Urvashi Rautela: ಆ ವಿಡಿಯೋದಲ್ಲಿ ಇರೋದು ನಾನೇ; ಲೀಕ್ ವೀಡಿಯೋ ಬಗ್ಗೆ ಶಾಕಿಂಗ್ ರಿಪ್ಲೈ ಕೊಟ್ಟ ನಟಿ ಊರ್ವಶಿ

Written by Soma Shekar

Published on:

---Join Our Channel---

Urvashi Rautela : ಬಾಲಿವುಡ್ ನಟಿ ಊರ್ವಶಿ ರೌಟೇಲಾ (Urvashi Rautela) ತಮ್ಮ ಸಿನಿಮಾ ವಿಚಾರಗಳ ಬದಲಾಗಿ ಬೇರೆ ವಿಚಾರಗಳಲ್ಲಿ ಒ ಒಂದಲ್ಲಾ ಒಂದು ರೀತಿ ಸುದ್ದಿಯಾಗುತ್ತಲೇ ಇರುತ್ತಾರೆ. ಕೆಲವೇ ದಿನಗಳ ಹಿಂದೆಯಷ್ಟೇ ನಟಿಯ ಸ್ನಾನದ ವಿಡಿಯೋ ಲೀಕ್ (Leak Video) ಆಗಿ ಸಂಚಲನ ಸೃಷ್ಟಿಸಿತ್ತು. ವೀಡಿಯೋ ವೈರಲ್ ಆಗಿ ಚರ್ಚೆಗಳು ಶುರುವಾದ ಬೆನ್ನಲ್ಲೇ ನಟಿ ಈ ಊರ್ವಶಿ ಈ ವಿಚಾರವಾಗಿ ಮಾದ್ಯಮಗಳಿಗೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

ತಮ್ಮ ಮುಂಬರಲಿರುವ ಸಿನಿಮಾವೊಂದರ ಪ್ರಚಾರ ಕಾರ್ಯದಲ್ಲಿ ನಟಿ ಭಾಗಿಯಾಗಿದ್ದರು.
ಈ ವೇಳೆ ವೀಡಿಯೋ ಕ್ಲಿಪ್ ಸೋರಿಕೆ ಬಗ್ಗೆ ಮಾತನಾಡಿದ ನಟಿಯು, ಆ ದಿನ ನಾನು ಅಸಮಾಧಾನಗೊಂಡಿದ್ದೆ. ಖಂಡಿತವಾಗಿ ಅದು ನನ್ನ ಖಾಸಗಿ ಕ್ಲಿಪ್ ಆಗಿರಲಿಲ್ಲ. ಅದು ನಟಿಸುತ್ತಿರುವ ‘ಘುಸ್ಪೈಟಿಯೇ’ ಚಲನಚಿತ್ರದ ಭಾಗವಾಗಿತ್ತು ಎಂದು ಹೇಳಿದ್ದಾರೆ.

ನಟಿಯ ಈ ಸ್ನಾನದ ವಿಡಿಯೋ ವೈರಲ್ ಆದ ಮೇಲೆ ಇದು ನಟಿಯ ಪಿಆರ್ ಸ್ಟಂಟ್ ಎಂದು ಕೆಲವರು ಟೀಕೆ ಮಾಡಿದರೆ ಇನ್ನೂ ಕೆಲವರು ಸಿನಿಮಾ ಪ್ರಮೋಷನ್ ಸ್ಟಂಟ್ ಅಂತ ಸಹಾ ಟೀಕೆ ಮಾಡಿದ್ದರು. ಈ ವೀಡಿಯೋವನ್ನು ಗಮನಿಸಿದಾಗ ಊರ್ವಶಿ ಮಂಗಳಸೂತ್ರ ಕೂಡ ಧರಿಸಿರೋದು ಕಾಣೋದ್ರಿಂದ ಇದು ಫೇಕ್ ಅಂತ ಹೇಳಲಾಗಿತ್ತು.

ಘುಸ್ಪೈಟಿಯೇ ಸಿನಿಮಾದಲ್ಲಿ ಊರ್ವಶಿ ರೌಟೇಲಾ ನಾಯಕಿಯಾಗಿ ನಟಿಸಿದ್ದು, ಈ ಸಿನಿಮಾ ಬರುವ ಆಗಸ್ಟ್ 9ರಂದು ತೆರೆಗೆ ಬರಲು ಸಜ್ಜಾಗಿದೆ. ಈ ಸಿನಿಮಾದಲ್ಲಿ ನಟಿ ಅಕ್ಷಯ್ ಒಬೆರಾಯ್ ಅವರೊಂದಿಗೆ ತೆರೆಯನ್ನು ಹಂಚಿಕೊಂಡಿದ್ದಾರೆ. ಈ ಸಿನಿಮಾವನ್ನು ಸುಸಿ ಗಣೇಶನ್ ನಿರ್ದೇಶನ ಮಾಡಿದ್ದಾರೆ.

Naga Chaitanya: ನಾಗಚೈತನ್ಯ 2ನೇ ಮದುವೆ, ಅಕ್ಕಿನೇನಿ ಕುಟುಂಬದಲ್ಲಿ ಏಕಕಾಲಕ್ಕೆ ಮೂರು ಮದುವೆಗಳ ಸಿದ್ಧತೆ

Leave a Comment