Shraddha Srinath: ಯೂಟರ್ನ್ ಸಿನಿಮಾ (U Turn Movie) ಮೂಲಕ ಸ್ಯಾಂಡಲ್ವುಡ್ ನಲ್ಲಿ ಸದ್ದು ಮಾಡಿ, ಆ ಸಿನಿಮಾದ ಸಕ್ಸಸ್ ನಂತರ ದಕ್ಷಿಣದ ಅನ್ಯ ಭಾಷೆಗಳಲ್ಲೂ ಅವಕಾಶಗಳನ್ನು ಪಡೆದುಕೊಂಡ ನಟಿ ಶ್ರದ್ಧಾ ಶ್ರೀನಾಥ್ (Shraddha Srinath). ವೈವಿದ್ಯಮಯ ಪಾತ್ರಗಳಲ್ಲಿ ನಟಿಸುತ್ತಾ ಸಿನಿ ಪ್ರೇಮಿಗಳ ಮನಸ್ಸನ್ನು ಗೆದ್ದಿರುವ ಈ ನಟಿ ಈಗ ಹೇಮ ಸಮಿತಿ ವರದಿ ನಂತರ ತಮ್ಮ ಅನಿಸಿಕೆ, ಅಭಿಪ್ರಾಯ ಹಂಚಿಕೊಂಡು ಗಮನ ಸೆಳೆದಿದ್ದಾರೆ.
ಮಲೆಯಾಳಂ ಸಿನಿಮಾರಂಗದ ಕೆಟ್ಟ ಮುಖವನ್ನು ಹೇಮಾ ಸಮಿತಿ ವರದಿ ಬಹಿರಂಗ ಮಾಡಿದ ನಂತರ ಅನೇಕ ನಟಿಯರು ತಮಗಾದ ಕೆಟ್ಟ ಅನುಭವ ಹಂಚಿಕೊಳ್ಳುತ್ತಿದ್ದು, ಈಗ ಸಂದರ್ಶನವೊಂದರಲ್ಲಿ ನಟಿ ಶ್ರದ್ಧಾ ಶ್ರೀನಾಥ್ ಅವರು, ಕೆಲಸ ಮಾಡುವ ಸ್ಥಳದಲ್ಲಿ ಅಂದ್ರೆ ಶೂಟಿಂಗ್ ಸೆಟ್ ನಲ್ಲಿ ನನಗೆ ಮುಜುಗರ ಪಡುವಂತಹ ಯಾವ ಸಂದರ್ಭ ಎದುರಾಗಿಲ್ಲ.
ಆದರೆ ಕೆಲಸದ ನಂತರ ಅಂದರೆ ಪಾರ್ಟಿಗಳನ್ನು ಮುಗಿಸಿಕೊಂಡು ಮನೆಗೆ ಹೋಗುವಾಗ ಡ್ರೈವರ್ ನೋಡುವ ರೀತಿ ಹಾಗೂ ಬೇರೆ ಜನರು ನೋಡುವ ರೀತಿ ಮುಜುಗುರ ತರಿಸುತ್ತೆ ಎಂದಿದ್ದು, ನಾನು ಕೆಲಸ ಮಾಡುವ ಸ್ಥಳದಲ್ಲಿ ಮಹಿಳಾ ಟೆಕ್ನಿಷಿಯನ್ಗಳಿಗೆ ಮೂಲಭೂತ ಸೌಕರ್ಯಗಳು ಇರುವುದಿಲ್ಲ.
ಮಹಿಳಾ ಟೆಕ್ನಿಷಿಯನ್ಸ್ ಅಂದ್ರೆ ಹೇರ್ ಸ್ಟೈಲಿಸ್ಟ್, ಮೇಕಪ್ ವಿಭಾಗದ ಮಹಿಳೆಯರಿಗೆ ಮೂಲಭೂತ ಸೌಕರ್ಯ ಒದಗಿಸಬೇಕೆಂದು ನಟಿ ಹೇಳಿದ್ದಾರೆ. ನಟಿ ಕನ್ನಡದಲ್ಲಿ ಹೇಮಾ ಸಮಿತಿ ರೀತಿಯ ಕಮಿಟಿ ಬೇಕಂದು ಹೇಳಿಲ್ಲವಾದರೂ ಮಹಿಳಾ ಟೆಕ್ನಿಷಿಯನ್ ಗಳ ಕಡೆಗೆ ಗಮನ ನೀಡಬೇಕೆಂದು ಹೇಳಿದ್ದಾರೆ.
Eshani: ಕೆಟ್ಟದಾಗಿ ಕಾಮೆಂಟ್ ಮಾಡೋರಿಕೆ ಖಡಕ್ ಆಗಿ ಉತ್ತರ ಕೊಡ್ತಾ ಚಳಿ ಬಿಡಿಸಿದ ಇಶಾನಿ