Aishwarya Rai : ಮಗಳ ಬರ್ತಡೇಗೂ ಬರ್ಲಿಲ್ಲ ಅಭಿಷೇಕ್ ಬಚ್ಚನ್: ಹರಡಿದ್ದ ಸುದ್ದಿಗಳೇ ನಿಜವಾಯ್ತಾ

Written by Soma Shekar

Published on:

---Join Our Channel---

Aishwarya Rai : ಕಳೆದ ಒಂದಷ್ಟು ತಿಂಗಳುಗಳಿಂದಲೂ ಬಾಲಿವುಡ್ ನಟಿ, ಮಾಜಿ ಮಿಸ್ ವರ್ಲ್ಡ್ ಐಶ್ವರ್ಯಾ ರೈ (Aishwarya Rai) ಮತ್ತು ನಟ ಅಭಿಷೇಕ್ ಬಚ್ಚನ್ ವಿಚ್ಚೇದನದ ವಿಚಾರ ಮಾದ್ಯಮಗಳ ಪ್ರಮುಖ ಸುದ್ದಿಗಳಲ್ಲಿ ಸ್ಥಾನವನ್ನು ಪಡೆದಿದೆ. ಈಗ ಐಶ್ವರ್ಯ ರೈ ಅವರು ತಮ್ಮ ಮುದ್ದಿನ ಮಗಳು ಆರಾಧ್ಯಳ (Aradhya) ಹುಟ್ಟುಹಬ್ಬದ ಸಂಭ್ರಮದಲ್ಲಿ ಖುಷಿಯಿಂದ ಕಾಲವನ್ನು ಕಳೆದಿದ್ದಾರೆ. ಮಗಳ ಜನ್ಮದಿನವನ್ನು ನಟಿ ಬಹಳ ವಿಶೇಷವಾಗಿ ಆಚರಿಸಿದ್ದು ಫೋಟೋಗಳು ಈಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ಮಗಳು ಆರಾಧ್ಯ ಬರ್ತಡೇ ಖುಷಿಯಲ್ಲಿ, ಈ ಸಂಭ್ರಮದಲ್ಲಿ ನಟ ಅಭಿಷೇಕ್ ಬಚ್ಚನ್ (Abhishek Bachchan) ಅವರು ಭಾಗಿಯಾಗದೇ ಇರುವುದು ಎಲ್ಲರ ಗಮನವನ್ನು ಸೆಳೆದಿದೆ. ವೈರಲ್ ಆಗಿರುವಂತಹ ಫೋಟೋಗಳಲ್ಲಿ ಅಭಿಷೇಕ್ ಎಲ್ಲೂ ಕಾಣದೇ ಇರವುದನ್ನು ನೋಡಿದ ನಂತರ ಇದು ಈಗ ಚರ್ಚೆಯ ವಿಷಯವಾಗಿ ಬದಲಾಗಿದೆ. ತಮ್ಮ ಮುದ್ದು ಮಗಳ ಜನ್ಮದಿನಕ್ಕೂ ಬಾರದಷ್ಟು ಅಭಿಷೇಕ್ ಬ್ಯುಸಿ ಇದ್ದಾರಾ ಎನ್ನುವುದು ನೆಟ್ಟಿಗರ ಪ್ರಶ್ನೆಯಾಗಿದೆ.

ಅಲ್ಲದೇ ಅಭಿಷೇಕ್ ಅವರ ಅನುಪಸ್ಥಿತಿ ನೋಡಿದ ಜನರು ಈಗ ಮತ್ತೊಮ್ಮೆ ಅಭಿಷೇಕ್ ಮತ್ತು ಐಶ್ವರ್ಯಾಗೆ ಡಿವೋರ್ಸ್ ಆಗಿದ್ಯಾ? ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಐಶ್ವರ್ಯಾ ಶೇರ್ ಮಾಡಿದ ಪೋಸ್ಟ್ ನಲ್ಲಿ ಆರಾಧ್ಯ ತಮ್ಮ ಅಜ್ಜ ದಿವಂಗತ ಕೃಷ್ಣರಾಜ್ ರೈ ಫೋಟೋಗೆ ಗೌರವದಿಂದ ನಮಸ್ಕರಿಸಿದ್ದಾರೆ. ಮತ್ತೊಂದು ಫೋಟೋದಲ್ಲಿ ಬೃಂದಾ ರೈ ಜೊತೆ ಆರಾಧ್ಯ ಕಾಣಿಸಿಕೊಂಡಿದ್ದಾರೆ.‌

ಐಶ್ವರ್ಯ ಮಗಳಿಗೆ ಶುಭಾಶಯ ತಿಳಿಸುತ್ತಾ, ನನ್ನ ಮಗಳಿಗೆ ಹುಟ್ಟುಹಬ್ಬದ ಶುಭಾಶಯಗಳು. ನನ್ನ ಜೀವನದಲ್ಲಿ ಈ ಇಬ್ಬರೂ ಶಾಶ್ವತ ಪ್ರೀತಿ, ಅಪ್ಪ- ಅಜ್ಜ ಮತ್ತು ನನ್ನ ಪ್ರೀತಿಯ ಆರಾಧ್ಯ, ನೀನು ನನ್ನ ಹೃದಯವೆಂದು ಬರೆದುಕೊಂಡಿದ್ದಾರೆ. ಆರಾಧ್ಯ ಜನ್ಮದಿನದಲ್ಲಿ ಬಚ್ಚನ್ ಕುಟುಂಬದ ಯಾರೊಬ್ಬರೂ ಕೂಡಾ ಹಾಜರಿಲ್ಲದೇ ಇರುವುದು ಈಗ ಹೊಸದೊಂದು ಚರ್ಚೆಗೆ ಕಾರಣವಾಗಿದೆ.

A R Rahman Divorce : ಎ ಆರ್ ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ? ಲಾಯರ್ ಕೊಟ್ರು ಸ್ಪಷ್ಟನೆ

Leave a Comment