Allu Arjun : ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಪ್ರಸ್ತುತ ತಮ್ಮ ಪುಷ್ಪ 2 (Pushpa 2) ಸಿನಿಮಾದ ವಿಚಾರವಾಗಿ ಸಾಕಷ್ಟು ಬ್ಯುಸಿಯಾಗಿದ್ದಾರೆ. ಭಾರೀ ನಿರೀಕ್ಷೆಗಳೊಂದಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪುಷ್ಪ ದಿ ರೂಲ್ ಸಿನಿಮಾ ಡಿಸೆಂಬರ್ ನಲ್ಲಿ ಬಿಡುಗಡೆ ಕಾಣಲಿದ್ದು, ಪುಷ್ಪ 2 ಬಿಡುಗಡೆ ಹಿನ್ನೆಲೆಯಲ್ಲಿ ಕೆಲವು ಬಾಲಿವುಡ್ ಸಿನಿಮಾಗಳ ಬಿಡುಗಡೆಯನ್ನು ಸಹಾ ಮುಂದೂಡಲಾಗಿದೆ. ಅಭಿಮಾನಿಗಳು ಸಿನಿಮಾವನ್ನು ತೆರೆಯ ಮೇಲೆ ಸಾಕಷ್ಟು ಉತ್ಸುಕರಾಗಿ ಕಾಯುತ್ತಿದ್ದಾರೆ. ಸಿನಿಮಾ ಕಲೆಕ್ಷನ್ ನಲ್ಲಿ ದಾಖಲೆಗಳನ್ನು ಬರೆಯಲಿದೆ ಎನ್ನುವುದು ಬಾಕ್ಸಾಫೀಸ್ ತಜ್ಞರ ಲೆಕ್ಕಾಚಾರವಾಗಿದೆ.
ಈಗ ಇವೆಲ್ಲವುಗಳ ನಡುವೆಯೇ ಅಲ್ಲು ಅರ್ಜುನ್ ಒಂದು ಹೊಸ ದಾಖಲೆಯನ್ನೇ ಬರೆಯುವ ಮೂಲಕ ದೊಡ್ಡ ಸುದ್ದಿಯಾಗಿದ್ದಾರೆ. ಹೌದು, ಅಲ್ಲು ಅರ್ಜುನ್ ಇಡೀ ದೇಶದ ಸಿನಿಮಾ ಸ್ಟಾರ್ ಗಳಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟನಾಗಿ ಹೊಸ ದಾಖಲೆಯನ್ನು ಬರೆಯುವ ಮೂಲಕ ದಳಪತಿ ವಿಜಯ್ (Thalapathy Vijay), ಶಾರೂಖ್ ಖಾನ್ (Shah Rukh Khan), ರಜನೀಕಾಂತ್ ಮತ್ತು ಪ್ರಭಾಸ್ ರಂತಹ ನಟರನ್ನ ಹಿಂದಿಕ್ಕಿದ್ದಾರೆ.
ಹಾಗಾದರೆ ಅಲ್ಲು ಅರ್ಜುನ್ ಪುಷ್ಪ 2 ಸಿನಿಮಾಕ್ಕಾಗಿ ಪಡೆದ ಭಾರೀ ಮೊತ್ತದ ಸಂಭಾವನೆ ಎಷ್ಟು ? ಇಲ್ಲಿದೆ ವಿವರ. ರಜನೀಕಾಂತ್ ತಮ್ಮ ಸಿನಿಮಾಕ್ಕೆ 200 ಕೋಟಿ, ದಳಪತಿ ವಿಜಯ್ ತಮ್ಮ ಮುಂದಿನ ಸಿನಿಮಾಕ್ಕೆ 250 ಕೋಟಿ ಸಂಭಾವನೆ ಪಡೆದು ಅತಿ ಹೆಚ್ಚು ಸಂಭಾವನೆ ಪಡೆವ ನಟ ಆಗುತ್ತಿದ್ದಾರೆ ಎನ್ನುವಾಗಲೇ ಅಲ್ಲು ಅರ್ಜುನ್ ಅದನ್ನೆಲ್ಲಾ ಮೀರಿಸಿ ಹೊಸ ದಾಖಲೆಯನ್ನು ಬರೆದಿದ್ದಾರೆ.
ನಟ ಅಲ್ಲು ಅರ್ಜುನ್ ತಮ್ಮ ಪುಷ್ಪ ದಿ ರೂಲ್ ಸಿನಿಮಾಕ್ಕಾಗಿ ಬರೋಬ್ಬರಿ 300 ಕೋಟಿ ರೂಪಾಯಿಗಳ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ ಎನ್ನುವುದಾಗಿ ವರದಿಯಾಗಿದ್ದು ಇದು ಎಲ್ಲರಿಗೂ ಶಾಕ್ ನೀಡಿದೆ. ಹೀಗೆ ದುಬಾರಿ ಸಂಭಾವನೆ ಪಡೆದು ಅಲ್ಲು ಅರ್ಜುನ್ ಅತಿ ಹೆಚ್ಚು ಸಂಭಾವನೆ ಪಡೆದ ನಟನಾಗಿ ತಮ್ಮ ಅಭಿಮಾನಿಗಳಿಗೆ ಖುಷಿಯನ್ನು ನೀಡಿದ್ದಾರೆ.
BBK 11 : ಡಬಲ್ ಎಲಿಮಿನೇಷನ್ ಶಾಕ್; ಜೊತೆಯಾಗಿ ಹೋದವ್ರು ಜೊತೆಯಲ್ಲೇ ಹೊರ ಬಂದ್ರಾ? ಇಲ್ಲಿದೆ ಸುದ್ದಿ