Neha Gowda : ಗೊಂಬೆ ಖ್ಯಾತಿಯ ನಟಿ ನೇಹಾ ಗೌಡ ಅವರ ಸಂಭ್ರಮದ ಸೀಮಂತ, ಇಲ್ಲಿದೆ ಫೋಟೋಗಳು

Written by Soma Shekar

Published on:

---Join Our Channel---

Neha Gowda: ಲಕ್ಷ್ಮೀ ಬಾರಮ್ಮ ಧಾರಾವಾಹಿಯ ನಟಿ, ಕಿರುತೆರೆಯ ಜನಪ್ರಿಯ ನಟಿ ಗೊಂಬೆ ಖ್ಯಾತಿಯ ನಟಿ ನೇಹಾ ಗೌಡ (Neha Gowda) ಅವರು ಈಗ ತುಂಬು ಗರ್ಭಿಣಿ. ಬರುವ ಸೆಪ್ಟೆಂಬರ್ ತಿಂಗಳಲ್ಲಿ ಅವರು ತಮ್ಮ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.‌ ನೇಹಾ ಅವರ ಜೀವನದಲ್ಲಿ ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾಗುತ್ತಿದೆ ಅವರ ಸೀಮಂತ ಶಾಸ್ತ್ರ. ‌

ಹೌದು, ನೇಹಾ ಗೌಡಾ (Neha Gowda) ಅವರ ಸೀಮಂತ ಕಾರ್ಯಕ್ರಮ (, baby shower) ವು ಬಹಳ ಸಂಭ್ರಮದಿಂದ ಮತ್ತು ಅದ್ದೂರಿಯಾಗಿ ನಡೆದಿದೆ.‌ ಈ ಕಾರ್ಯಕ್ರಮದಲ್ಲಿ ಕಿರುತೆರೆಯ ಕಲಾವಿದರ ದೊಡ್ಡ ದಂಡೇ ಹರಿದು ಬಂದಿತ್ತು.

ನಟಿಯ ಸೀಮಂತದ ಫೋಟೋಗಳೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಿರುತೆರೆಯ ಒಂದಷ್ಟು ನಟ ನಟಿಯರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಸೀಮಂತದ ಫೋಟೋಗಳನ್ನ ಶೇರ್ ಮಾಡಿಕೊಂಡಿದ್ದಾರೆ‌.

ಚೈತ್ರಾ ವಾಸುದೇವನ್, ನಮ್ರತಾ ಗೌಡ ಮೊದಲಾದ ನಟಿಯರು ನೇಹಾ ಗೌಡ ಅವರ ಸೀಮಂತದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು ನೆಟ್ಟಿಗರು ಮತ್ತು ಅಭಿಮಾನಿಗಳು ಮೆಚ್ಚುಗೆಗಳನ್ನು ನೀಡಿದ್ದಾರೆ.

ಲಕ್ಷ್ಮೀ ಬಾರಮ್ಮ ಸೀರಿಯಲ್ ಖ್ಯಾತಿಯ ಮತ್ತೊಬ್ಬ ನಟಿ ಕವಿತಾ ಗೌಡ ಸಹಾ ಸೀಮಂತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ‌ಕವಿತಾ ಗೌಡ ಅವರು ಸಹಸ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಹಿರಿಯ ನಟಿ ತಾರಾ ಅನುರಾಧ ಅವರು ಸಹಾ ಈ ಸುಂದರ ಕ್ಷಣಗಳಿಗೆ ಸಾಕ್ಷಿಯಾಗಿದ್ದಾರೆ. ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ಅವರು ಸಹಾ ಸೀಮಂತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಅನೇಕರು ನೇಹಾ ಅವರಿಗೆ ಶುಭ ಹಾರೈಸಿದ್ದಾರೆ.

ಕೆಲವೇ ದಿನಗಳ ಹಿಂದೆ ನಟಿ ಮಿಲನಾ ನಾಗರಾಜ್ ಅವರ ಸೀಮಂತ ಕಾರ್ಯಕ್ರಮ ಸಹಾ ಅದ್ದೂರಿಯಾಗಿ ನಡೆದಿತ್ತು. ಹರ್ಷಿಕಾ ಪೂಣಚ್ಚ, ಕವಿತಾ ಗೌಡ, ನೇಹಾ ಗೌಡ ಹೀಗೆ ಸ್ಯಾಂಡಲ್ವುಡ್ ನ ನಟಿಯರು ತಮ್ಮ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.‌

Leave a Comment