ದಿತ ವಿಡಿಯೋ ಕುರಿತು ನಟ ಧನುಷ್ ಅವರು 10 ಕೋಟಿ ರೂಗಳ ಪರಿಹಾರ ಕೇಳಿ ನೋಟಿಸ್ ಕಳುಹಿಸಿದ ವಿಚಾರ ದೊಡ್ಡ ಸುದ್ದಿಯಾಗಿತ್ತು. ನಟನಿಂದ ನೊಟೀಸ್ ದೊರೆತ ಬೆನ್ನಲ್ಲೇ ಧನುಷ್ ವಿರುದ್ಧ ಆಕ್ರೋಶಗೊಂಡಿದ್ದ ನಟಿ ನಯನತಾರಾ ಒಂದು ಬಹಿರಂಗ ಪತ್ರವನ್ನು ಕೂಡಾ ಬರೆದಿದ್ದರು. ಈಗ ಈ ವಿಚಾರದಲ್ಲಿ ಧನುಷ್ ಪರ ವಕೀಲರು ಪ್ರವೇಶ ಮಾಡಿ ನಟಿಗೆ ಕಾನೂನಿನ ಮೂಲಕವೇ ಎಚ್ಚರಿಕೆ ಸಂದೇಶ ರವಾನೆ ಮಾಡಿದ್ದಾರೆ.
ಮುಂದಿನ 24 ಗಂಟೆಗಳ ಒಳಗೆ ವಿಡಿಯೋವನ್ನು ತೆಗೆದುಹಾಕಿ ಅಥವಾ ಕಠಿಣ ಕಾನೂನು ಕ್ರಮ ಎದುರಿಸಿ ಎಂಬುದಾಗಿ ಎಚ್ಚರಿಕೆಯನ್ನು ನೀಡಲಾಗಿದೆ. ಧನುಷ್ ಅವರ ನಾನೂ ರೌಡಿ ದಾನ್ ಸಿನಿಮಾದ ಮೇಲೆ ನನ್ನ ಕಕ್ಷಿದಾರನ ಹಕ್ಕುಸ್ವಾಮ್ಯವನ್ನು ಉಲ್ಲಂಘಿಸುವ ವಿಷಯವನ್ನು ನಿಮ್ಮ ಕ್ಲೈಂಟ್ ನಯಂತರಾ ಅವರ ಬಿಯಾಂಡ್ ದಿ ಫೇರಿಟೇಲ್ ಎಂಬ ಹೆಸರಿನ ಸಾಕ್ಷ್ಯಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ.
ಅದನ್ನು ತೆಗೆದುಹಾಕಲು ನಿಮ್ಮ ಕ್ಲೈಂಟ್ ಗೆ ಸಲಹೆಯನ್ನು ನೀಡಿ ಎಂದು ವಕೀಲರು ಸೂಚಿಸಿದ್ದಾರೆ. ಒಂದು ವೇಳೆ ಅದನ್ನು ತೆಗೆಯದೇ ಹೋದರೆ ನಿಮ್ಮ ಕ್ಲೈಂಟ್ ಮತ್ತು ನೆಟ್ ಫ್ಲಿಕ್ಸ್ ಇಂಡಿಯಾದ ವಿರುದ್ಧ ಹತ್ತು ಕೋಟಿ ರೂಗಳ ಮೊತ್ತ ಪರಿಹಾರವನ್ನು ನೀಡಬೇಕಾಗುವುದು ಮತ್ತು ಕಾನೂನಿನ ಕ್ರಮವನ್ನು ಜರುಗಿಸಲಾಗುವುದು ಎಂದು ಹೇಳಲಾಗಿದೆ. ನಯನತಾರಾ ಆರೋಪಗಳಿಗೆ ನಟ ಧನುಷ್ ಉತ್ತರವನ್ನು ನೀಡ್ತಾರೆ ಎಂದೂ ತಿಳಿಸಲಾಗಿದೆ.
BBK 11 : ರಜತ್ ನಾಲಗಗೆ ಲಗಾಮಿಲ್ವಾ? ಸುರೇಶ್ ನ ಅವಾಚ್ಯ ಶಬ್ದಗಳಿಂದ ನಿಂದಿಸಿದ ರಜತ್; ನೆಟ್ಟಿಗರ ಆಕ್ರೋಶ