Samatha: ಮದುವೆ ಆಗಿರೋ ನಿರ್ದೇಶಕನ ಜೊತೆಗೆ ಸಮಂತಾ ಡೇಟಿಂಗ್; ಶುರುವಾಯ್ತಾ ನಟಿಗೆ ಲವ್

Written by Soma Shekar

Published on:

---Join Our Channel---

Samantha : ನಾಗಚೈತನ್ಯ (Nagachaitanya) ಮತ್ತು ಸಮಂತಾ (Samantha) ವಿಚ್ಚೇದನದ ಸುದ್ದಿ ಹೊರ ಬಂದಾಗ ಅದೊಂದು ಸಂಚಲನವನ್ನು ಸೃಷ್ಟಿಸಿತ್ತು, ಅಭಿಮಾನಿಗಳ ಪಾಲಿಗೆ ಅದು ನುಂಗಲಾರದ ತುತ್ತಾಗಿ, ಅರಗಿಸಿಕೊಳ್ಳಲಾಗದ ಸತ್ಯವಾಗಿ ಪರಿಣಮಿಸಿತ್ತು. ಹೀಗೆ ಸಮಂತಾ ಮತ್ತು ನಾಗಚೈತನ್ಯ ದೂರಾದ ಮೇಲೆ ಈಗ ನಾಗಚೈತನ್ಯ ಮತ್ತೆ ಹೊಸ ಜೀವನದ ಶುಭಾರಂಭವನ್ನ ಮಾಡೋದಕ್ಕೆ ಸಿದ್ಧವಾಗಿದ್ದು, ನಟಿ ಶೋಭಿತಾ ಧೂಳಿಪಾಳ (Shobhita Dhulipala) ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ವಿಚ್ಚೇದನದ ನಂತರ ಒಂಟಿಯಾಗಿದ್ದ ಸಮಂತಾ ನಿರ್ದೇಶಕನೊಬ್ಬರ ಜೊತೆಗೆ ಡೇಟಿಂಗ್ ಮಾಡ್ತಿದ್ದಾರೆ ಅನ್ನೋ ಶಾಕಿಂಗ್ ವಿಚಾರವೊಂದು ಈಗ‌ ಹೊರ ಬಂದಿದೆ. ಹೌದು, ಸಮಂತಾ ನಿರ್ದೇಶಕ ರಾಜ್ ನಿಡಿಮೋರು (Raj Nidimoru) ಜೊತೆಗೆ ಡೇಟ್ ಮಾಡ್ತಿದ್ದಾರೆ ಅನ್ನೋ ಹೊಸ ಸುದ್ದಿಯೊಂದು ಎಲ್ಲರ ಗಮನವನ್ನು ಸೆಳೆಯುತ್ತಿದೆ. ಇದನ್ನು ಕೇಳಿದ ಮೇಲೆ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

ಇಂತದೊಂದು ಸುದ್ದಿಗೆ ಕಾರಣವೂ ಇದೆ ಅದೇನೆಂದರೆ ರಾಜ್ ಮತ್ತು ಡಿಕೆ ಪ್ರೊಡಕ್ಷನ್ಸ್ ನಲ್ಲಿ ಸಮಂತಾ ಒಂದರನಂತರ ಮತ್ತೊಂದು ವೆಬ್ ಸಿರೀಸ್ ನಲ್ಲಿ ನಟಿಸುತ್ತಿರುವುದು. ಈ ಹಿಂದೆ ತೆಲುಗಿನ ಈ ಜನಪ್ರಿಯ ನಟಿಯನ್ನು ರಾಜ್ ಮತ್ತು ಡಿಕೆ ಪ್ರೊಡಕ್ಷನ್ಸ್‌ ದಿ ಫ್ಯಾಮಿಲಿ ಮ್ಯಾನ್ 2 ಮೂಲಕ ನಟಿಯನ್ನು ಹಿಂದಿ ವೆಬ್ ಸಿರೀಸ್ ಗೆ ಕರೆ ತರಲಾಯಿತು.

ಅದಾದ ನಂತರ ಈಗ ಸಿಟಾಡೆಲ್ : ಹನಿ ಬನಿ ವೆಬ್ ಸಿರೀಸ್ ನಲ್ಲಿ ಸಹಾ ಸಮಂತಾ ನಾಯಕಿಯಾಗಿದ್ದಾರೆ. ವೆಬ್ ಸಿರೀಸ್ ಗಳನ್ನು ಮಾಡುವಾಗಲೇ ರಾಜ್ ನಿಡಿಮೋರ್ ಜೊತೆಗೆ ಸ್ನೇಹವಾಗಿ ಸದ್ಯ ಡೇಟ್ ಮಾಡುತ್ತಿದ್ದಾರೆ ಎನ್ನುವುದು ಸುದ್ದಿ. ರಾಜ್ ಗೆ ಈಗಾಗಲೇ ಮದುವೆಯಾಗಿದೆ ಎನ್ನುವುದು ಸತ್ಯ. ಈ ವಿಷಯದ ಅಸಲಿಯತ್ತು ಇನ್ನಷ್ಟೇ ಹೊರ ಬರಬೇಕಾಗಿದೆ.

Actor Yash : ಟಾಕ್ಸಿಕ್ ಗೂ ಮೊದಲೇ ಸಲ್ಮಾನ್ ಖಾನ್ ಬ್ಯಾನರ್ ನಲ್ಲಿ ರಾಖಿ ಭಾಯ್; ಥ್ರಿಲ್ ಆದ ಯಶ್ ಫ್ಯಾನ್ಸ್

Leave a Comment