Actress Kasturi : ದಕ್ಷಿಣದ ಸಿನಿಮಾಗಳಲ್ಲಿ ನಟಿಸಿ ಹೆಸರನ್ನು ಮಾಡಿರುವ ನಟಿ ಕಸ್ತೂರಿ (Actress Kasturi) ಅವರು ಇತ್ತೀಚಿನ ವರ್ಷಗಳಲ್ಲಿ ಕಿರುತೆರೆಯ ಸೀರಿಯಲ್ ಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚಿಗೆ ನಟಿ ಸಿನಿಮಾ, ಸೀರಿಯಲ್ ಗಳಿಗಿಂತ ಹೆಚ್ಚಾಗಿ ತಾವು ನೀಡುವ ಹೇಳಿಕೆಗಳು ಮತ್ತು ಆಡುವ ಮಾತುಗಳಿಂದಾಗಿಯೇ ಸುದ್ದಿಯಾಗುವುದು ಮಾತ್ರವೇ ಅಲ್ಲದೇ ವಿ ವಾ ದಗಳನ್ನು ಸಹಾ ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ..
ಕಸ್ತೂರಿ ಅವರು ಕೆಲವೇ ದಿನಗಳ ಹಿಂದೆಯಷ್ಟೇ ತೆಲುಗು (Telugu) ಮಾತನಾಡುವ ಜನರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದು ತೆಲುಗು ಭಾಷಿಕರ ಕೋಪ ಮತ್ತು ಆಕ್ರೋಶಕ್ಕೆ ಕಾರಣವಾಗಿತ್ತು. ನಟಿಯ ಮೇಲೆ ದೂರು ದಾಖಲಾಗಿತ್ತು. ದೂರಿನ ಹಿನ್ನೆಲೆಯಲ್ಲಿ ನಟಿಯನ್ನು ಬಂಧಿಸಿ (Arrest) ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿತ್ತು.
ಈ ಪ್ರಕರಣದಲ್ಲಿ ಈಗ ನಟಿಗೆ ನ್ಯಾಯಾಲಯದಿಂದ ಷರತ್ತು ಬದ್ಧ ಜಾಮೀನು ದೊರೆತಿದ್ದು, ಜಾಮೀನು ಪಡೆದ ಒಂದು ದಿನದ ನಂತರ ನಟಿ ಕಸ್ತೂರಿ ಅವರನ್ನು ಗುರುವಾರ ಚೈನ್ನೈ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಮಾಡಲಾಗಿದೆ. ಕಾರಾಗೃಹದಿಂದ ಹೊರ ಬಂದ ನಟಿ ಮಾದ್ಯಮಗಳ ಮುಂದೆ ಮಾತನಾಡಿದ್ದಾರೆ. ನನ್ನನ್ನ ಕೆರಳಿದ ಬಿರುಗಾಳಿಯನ್ನಾಗಿ ಮಾಡಿದ ಎಲ್ಲರಿಗೂ ಧನ್ಯವಾದ.
ಅಂತಿಮವಾಗಿ ದೂರಿನ ಆಧಾರದ ಮೇಲೆ ಪೋಲಿಸ್ ಪ್ರಕರಣ ಜೈಲುವಾಸಕ್ಕೆ ಕಾರಣವಾಯಿತು. ನನ್ನದು ಸಣ್ಣ ದನಿ ಆದರೆ ಈಗ ಅದು ಉಗ್ರ ಚಂಡಮಾರುತವಾಗಿ ಬದಲಾಗಿದೆ ಎಂದು ನಟಿ ಹೇಳಿದ್ದಾರೆ. ಅಲ್ಲದೇ ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದಗಳು , ಜೈಲಿನಲ್ಲಿ ನನನ್ನ ಉತ್ತಮವಾಗಿ ನೋಡಿಕೊಂಡಿದ್ದಾರೆಂದು ನಟಿ ಹೇಳಿದ್ದಾರೆ.
Amaran : ನೆಮ್ಮದಿ ಹಾಳು ಮಾಡಿದ ಸಾಯಿ ಪಲ್ಲವಿ ಫ್ಯಾನ್ಸ್; 1.1 ಕೋಟಿ ಪರಿಹಾರ ಕೇಳಿದ ವಿದ್ಯಾರ್ಥಿ