Bigg Boss: ನಾನು ಇನ್ಮುಂದೆ ಬಿಗ್ ಬಾಸ್ ನಿರೂಪಣೆ ಮಾಡಲ್ಲ; ಸ್ಟಾರ್ ನಟನ ದೃಢ ನಿರ್ಧಾರಕ್ಕೆ ಫ್ಯಾನ್ಸ್ ಶಾಕ್

Written by Soma Shekar

Published on:

---Join Our Channel---

Bigg Boss: ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಎನ್ನುವ ಹೆಗ್ಗಳಿಕೆಯನ್ನು ಪಡೆದಿದೆ ಬಿಗ್ ಬಾಸ್ (Bigg Boss) ರಿಯಾಲಿಟಿ ಶೋ. ಹಿಂದಿಯಿಂದ ಆರಂಭವಾದ ಈ ಕಾರ್ಯಕ್ರಮ ಇಂದು ದೇಶದ ವಿವಿಧ ಭಾಷೆಗಳಲ್ಲಿ ಪ್ರಸಾರ ಕಂಡು ಪ್ರಾದೇಶಿಕ ಭಾಷೆಗಳಲ್ಲಿಯೂ ಸಾಕಷ್ಟು ಹೆಸರನ್ನು ಮಾಡಿದೆ. ಬಿಗ್ ಬಾಸ್ ಶೋ ನ ಅಭಿಮಾನಿಗಳ ಜೊತೆಗೆ ಅದನ್ನ ಟೀಕೆ ಮಾಡುವವರ ಸಂಖ್ಯೆ ಸಹಾ ಕಡಿಮೆ ಏನಿಲ್ಲ.

ತಮಿಳಿನಲ್ಲಿ ಬಿಗ್ ಬಾಸ್ (Bigg Boss Tamil) ಈಗಾಗಲೇ ಏಳು ಯಶಸ್ವಿ ಸೀಸನ್ ಗಳನ್ನ ಮುಗಿಸಿದೆ. ಇಲ್ಲಿ ಏಳು ಸೀಸನ್ ಗಳನ್ನು ಸಹಾ ಹಿರಿಯ ನಟ ಕಮಲ ಹಾಸನ್ ಅವರೇ ನಿರೂಪಣೆ ಮಾಡಿಕೊಂಡು ಬರುತ್ತಿದ್ದಾರೆ. ಈಗ ಎಂಟನೇ ಸೀಸನ್ ಆರಂಭಕ್ಕೆ‌ ಭರದಿಂದ ಸಿದ್ಧತೆಗಳು ನಡೆಯುವಾಗಲೇ ಒಂದು ಶಾಕಿಂಗ್ ಸುದ್ದಿ ಹೊರ ಬಂದಿದೆ.

ಹೌದು, ನಟ ಕಮಲಹಾಸನ್ (Kamal Haasan) ಅವರು ಬಿಗ್ ಹಾಸ್ ಕಾರ್ಯಕ್ರಮವನ್ನು ನಿರೂಪಣೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಹೊಸ ಸೀಸನ್ ಆರಂಭಕ್ಕೆ ದಿನಗಳು ಹತ್ತಿರುವಾಗುವಾಗಲೇ ನಟ ತಮ್ಮ ಅಭಿಮಾನಿಗಳಿಗೆ ತಮ್ಮ‌ ಇಂತಹ ನಿರ್ಧಾರ ತಿಳಿಸಿ ಶಾಕ್ ನೀಡಿದ್ದಾರೆ.

ಕಮಲ ಹಾಸನ್ ಅವರು ಈ ಬಾರಿ ತನಗೆ ಬಿಗ್ ಬಾಸ್ ಕಾರ್ಯಕ್ರಮವನ್ನು ನಿರೂಪಣೆ ಮಾಡಲಾಗುವುದಿಲ್ಲವೆಂದು ಸೋಶಿಯಲ್ ಮೀಡಿಯಾದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡು ತಿಳಿಸಿದ್ದಾರೆ. ಇದು ಪ್ರೇಕ್ಷಕರಿಗೆ ಬೇಸರ ಉಂಟು ಮಾಡಿದೆ. ಇದೇ ವೇಳೆ ಕಮಲ ಹಾಸನ್ ಅವರ ಜಾಗಕ್ಕೆ ಬೇರೆ ಯಾರು ಬರಲಿದ್ದಾರೆ ಎನ್ನುವ ಕುತೂಹಲ ಸಹಾ ಮೂಡಿಸಿದೆ.

Vinesh Phogat: ಅನರ್ಹತೆ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ಸುದ್ದಿ; ವಿನೇಶ್ ಫೋಗಟ್ ಆಸ್ಪತ್ರೆಗೆ ದಾಖಲು


Leave a Comment