Samantha : ಕೆಲವೊಂದು ತಪ್ಪುಗಳನ್ನು ಮಾಡಿದ್ದೇನೆ, ಮಾತಿಂದಲೇ ಮತ್ತೊಮ್ಮೆ ಫ್ಯಾನ್ಸ್ ಮನಗೆದ್ದ ಸಮಂತಾ

Written by Soma Shekar

Published on:

---Join Our Channel---

Samantha : ದಕ್ಷಿಣದ ಸಿನಿಮಾಗಳಲ್ಲಿ ಅದರಲ್ಲೂ ವಿಶೇಷವಾಗಿ ತೆಲುಗು ಸಿನಿಮಾ ರಂಗದಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ್ದ ಸಮಂತಾ (Samantha) ಈಗ ಹೆಚ್ಚಾಗಿ ಬಾಲಿವುಡ್ ಕಡೆಗೆ ತಮ್ಮ ಒಲವನ್ನು ತೋರಿಸಿದ್ದಾರೆ. ಪ್ರಸ್ತುತ ನಟಿ ಹನಿ ಬನಿ ಸಿಟಾಡಲ್ (Honey Bunny Citadel) ವೆಬ್ ಸೀರೀಸ್ ಮೂಲಕ ಸಾಕಷ್ಟು ಸುದ್ದಿಯಾಗಿದ್ದಾರೆ. ಸಿನಿಮಾಗಳಲ್ಲಿ ಇತ್ತೀಚೆಗೆ ಸಮಂತಾ ಅವರಿಗೆ ನಿರೀಕ್ಷಿತ ಮಟ್ಟದ ಗೆಲುವು ಸಿಕ್ಕಿಲ್ಲ. ಅದಕ್ಕೆ ನಟಿ ಹೆಚ್ಚಾಗಿ ವೆಬ್ ಸೀರೀಸ್ ಕಡೆಗೆ ಗಮನವನ್ನು ಹರಿಸಿದ್ದಾರೆ.

ಇವೆಲ್ಲವುಗಳ ನಡುವೆ ನಟಿ ಒಂದಷ್ಟು ವಿಚಾರಗಳನ್ನು ಹಂಚಿಕೊಂಡು ನಿರೀಕ್ಷಿತ ಗೆಲುವನ್ನು ಪಡೆಯದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆ ನಟಿ ಸಂವಾದ ನಡೆಸುವಾಗ, ಪ್ರತಿಯೊಂದು ಪಾತ್ರವನ್ನು ಚಾಲೆಂಜಿಂಗ್ ಆಗಿ ತೆಗೆದುಕೊಳ್ಳಬೇಕು ಎಂದು ನನಗೆ ನಾನು ಪ್ರಾಮಿಸ್ ಮಾಡಿಕೊಂಡಿದ್ದೇನೆ. ನಾನೂ ಸಹಾ ಕೆಲವು ತಪ್ಪುಗಳನ್ನು ಮಾಡಿದ್ದೇನೆ. ಎಲ್ಲ ಸಮಯದಲ್ಲೂ ಗೆಲುವು ಸಿಕ್ಕಿಲ್ಲ.

ನಾನು ನನ್ನ ವೈಫಲ್ಯಗಳನ್ನು ಒಪ್ಪಿಕೊಳ್ಳುತ್ತೇನೆ ಎಂಬುದಾಗಿ ಸಮಂತಾ ಹೇಳಿದ್ದಾರೆ. ಕೊನೆಯ ಕೆಲವೊಂದು ಸಿನಿಮಾಗಳು ತಾನು ಅಂದುಕೊಂಡಂತೆ ಮೂಡಿ ಬಂದಿಲ್ಲ ಎನ್ನುವ ವಿಚಾರ ಹಾಗೂ ಆ ಸಿನಿಮಾಗಳ ಸೋಲನ್ನು ಸಹಾ ನಟಿ ಒಪ್ಪಿಕೊಂಡಿದ್ದಾರೆ. ಪ್ರಸ್ತುತ ಸಮಂತ ಬಹುದಿನಗಳ ನಂತರ ಹನಿ ಬನಿ ಸಿಟಾಡೆಲ್ ವೆಬ್ ಸೀರೀಸ್ ನಲ್ಲಿ ಆ್ಯಕ್ಷನ್ ಅವತಾರದಲ್ಲಿ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ.

ಹಿಂದೆ ಎಂದೂ ಕೂಡಾ ಮಾಡದಂತಹ ಪಾತ್ರ ಒಂದರಲ್ಲಿ ಸಮಂತಾ ಕಾಣಿಸಿಕೊಳ್ಳುತ್ತಿರುವುದು ಅವರ ಅಭಿಮಾನಿಗಳಿಗೆ ಸಾಕಷ್ಟು ಖುಷಿಯನ್ನು ನೀಡಿದೆ. ಸಿನಿಮಾಗಳ ವಿಚಾರಕ್ಕೆ ಬಂದರೆ ನಟಿ ಪ್ರಸ್ತುತ ತೆಲುಗಿನಲ್ಲಿ ಅಥವಾ ತಮಿಳಿನಲ್ಲಿ ಯಾವುದೇ ಹೊಸ ಸಿನಿಮಾವನ್ನು ಮಾಡುತ್ತಿಲ್ಲ. ಅಲ್ಲದೇ ಹೊಸ ಸಿನಿಮಾಗಳ ಕುರಿತಾಗಿ ಯಾವುದೇ ಹೊಸ ಅಪ್ಡೇಟ್ ಸಹಾ ಇನ್ನೂ ಹೊರಗೆ ಬಂದಿಲ್ಲ.

Ekta Kapoor : ನಾನು ಹಿಂದೂ, ನಾಚಿಕೆ ಏಕೆ ? ಬೇರೆ ಧರ್ಮದ ಬಗ್ಗೆ ಪ್ರತಿಕ್ರಿಯೆ ಕೊಡಲ್ಲ, ಏಕ್ತಾ ಮಾತಿಗೆ ಭಾರೀ ಮೆಚ್ಚುಗೆ

Leave a Comment