Lok Sabha Election: ಮತದಾನ (Voting) ಅನ್ನೋದು ಪ್ರತಿಯೊಬ್ಬ ಪ್ರಜೆಯ ಹಕ್ಕು ಮಾತ್ರವೇ ಅಲ್ಲದೇ ಅದೊಂದು ಜವಾಬ್ದಾರಿ ಸಹಾ ಆಗಿರುತ್ತೆ. ನಿನ್ನೆ ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ (Lok Sabha Election) ನಡೆದಿದೆ. ಇದರಲ್ಲಿ ಬೆಂಗಳೂರು ನಗರದಲ್ಲಿ ಅತಿ ಕಡಿಮೆ ಮತದಾನ ದಾಖಲಾಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ 67.28 % ಮತದಾನವಾಗಿದ್ದರೆ, ಬೆಂಗಳೂರು ಕೇಂದ್ರದಲ್ಲಿ 52.81 % ಮತ್ತು ಬೆಂಗಳೂರು ಉತ್ತರದಲ್ಲಿ 54.42 % ಮತದಾನ ದಾಖಲಾಗಿದೆ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ವಲಸೆ ನಿವಾಸಿಗಳ ಮೇಲೆ ಅನೇಕರು ಸಿಟ್ಟಾಗಿದ್ದಾರೆ.
ಪ್ರತಿ ಬಾರಿಯಂತೆಯೇ ಈ ಬಾರಿ ವಲಸಿಗರು (Migrants) ಮತದಾನ ಮಾಡಿಲ್ಲ ಎನ್ನಲಾಗಿದೆ. ಬೆಂಗಳೂರಿನ (Bengaluru) ಮತದಾರರ ಪಟ್ಟಿಯಲ್ಲಿ ಹೆಸರಿದ್ದರೂ, ಇಲ್ಲಿ ಮತ ನೀಡುವ ಹಕ್ಕನ್ನ ಹೊಂದಿದ್ದರೂ ಸಹಾ ಮತ ನೀಡಿಲ್ಲ ಎನ್ನುವ ವಿಚಾರವಾಗಿ ಅನೇಕರಿಂದ ಅಸಮಾಧನ ಹೊರ ಬಂದಿದೆ. ಹೀಗೆ ಮತದಾನದ ಹಕ್ಕು ಇದ್ದರೂ ತಮ್ಮ ಹೊಣೆಗಾರಿಕೆ ನಿರ್ವಹಿಸದೇ ನಿರ್ಲಕ್ಷ್ಯ ಮಾಡಿದವರ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತಾ ಫ್ಲೆಕ್ಸ್ ಮತ್ತು ಬ್ಯಾನರ್ ಗಳನ್ನು ಹಾಕಲಾಗಿದ್ದು, ಚುನಾವಣಾ ಆಯೋಗ ಅಷ್ಟೆಲ್ಲಾ ಪ್ರಚಾರ ಮಾಡಿದರೂ ಬದುಕಿದ್ದರೂ ಸತ್ತಂತೆ ವರ್ತಿಸಿದ ಸತ್ತ ಪ್ರಜೆಗಳಿಗೆ ನಮ್ಮ ಶ್ರದ್ಧಾಂಜಲಿ ಅಂತ ಬ್ಯಾನರ್ ಹಾಕಲಾಗಿದೆ.
ನಗರದ ಮೂಲಭೂತ ಸೌಕರ್ಯಗಳನ್ನು ಪಡೆದಿದ್ರೂ ಮತದಾನದ ಬೆಲೆ ಏನಂತ ಗೊತ್ತಿಲ್ಲದೇ ನಿರ್ಲಕ್ಷ್ಯ ತೋರಿದ್ದಾರೆ ಅಂತ ಆಕ್ರೋಶ ವ್ಯಕ್ತವಾಗಿದೆ. ಇದೇ ಕಾರಣದಿಂದ ನಗರದ ಹಲವು ಕಡೆಗಳಲ್ಲಿ ಸತ್ ಪ್ರಜೆಗಳು ಎಂದು ಬ್ಯಾನರ್ ನಲ್ಲಿ ಬರೆಯಲಾಗಿದ್ದು, ಮತದಾನ ಮಾಡದವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಎಂದು ಸಹಾ ಬ್ಯಾನರ್ ನಲ್ಲಿ ಬರೆಯಲಾಗಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ಇದು ವೈರಲ್ ಆಗುತ್ತಿದೆ.