Samantha: ಬಾಲಿವುಡ್ ನಟನ ಜೊತೆ ಅಂತಾ ಸೀನ್ ಗಳಲ್ಲಿ ಸಮಂತಾ; ಸುದ್ದಿ ಕೇಳಿ ಥ್ರಿಲ್ ಜೊತೆ ಶಾಕ್ ಆದ ಫ್ಯಾನ್ಸ್

Written by Soma Shekar

Published on:

---Join Our Channel---

Samantha: ಟಾಲಿವುಡ್ (Tollywood) ಬ್ಯೂಟಿ ಸಮಂತಾ (Samantha) ಈಗಾಗಲೇ ಸೌತ್ ಸಿನಿಮಾಗಳಲ್ಲಿ ಹೆಸರನ್ನು ಮಾಡಿದ್ದು, ಬಾಲಿವುಡ್ ಗೂ ಎಂಟ್ರಿ ಕೊಟ್ಟಾಗಿದೆ. ಸದ್ಯ ಸಿನಿಮಾಗಳಿಂದ ನಟಿ ಅಂತರವನ್ನು ಕಾಯ್ದುಕೊಂಡಿದ್ದರೂ ಸಹಾ ಬೇಡಿಕೆ ಮಾತ್ರ ಕುಗ್ಗಿಲ್ಲ ಎನ್ನುವುದು ಸತ್ಯ. ಹೊಸ ಅವಕಾಶಗಳು ನಟಿಯನ್ನು ಅರಸಿ ಬರುತ್ತಿವೆಯಾದರೂ ನಟಿ ಇನ್ನೂ ಯಾವುದಕ್ಕೂ ಗ್ರೀನ್ ಸಿಗ್ನಲ್ ಅನ್ನು ನೀಡಿಲ್ಲ.

ಆರೋಗ್ಯದಲ್ಲಿ ಚೇತರಿಕೆ ಕಂಡಿರುವ ನಟಿ ಇದೀಗ ಹೊಸ ಸಿನಿಮಾಗಳು ಮತ್ತು ವೆಬ್ ಸಿರೀಸ್ ಗಳಲ್ಲಿ ನಟಿಸಲು ಸಜ್ಜಾಗಿದ್ದಾರೆನ್ನುವ ಸುದ್ದಿ ಕೇಳಿ ನಟಿಯ ಅಭಿಮಾನಿಗಳು ಖುಷಿಯಾಗಿದ್ದಾರೆ. ಹೌದು ಸಮಂತಾ ಈಗ ಬಾಲಿವುಡ್ ನ ಬೋಲ್ಡ್ ವೆಬ್ ಸಿರೀಸ್ ರಕ್ತ ಬೀಜ್ ನಲ್ಲಿ (Rakta Beej) ನಟಿಸುತ್ತಿದ್ದಾರೆ ಎನ್ನುವ ವಿಷಯವು ಸುದ್ದಿಯಾಗಿದ್ದು, ಎಲ್ಲರ ಗಮನವನ್ನು ಸೆಳೆದಿದೆ.

ಈ ವೆಬ್ ಸಿರೀಸ್ ನಲ್ಲಿ ನಟಿ ಬಾಲಿವುಡ್ ನಟ ಅಲಿ ಫಜಲ್ ಎದುರು ಬೋಲ್ಡ್ ಸೀನ್ ಗಳಲ್ಲಿ ಸಹಾ ಕಾಣಿಸಿಕೊಳ್ಳುತ್ತಾರೆ ಎನ್ನಲಾಗಿದ್ದು, ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಸಮಂತಾ ಮತ್ತು ಅಲಿ ಫಜಲ್ (Ali Fazal) ನಡುವೆ ಹಸಿ ಬಿಸಿ ದೃಶ್ಯಗಳು ಇರಲಿದೆ ಎನ್ನುವ ವಿಚಾರವೀಗ ಬಹಿರಂಗವಾಗಿದೆ.‌ ಈ ದೃಶ್ಯಗಳು ಹೇಗಿರಲಿದೆ ಕಾದು ನೋಡಬೇಕಾಗಿದೆ.

ದಿ ಫ್ಯಾಮಿಲಿ ಮ್ಯಾನ್ (The Family Man) ಸಿರೀಸ್ ಅನ್ನು ನಿರ್ದೇಶನ ಮಾಡಿದ್ದ ರಾಜ್ ಮತ್ತು ಡಿಕೆ ಈ ಹೊಸ ವೆಬ್ ಸಿರೀಸ್ ಅನ್ನು ನಿರ್ಮಾಣ ಮಾಡುತ್ತಿದ್ದು, ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ ಎನ್ನಲಾಗಿದೆ. ಇನ್ನು ಸಮಂತಾ ಸಿನಿಮಾ ವಿಚಾರದಲ್ಲಿ ಯಾರ ಜೊತೆಗೆ ಹೊಸ ಪ್ರಾಜೆಕ್ಟ್ ಮಾಡುತ್ತಾರೆನ್ನುವ ನಿರೀಕ್ಷೆಗಳು ಸಹಾ ಇವೆ.

DKD Show: ಗ್ಯಾರೇಜ್ ನಿಂದ ಡಿಕೆಡಿ ವರೆಗೆ ಬಂದ ಸಂಜನಾ, ಜೀವನದ ನೋವಿನ ನಡುವೆಯೇ ಸಾಧನೆಯ ಕಥೆ

Leave a Comment