Raj B Shetty : ಅವರಿಗಾಗಿ ಬಾಲಿವುಡ್ ಸಿನಿಮಾ ಒಪ್ಪಿಕೊಂಡೆ, ರಾಜ್ ಬಿ ಶೆಟ್ಟಿಗೆ ಸ್ಪೂರ್ತಿಯಾದ ಆ ವ್ಯಕ್ತಿ ಯಾರು?

Written by Soma Shekar

Published on:

---Join Our Channel---

Raj B Shetty : ಸ್ಯಾಂಡಲ್ವುಡ್ ನಲ್ಲಿ ರಾಜ್ ಬಿ ಶೆಟ್ಟಿ (Raj B Shetty) ಅವರ ಹೆಸರಿಗೆ ಖಂಡಿತ ಪ್ರತ್ಯೇಕ ಪರಿಚಯದ ಅಗತ್ಯ ಇಲ್ಲ.‌ ಒಂದು ಮೊಟ್ಟೆಯ ಕಥೆ ಮತ್ತು ಗರುಡ ಗಮನ ವೃಷಭ ವಾಹನದಂತಹ ಸಿನಿಮಾಗಳಿಂದ ಭರ್ಜರಿ ಯಶಸ್ಸು ಮತ್ತು ಜನಪ್ರಿಯತೆಯನ್ನು ಪಡೆದುಕೊಂಡಿರುವ ಅವರು ಇತ್ತೀಚಿಗೆ ಟೋಬಿ ಸಿನಿಮಾದ ಮೂಲಕ ಗಮನ ಸೆಳೆದಿದ್ದರು.  ನಟ ಮತ್ತು ನಿರ್ದೇಶಕನಾಗಿ ಛಾಪನ್ನು ಮೂಡಿಸಿರುವ ಇವರ ಸಿನಿಮಾಗಳಿಗೆ ವಿಶೇಷ ಬೇಡಿಕೆ ಇದೆ.

ರಾಜ್ ಬಿ ಶೆಟ್ಟಿ ಅವರು ಕನ್ನಡ ಮಾತ್ರವೇ ಅಲ್ಲದೇ ಈಗಾಗಲೇ ಮಲೆಯಾಳಂ ಸಿನಿಮಾ ರಂಗಕ್ಕೆ ಎಂಟ್ರಿಯನ್ನು ನೀಡಿದ್ದಾರೆ. ಮಲೆಯಾಳಂ ನ ಸ್ಟಾರ್ ನಟ ಮಮ್ಮುಟ್ಟಿ (Mammooty) ಜೊತೆಯಲ್ಲಿ ಟರ್ಬೊ ಸಿನಿಮಾದಲ್ಲಿ ನಟಿಸುತ್ತಿರುವ ರಾಜ್ ಬಿ ಶೆಟ್ಟಿ ಅವರು ಈಗ ಮಾಲಿವುಡ್ ನಂತರ ಬಾಲಿವುಡ್ ಗೆ ಎಂಟ್ರಿಯನ್ನು ನೀಡೋದಕ್ಕೆ ಸಜ್ಜಾಗಿದ್ದು, ಬಾಲಿವುಡ್ ಸಿನಿಮಾಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಬಾಲಿವುಡ್ ಸಿನಿಮಾ ನಿರ್ದೇಶಕ ಅನುರಾಗ್ ಕಶ್ಯಪ್ (Anurag Kashyap) ಅವರ ಸಿನಿಮಾದಲ್ಲಿ ಅತಿಥಿ ಪಾತ್ರವನ್ನು ಮಾಡಲು ಒಪ್ಪಿರುವ ರಾಜ್ ಬಿ ಶೆಟ್ಟಿ ಅವರು ತಾನು ಈ ಸಿನಿಮಾ ಮಾಡಲು ಓಕೆ ಹೇಳಿದ್ದು ಯಾಕೆ ಎನ್ನುವುದನ್ನು ತಿಳಿಸಿದ್ದಾರೆ. ನಾನು ಈ ಪಾತ್ರವನ್ನು ಮುಖ್ಯವಾಗಿ ಅನುರಾಗ್ ಕಶ್ಯಪ್‌ ಅವರಿಗಾಗಿ ಮಾಡುತ್ತಿದ್ದೇನೆ, ಅವರು ನನಗೆ ದೊಡ್ಡ ಸ್ಫೂರ್ತಿಯಾಗಿದ್ದಾರೆ.

ನಾನು ನಿರ್ದೇಶಕನಾಗಬೇಕೆಂದು ಆಶಿಸಿದಾಗ, ಕಶ್ಯಪ್ ಅವರ ಸಿನಿಮಾಗಳು ನನಗೆ  ಸ್ಫೂರ್ತಿಯಾದವು ಎಂದಿದ್ದಾರೆ. ಈ ಹಿಂದೆ ಗರುಡ ಗಮನ ವೃಷಭ ವಾಹನ ಸಿನಿಮಾ ಬಂದಾಗ ಅನುರಾಗ್ಯ ಕಶ್ಯಪ್ ಆ ಸಿನಿಮಾವನ್ನು ಹಾಡಿ ಹೊಗಳಿದ್ದು ಮಾತ್ರವೇ ಅಲ್ಲದೇ ಸಿನಿಮಾಕ್ಕೆ ನಾಲ್ಕೂವರೆ ಸ್ಟಾರ್ ರೇಟಿಂಗ್ ಅನ್ನು ಸಹಾ ನೀಡಿದ್ದರು. ಈಗ ಅವರ ಸಿನಿಮಾ ಎಂದಾಗ ನಾನು ತಕ್ಷಣ ಒಪ್ಪಿಕೊಂಡೆ ಎಂದು ರಾಜ್ ಬಿ ಶೆಟ್ಟಿ ಹೇಳಿದ್ದಾರೆ.

Sudheer Babu: ಪ್ರಭಾಸ್ ನ ಜೋಕರ್ ಅಂದ ಬಾಲಿವುಡ್ ನಟನ ಗ್ರಹಚಾರ‌ ಬಿಡಿಸಿದ ತೆಲುಗು ನಟ‌ ಸುಧೀರ್ ಬಾಬು

Leave a Comment