ಅಂದಕ್ಕಾಗಿ ಪ್ಲಾಸ್ಟಿಕ್ ಸರ್ಜರಿ, ಟೀಕೆ ಮಾಡೋರಿಗೆ ಖಡಕ್ ಉತ್ತರ ಕೊಟ್ಟ Nayanthara, ಸುಟ್ಟರೂ ಸಿಗಲ್ಲ

Written by Soma Shekar

Published on:

---Join Our Channel---

Nayanthara : ಸಿನಿಮಾ ರಂಗದಲ್ಲಿ ಹಲವು ನಟಿಯರು ತಮ್ಮ ಅಂದವನ್ನು ಹೆಚ್ಚಿಸಿಕೊಳ್ಳಲು ಕಾಸ್ಮೆಟಿಕ್ ಸರ್ಜರಿಯನ್ನು ಮಾಡಿಸಿಕೊಳ್ಳುತ್ತಾರೆ.‌ ಇದರಿಂದಾಗಿ ಅನೇಕ ನಟಿಯರ ಲುಕ್ ನಲ್ಲಿ ಇದ್ದಕ್ಕಿದ್ದ ಹಾಗೆ ಆಗೋ ಬದಲಾವಣೆಗಳು ಎಲ್ಲರಲ್ಲೂ ಅಚ್ಚರಿಯನ್ನು ಮೂಡಿಸುತ್ತದೆ. ಈಗ ಲೇಡಿ ಸೂಪರ್ ಸ್ಟಾರ್ ಖ್ಯಾತಿಯ ನಟಿ ನಯನತಾರಾ (Nayanthara) ಸಹಾ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡಿದೆ.

ಹೌದು, ನಯನತಾರ ಸುಂದರವಾಗಿ ಕಾಣೋದಕ್ಕೆ ಸರ್ಜರಿ ಮಾಡಿಸಿಕೊಂಡಿದ್ದಾರೆ, ಅವರದ್ದು ಸಹಜ ಸೌಂದರ್ಯ ಅಲ್ಲ ಎಂದು ಹೇಳಿದವರಿಗೆ ನಟಿ ಸಂದರ್ಶನವೊಂದರಲ್ಲಿ ಖಡಕ್ ತಿರುಗೇಟನ್ನೇ ನೀಡಿದ್ದಾರೆ. ನಟಿ ಮಾತನಾಡುತ್ತಾ, ನಾನು ಯಾವುದೇ ಕಾರ್ಯಕ್ರಮಕ್ಕೆ ಹೋಗುವ ಮೊದಲು ನನ್ನ ಹುಬ್ಬುಗಳನ್ನು ಶೇಪ್ ಮಾಡಿಸುತ್ತೇನೆ.

ಕಣ್ಣು ಹುಬ್ಬು ಶೇಪ್ ಮಾಡಿಸುವುದರಿಂದಲೇ ಮುಖದಲ್ಲಿ ಬದಲಾವಣೆ ಕಾಣುತ್ತದೆ ಹಾಗೂ ಅದನ್ನು ನೋಡಿದವರು ನಾನು ಪ್ಲಾಸ್ಟಿಕ್ ಸರ್ಜರಿ (cosmetic surgery) ಮಾಡಿಸಿಕೊಂಡಿದ್ದೇನೆ ಅಂತ ತಿಳಿದುಕೊಳ್ತಾರೆ ಎನ್ನುವ ಮಾತನ್ನ ಹೇಳಿದ್ದಾರೆ.‌ ನಾನು ಡಯಟ್ ಮಾಡುವುದರಿಂದ ನನ್ನ ದೇಹದ ತೂಕದಲ್ಲಿ ಏರಿಳಿತವಾಗುತ್ತದೆ. ಇದರಿಂದ ನನ್ನ ಕೆನ್ನೆ ಕೆಲವೊಮ್ಮೆ ಒಳಗೆ ಹೋದಂತೆ ಕಾಣುತ್ತದೆ.

ಇನ್ನೂ ಕೆಲವೊಮ್ಮೆ ಕೆನ್ನೆಗಳು ಊದಿಕೊಂಡಂತೆ ಕಾಣುತ್ತದೆ.. ಬೇಕಿದ್ದರೆ ನೀವು ನನ್ನನ್ನ ಮುಟ್ಟಿ ನೋಡಬಹುದು. ಸಮಾಧಾನ ಆಗದಿದ್ದರೆ ಸುಟ್ಟು ನೋಡಬಹುದು, ಆಗ ನಿಮಗೆ ಯಾವುದೇ ಪ್ಲಾಸ್ಟಿಕ್ ಇಲ್ಲ ಎನ್ನುವುದು ಮನದಟ್ಟಾಗಬಹುದು ಎಂದು ನಯನತಾರಾ ಸ್ಪಷ್ಟನೆ ನೀಡುತ್ತಾ ಪ್ಲಾಸ್ಟಿಕ್ ಸರ್ಜರಿ ಮುಖ ಎಂದವರಿಗೆ ತಮ್ಮ ಉತ್ತರವನ್ನು ನೀಡಿದ್ದಾರೆ.

ಶೋಭಿತಾ ಜೊತೆ ಮದುವೆ, ಮಾಜಿ ಪತ್ನಿ ಸಮಂತಾ ಜೊತಗಿನ ತನ್ನ ಕೊನೆಯ ನೆನಪನ್ನು ಅಳಿಸಿ ಹಾಕಿದ Naga Chaitanya

Leave a Comment