Meenu Muneer : ಒಬ್ಬ ಮಂಚಕ್ಕೆ ನೂಕಿದ, ಇನ್ನೊಬ್ಬ ಬಾಗಿಲು ಬಡಿದ, ಮಾಲಿವುಡ್ ಕರಾಳತೆ, ಜನಪ್ರಿಯ ನಟಿ ಸಂಚಲನ ಹೇಳಿಕೆ

Written by Soma Shekar

Published on:

---Join Our Channel---

Mollywood: ಹೇಮಾ ಸಮಿತಿ ವರದಿ ಬಿಡುಗಡೆಯಿಂದಾಗಿ ಮಲೆಯಾಳಂ ಸಿನಿಮಾ ರಂಗ ಅಥವಾ ಮಾಲಿವುಡ್ ನಲ್ಲಿನ (Mollywood) ಲೈಂ ಗಿ ಕ ಆರೋಪಗಳು ಒಂದರ ನಂತರ ಮತ್ತೊಂದು ಎನ್ನುವಂತೆ ಸಾಲು ಸಾಲಾಗಿ ಹೊರ ಬರುತ್ತಿದೆ. ಮಲೆಯಾಳಂ ಚಿತ್ರೋದ್ಯಮದಲ್ಲಿನ ಅವ್ಯವಹಾರಗಳ ಬಗ್ಗೆ ತನಿಖೆ ನಡೆಯಬೇಕೆಂಬ ಆಗ್ರಹ ಕೇಳಿ ಬರುತ್ತಿರುವಾಗಲೇ ಕೆಲವರು ಈಗಾಗಲೇ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಇವೆಲ್ಲವುಗಳ ನಡುವೆಯೇ ಮಲೆಯಾಳಂ ನಟಿ ಮೀನು ಮುನೀರ್ (Meenu Muneer) ಫೇಸ್ ಬುಕ್ ನಲ್ಲಿ ನಟರಾದ ಮುಖೇಶ್, ಮಣಿಯನ್ ಪಿಳ್ಳ ರಾಜು, ಇಡವೇಲ ಬಾಬು ಮತ್ತು ಜಯಸೂರ್ಯ ಅವರ ಫೋಟೋಗಳನ್ನ ಶೇರ್ ಮಾಡಿ ತನಗೆ ಸಿನಿಮಾ ಸೆಟ್ ನಲ್ಲಿ ದೈಹಿಕವಾಗಿ ಮತ್ತು ಮೌಖಿಕ ನಿಂದನೆ ಮಾಡಿದ್ದಾರೆನ್ನುವ ಆರೋಪವನ್ನು ಮಾಡಿದ್ದಾರೆ.

ನಟಿಯು ಮಲೆಯಾಳಂನ ಪ್ರಮುಖ ನಟನೊಬ್ಬ ಹೊಟೇಲ್ ಕೋಣೆಯಲ್ಲಿ ನನ್ನ ಮೇಲೆ ಲೈಂ ಗಿ ಕ ಕಿರುಕುಳವನ್ನು ನೀಡಲು ಯತ್ನಿಸಿದ, ತನ್ನ ಕೋಣೆಗೆ ಬಂದು ಉತ್ತಮ ಅವಕಾಶಗಳು ಬೇಕಾದರೆ ಅಂತ ಹೇಳುತ್ತಲೇ ನನ್ನನ್ನ ಹಾಸಿಗೆ ಮೇಲೆ ತಳ್ಳಿದರು. ನಾನು ಕೂಡಲೇ ಆ ಸ್ಥಳವನ್ನು ಬಿಟ್ಟು ಬಂದೆ ಎಂದು ಹೇಳಿದ್ದಾರೆ.

ಅದಕ್ಕಿಂತ ಮೊದಲು ಕಾರಿನಲ್ಲಿ ಹೋಗುವಾಗ ನಟನೊಬ್ಬರು ನನ್ನ ಕೋಣೆಗೆ ಬರುವುದಾಗಿ ಹೇಳಿದ್ದರು. ಹೇಳಿದಂತೆ ರಾತ್ರಿ ಬಂದು ನನ್ನ ಕೋಣೆ ಬಾಗಿಲು ಬಡಿದರು ಎಂದು ಹೇಳಿದ್ದಾರೆ ಮೀನು. ಅಲ್ಲದೇ ಪ್ರೊಡಕ್ಷನ್ ಕಂಟ್ರೋಲರ್ ಗಳಾದ ವಿಚು, ನೋಬಲ್,ವಕೀಲ ಚಂದ್ರಶೇಖರನ್ ಲೈಂ ಗಿಕ ಕಿರುಕುಳ ನೀಡಿದ್ದಾರೆ ಎಂದಿದ್ದಾರೆ ನಟಿ. ಈ ಬಗ್ಗೆ ನಟರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Atlee Kumar: ಜವಾನ್ ಗೆದ್ದ ಮೇಲೆ ಆ್ಯಟ್ಲಿ ಗೆ ಸೌತ್ ಹೀರೋಗಳು ಕಾಣಿಸ್ತಾ ಇಲ್ವಾ? ಆಗ ಶಾರೂಖ್ ಈಗ ಸಲ್ಮಾನ್

Leave a Comment