Jyothi Rai: ನಟಿ ಜ್ಯೋತಿ ರೈ (Jyothi Rai) ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ವೈಯಕ್ತಿಕ ಜೀವನದ ವಿಚಾರವಾಗಿ, ವೃತ್ತಿ ಜೀವನದ ಸುದ್ದಿಗಳಿಗಾಗಿ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಸಿಕ್ಕಾಪಟ್ಟೆ ಬೋಲ್ಡ್ ಫೋಟೋಗಳಿಂದಲೇ ಸಖತ್ ಟ್ರೆಂಡ್ ಅನ್ನ ಕ್ರಿಯೇಟ್ ಮಾಡುತ್ತಿದ್ದಾರೆ. ನಟಿಯ ಪೋಸ್ಟ್ ಗಳು ವೈರಲ್ ಆಗೋದು ಸಾಮಾನ್ಯವಾಗಿದೆ.
ನಟಿ ತಮ್ಮ ಇನ್ಸ್ಟಾಗ್ರಾಂ ನಲ್ಲಿ ತಮಗೆ ಕೆಟ್ಟದಾಗಿ ಕಾಮೆಂಟ್ ಮಾಡೋ ಸುಮಾರು ಒಂದು ಸಾವಿರ ಅಕೌಂಟ್ ಗಳನ್ನು ಬ್ಲಾಕ್ ಮಾಡಿದ್ದಾಗಿ ಕೆಲವೇ ದಿನಗಳ ಹಿಂದೆ ಹೇಳುತ್ತಾ, ಅಂತಹವರ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು, ಇನ್ಸ್ಟಾಗ್ರಾಂ ನಲ್ಲಿರುವ ವಿಶೇಷ ಸೌಲಭ್ಯ ಬಳಸಿಕೊಳ್ಳಬೇಕೆಂಬ ಮಾತುಗಳನ್ನು ಹೇಳಿದ್ದರು.
ಆದರೆ ಈಗ ನಟಿಯೇ ತಮ್ಮ ಫೋಟೊಗಳನ್ನು ಶೇರ್ ಮಾಡಿಕೊಂಡ ಮೇಲೆ ಕಾಮೆಂಟ್ ಸೆಕ್ಷನ್ ಅನ್ನು ಆಫ್ ಮಾಡಿಕೊಂಡಿದ್ದಾರೆ. ಬಹುಶಃ ನಟಿಯು ಸಹಾ ಕೊನೆಗೆ ಕೆಟ್ಟ ಕಾಮೆಂಟ್ ಗಳಿಂದ ಬೇಸತ್ತು ಕಾಮೆಂಟ್ ಮಾಡೋರ ಸಹವಾಸವೇ ಬೇಡ ಅಂತ ಇಂತ ನಿರ್ಧಾರವನ್ನು ಮಾಡಿ ಬಿಟ್ರಾ ಅನ್ನೋ ಅನುಮಾನ ಉಂಟಾಗಿದೆ.
ಅಲ್ಲದೇ ಕಾಮೆಂಟ್ ಬದಲಾಗಿ ಯಾರಾದ್ರೂ ಮೆಸೆಜ್ ಮಾಡಿದರೆ ಅದು ಮೆಸೆಜ್ ಮಾಡಿದವರಿಗೆ ಸಮಸ್ಯೆ ಎದುರಾಗಬಹುದು. ಬಹುಶಃ ಮುಂದಾಲೋಚನೆಯನ್ನು ಮಾಡಿದ ಜ್ಯೋತಿ ರೈ ಅವರು ಕಾಮೆಂಟ್ ಸೆಕ್ಷನ್ ಅನ್ನು ಆಫ್ ಮಾಡಿರಬಹುದು ಅನ್ನೋದು ಫ್ಯಾನ್ ಗಳ ಅಭಿಪ್ರಾಯ.
SeethaRama Serial: ಡಾ. ಅನಂತ ಲಕ್ಷ್ಮೀ ಮುಂದೆ ಸಿಹಿ ಜನ್ಮ ರಹಸ್ಯ ಬಯಲು; ಮಹಾಸತ್ಯ ಹೇಳಿ ಬಿಟ್ಲು ಸೀತಾ