Anushka Shetty: ಅನುಷ್ಕಾ ಶೆಟ್ಟಿ ಬೇಕಾದ್ರೆ 50 ಲಕ್ಷ ? ಮ್ಯಾನೇಜರ್ ಆಟ ಬಯಲು, ಶಾಕ್ ನಲ್ಲಿ ಅಭಿಮಾನಿಗಳು

Written by Soma Shekar

Published on:

---Join Our Channel---

Anushka Shetty: ಬಹುಭಾಷಾ ನಟಿ, ದಕ್ಷಿಣ ಸಿನಿಮಾಗಳ ಸ್ಟಾರ್ ನಟಿ ಅನುಷ್ಕಾ ಶೆಟ್ಟಿ (Anushka Shetty) ಪ್ರಸ್ತುತ ಸಿನಿಮಾಗಳಲ್ಲಿ ಅಪರೂಪಕ್ಕೊಮ್ಮೆ ಎನ್ನುವಂತೆ ನಟಿಸುತ್ತಿದ್ದಾರೆ.‌ ನಟಿಗೆ ಮೊದಲಿನ ಹಾಗೆ ಬೇಡಿಕೆ ಇಲ್ಲ ಎನ್ನುವ ಮಾತುಗಳು ಸಹಾ ಕೇಳಿ ಬಂದಿದೆ. ಆದರೆ ಈಗ ಹೊಸದೊಂದು ಶಾಕಿಂಗ್ ವಿಚಾರವು ಹೊರ ಬಂದಿದೆ. ಅದೇನೆಂದರೆ ನಟಿಯ ಕಾಲ್‌ ಶೀಟ್‌ ವಿಚಾರದಲ್ಲಿ ಮೋಸ ಮಾಡಿರುವ ಸಂಗತಿ ಬಹಿರಂಗವಾಗಿದೆ.

ಹೌದು, ಅನುಷ್ಕಾ ಅವರ ಕಾಲ್ ಶೀಟ್ ಕೊಡಿಸುವುದಾಗಿ ನಿರ್ಮಾಪಕರಿಗೆ ಐವತ್ತು ಲಕ್ಷ ವಂಚನೆ ಮಾಡಿರುವ ಘಟನೆಯು ಸುದ್ದಿಯಾಗಿದೆ. ಚಿತ್ರ ನಿರ್ಮಾಪಕ ಲಕ್ಷ್ಮಣ್ ಚಾರಿ (Lakshman Chari) ಅವರು ಅನುಷ್ಕಾ ಅವರ ಮ್ಯಾನೇಜರ್‌ ಎಲ್ಲಾ ರೆಡ್ಡಿಯಿಂದ ಮೋಸ ಹೋಗಿದ್ದಾರೆ ಎಂದು ಹೇಳಲಾಗಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಈ ವಿಚಾರವೀಗ ವೈರಲ್ ಆಗಿದೆ.

ವಿಶ್ವಕರ್ಮ ಕ್ರಿಯೇಷನ್ಸ್ ಮುಖ್ಯಸ್ಥ ಹಾಗೂ ನಿರ್ಮಾಪಕ ಆಗಿರುವ ಲಕ್ಷ್ಮಣ್ ಚಾರಿ ಅವರು ಮೋಸ ಹೋಗಿದ್ದು, ಇವರಿಂದ ನಟಿ ಅನುಷ್ಕಾ ಮ್ಯಾನೇಜರ್‌ ಅನುಷ್ಕಾ ಮತ್ತು ಸಂಗೀತ ನಿರ್ದೇಶಕ ಮಣಿಶರ್ಮಾ ಅವರ ಡೇಟ್ಸ್ ಕೊಡಿಸುವುದಾಗಿ 51 ಲಕ್ಷ ಹಣ ಪಡೆದಿದ್ದಾರೆ ಎನ್ನಲಾಗಿದೆ. ಆದರೆ ತಾನು ಮೋಸ ಹೋದನೆಂದು ತಿಳಿದ ನಿರ್ಮಾಪಕರು ಈಗ ದೂರು ನೀಡಿದ್ದಾರೆ.

ಯಲ್ಲಾ ರೆಡ್ಡಿ (Yella Reddy) ಹಲವು ಬಾರಿ ಲಕ್ಷ್ಮಣ್ ಅವರನ್ನು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದರು, ನಟಿ ಅನುಷ್ಕಾ ಅವರ ಪರಿಚಯ ಮಾಡುವುದಾಗಿ ನಂಬಿಸಿ, ಮೋತಿ ಮಹಲ್ ಹೋಟೆಲ್‌ ನಲ್ಲಿ ಹಲವರಿಗೆ ಪರಿಚಯ ಮಾಡಿಕೊಟ್ಟಿದ್ದರು ನ್ನಲಾಗಿದೆ‌‌. ಕೊನೆಗೆ ಎಲ್ಲಾ ರೆಡ್ಡಿ ಮೋಸ ಮಾಡಿದ್ದಾನೆಂದು ತಿಳಿದ ನಿರ್ಮಾಪಕರು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. 

Anchor Anasuya: ಶೋ ನಲ್ಲೇ ಚಿಕ್ಕ ಹುಡುಗನ ತುಟಿಗೆ ಕಿಸ್; ಅನಸೂಯಾ ಮೇಲೆ ಸಿಡಿದೆದ್ದ ಗಾಯಕಿ ಚಿನ್ಮಯಿ

Leave a Comment